ಹಳೆಗನ್ನಡ ಸಾಹಿತ್ಯ ಉಳಿವಿಗೆ ಶ್ರಮ ಅಗತ್ಯ: ಡಾ. ವಿಷ್ಣು ಭಟ್

KannadaprabhaNewsNetwork |  
Published : Oct 14, 2026, 02:30 AM IST
ಚಿತ್ರ: ಹಿರಿಯ ಸಾಹಿತಿ ಡಾ. ಪಾದೇಕಲ್ಲು ವಿಷ್ಣು ಭಟ್ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಹಾಗೂ ಟಿ.ಎ.ಎನ್ ಖಂಡಿಗೆ ಅವರಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಪ್ರದಾನ  ಮಾಡಲಾಯಿತು. | Kannada Prabha

ಸಾರಾಂಶ

ಸಮಾಜ ಮಂದಿರದಲ್ಲಿ ಮೂಡುಬಿದಿರೆ ವರ್ಧಮಾನ ಪ್ರಶಸ್ತಿ ಪೀಠದ 46 ನೇ ವರ್ಷದ 2026ನೇ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿ ಹಾಗೂ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವರ್ಧಮಾನ ಸಾಹಿತ್ಯ ಪ್ರಶಸ್ತಿ

ಮೂಡುಬಿದಿರೆ: ಅನೇಕ ಸವಾಲುಗಳ ಹೊಸತನದ ಇಂದಿನ ಯುಗದಲ್ಲಿ ಹಳೆಗನ್ನಡದ ಓದು ಮತ್ತು ಸಾಹಿತ್ಯದ ಭವಿಷ್ಯ ಕುರಿತಂತೆ ಅನೇಕ ರೀತಿಯ ಆತಂಕಗಳಿವೆ. ಹಳೆಗನ್ನಡದ ಸಾಹಿತ್ಯದ ಓದಿಗೆ ಸಂಬಂಧಿಸಿ ವಿಶೇಷ ತರಬೇತಿಯ ಅಗತ್ಯವಿದ್ದು ಪ್ರಾಚೀನ ಸಾಹಿತ್ಯ ಮತ್ತು ಇತಿಹಾಸ, ಪರಂಪರೆ ಮರೆಯದಂತೆ ಅವುಗಳನ್ನು ಉಳಿಸಿ ಬೆಳೆಸುವ ಕುರಿತು ಆಸಕ್ತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಹಿರಿಯ ಸಾಹಿತಿ, ಉಡುಪಿಯ ಡಾ. ಪಾದೇಕಲ್ಲು ವಿಷ್ಣು ಭಟ್ ಹೇಳಿದರು.

ಮಂಗಳವಾರ ಇಲ್ಲಿನ ಸಮಾಜ ಮಂದಿರದಲ್ಲಿ ಮೂಡುಬಿದಿರೆ ವರ್ಧಮಾನ ಪ್ರಶಸ್ತಿ ಪೀಠದ 46 ನೇ ವರ್ಷದ 2026ನೇ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿ ಹಾಗೂ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವರ್ಧಮಾನ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿದ ಮೂಡುಬಿದಿರೆಯ ಟಿ.ಎ.ಎನ್. ಖಂಡಿಗೆ ಮಾತನಾಡಿ, ಬರವಣಿಗೆ ಲೌಕಿಕ ತಪಸ್ಸು ಎಂದರು.

ಪ್ರಶಸ್ತಿ ಪ್ರದಾನ: ಸಮಾಜ ಮಂದಿರ ಸಭಾದ 79ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವಕ್ಕೆ ಪೂರಕವಾಗಿ ನಡೆದ ಸಮಾರಂಭದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ ವರ್ಧಮಾನ ಪ್ರಶಸ್ತಿ ಪೀಠದ ಕಾರ್ಯಾಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ ಪ್ರಶಸ್ತಿ ಪ್ರದಾನಗೈದರು. ವರ್ಧಮಾನ ಸಾಹಿತ್ಯ ಪ್ರಶಸ್ತಿ ಹಾಗೂ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಿಗೆ ಕ್ರಮವಾಗಿ 25 ಮತ್ತು 15 ಸಾವಿರ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾಜ ಮಂದಿರ ಸಭಾದ ಪರವಾಗಿಯೂ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಯಿತು.

ಮೃಗೀಯ ಗುಣ ಅಳಿಯಲಿ: ಮೂಡುಬಿದಿರೆ ಶ್ರೀ ಜೈನ ಮಠದ ಭಟ್ಟಾರಕ ಶ್ರೀಗಳು ಆಶೀರ್ವಚನದಲ್ಲಿ, ಸಂಘರ್ಷದ ಇಂದಿನ ದಿನಗಳಲ್ಲಿ ಮನಸ್ಸು ಕಟ್ಟುವ ಮತ್ತು ಮೃಗೀಯ ಗುಣ ಅಳಿಸುವ ಕೆಲಸಸಾಹಿತಿಗಳು ಮತ್ತು ಸಾಹಿತ್ಯದಿಂದಾಗಬೇಕು ಎಂದರು.

ಮಾಜಿ ಸಚಿವ, ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯ ಚಂದ್ರ ಜೈನ್ ಶುಭಾಶಂಸನೆಗೈದರು. ಪೀಠದ ಪ್ರಧಾನ ನಿರ್ದೇಶಕ ಡಾ. ನಾ. ಮೊಗಸಾಲೆ ಪ್ರಾಸ್ತಾವಿಕ ಮಾತುಗಳನ್ನಾದರು. ಸಹನಿರ್ದೇಶಕ ಮುನಿರಾಜ ರೆಂಜಾಳ ನಿರೂಪಿಸಿದರು. ಪೀಠದ ಸಹ ನಿರ್ದೇಶಕ ಸದಾನಂದ ನಾರಾವಿ ಸಮ್ಮಾನ ಪತ್ರ ಪತ್ರವಾಚಿಸಿದರು. ಕೋಶಾಧ್ಯಕ್ಷ ನೇಮಿರಾಜ ಶೆಟ್ಟಿ ವಂದಿಸಿದರು. ಪೀಠದ ಉಪಾಧ್ಯಕ್ಷರುಗಳಾದ ಡಾ. ಪುಂಡಿಕಾ ಗಣಪಯ್ಯ ಭಟ್, ಕೆ. ಶ್ರೀಪತಿ ಭಟ್, ಜಯರಾಜ ಕಂಬಳಿ, ಬಾಹುಬಲಿ ಪ್ರಸಾದ್, ಪ್ರತಾಪ್ ಕುಮಾರ್, ನಿರಂಜನ್ ಕುಮಾರ್ ಶೆಟ್ಟಿ, ಜಿನೇಂದ್ರ ಹೆಗ್ಡೆ ಹೆಚ್. ಮತ್ತಿತರರು ಉಪಸ್ಥಿತರಿದ್ದರು.ತವರು ನೆಲದ ಸಾಹಿತಿಗಳಿಗೆ ವರ್ಧಮಾನ!

ನಾಡಿನ ಮೊದಲ ಪ್ರತಿಷ್ಠಿತ ಖಾಸಗಿ ಪ್ರಶಸ್ತಿ ಎನ್ನುವ ಹಿರಿಮೆಯ ವರ್ದಮಾನ ಪ್ರಶಸ್ತಿ ಪೀಠದ ಪ್ರಶಸ್ತಿಗಳು ನಾಡಿನ 92 ಹಿರಿಯ , ಕಿರಿಯ ಸಾಹಿತಿಗಳಿಗೂ ದೊರೆತಿದೆ. ಈವರೆಗಿನ 46 ವರ್ಷಗಳ ಇತಿಹಾಸದಲ್ಲಿ ವಿಶೇಷ ಎಂಬಂತೆ ಇದೇ ಮೊದಲ ಬಾರಿಗೆ ವರ್ಧಮಾನ ಸಾಹಿತ್ಯ ಮತ್ತು ಉದಯೋನ್ಮುಖ ಹೀಗೆ ಎರಡು ಪ್ರಶಸ್ತಿಗಳೂ ಕರಾವಳಿಯ ಈ ಪ್ರಶಸ್ತಿ ಪೀಠದ ತವರು ನೆಲದ ಸಾಹಿತಿಗಳಿಗೆ ಲಭಿಸಿರುವುದು ಗಮನಾರ್ಹವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೀಸಲಾತಿ ಸರ್ಕಾರದ ಕೊಡುಗೆಯಲ್ಲ, ಸಾಂವಿಧಾನಿಕ ಸಾಧನ
ಗೌರವ, ವಿನಯ, ಕೃತಜ್ಞತೆ ಬೆಳೆಸಿಕೊಂಡು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿ: ಡಾ. ನೀಲ್ ರತನ್ ಶೆಂಡೆ