ಇಲ್ಲಿನ ಮಹಾಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ನಡೆಯುತ್ತಿರುವ 5ನೇ ವರ್ಷದ ವಿಜೃಂಭಣೆಯ ಉಡುಪಿ - ಉಚ್ಚಿಲ ದಸರಾ ಮಹೋತ್ಸವದಲ್ಲಿ ನಿತ್ಯ ಹತ್ತಾರು ಸಾವಿರ ಮಂದಿ ಆಗಮಿಸಿ, ಪೂಜೆ ಸಲ್ಲಿಸಿ, ಅನ್ನಪ್ರಸಾದವನ್ನು ಸ್ವೀಕರಿಸುತ್ತಿದ್ದಾರೆ.
ಉಚ್ಚಿಲ: ಇಲ್ಲಿನ ಮಹಾಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ನಡೆಯುತ್ತಿರುವ 5ನೇ ವರ್ಷದ ವಿಜೃಂಭಣೆಯ ಉಡುಪಿ - ಉಚ್ಚಿಲ ದಸರಾ ಮಹೋತ್ಸವದಲ್ಲಿ ನಿತ್ಯ ಹತ್ತಾರು ಸಾವಿರ ಮಂದಿ ಆಗಮಿಸಿ, ಪೂಜೆ ಸಲ್ಲಿಸಿ, ಅನ್ನಪ್ರಸಾದವನ್ನು ಸ್ವೀಕರಿಸುತ್ತಿದ್ದಾರೆ.
ನಿತ್ಯವೂ ನಡೆಯುತ್ತಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಳ್ಳುತ್ತಿವೆ. ಇಂದು ಬುಧವಾರ 4ನೇ ದಿನ ನವದುರ್ಗೆಯರಲ್ಲಿ ಕೂಷ್ಮಾಂಡ ದೇವಿ ಆರಾಧನೆ ನಡೆಯಲಿದೆ.ಮುಂಜಾನೆ ಉದಯಪೂಜೆ, ಬೆಳಗ್ಗೆ 9 ಗಂಟೆಗೆ ನಿತ್ಯ ಚಂಡಿಕಾ ಹೋಮ, ಮಧ್ಯಾಹ್ನ 12 ಕ್ಕೆ ನವದುರ್ಗೆಯರಿಗೆ ಮಹಾಮಂಗಳಾರತಿ, 12.30 ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30 ಕ್ಕೆ ಪ್ರಸಾದ ವಿತರಣೆ, 7.30 ಕ್ಕೆ ನವದುರ್ಗೆಯರಿಗೆ ರಾತ್ರಿ ಮಹಾಪೂಜೆ, 8.30 ಕ್ಕೆ ಶ್ರೀ ಕುಮಾರಿ ಕಟ್ಟೋಕ್ತ ಪೂಜೆ ನಡೆಯಲಿದೆ.ದಸರಾ ಮುಖ್ಯ ವೇದಿಕೆಯಲ್ಲಿ ಬೆಳಗ್ಗೆ 9.30 ರಿಂದ 12.15ರ ತನಕ ಭಜನಾ ಸಂಕೀರ್ತನೆ, 12.30 ರಿಂದ 2.30ರ ತನಕ ‘ಭಕ್ತಿ ಗಾನಸುಧೆ’ (ಸಿಂಫನಿ ಸಂಗೀತ, ಸುದರ್ಶನ್ ಸುವರ್ಣ ಮತ್ತು ಬಳಗ, ಉಡುಪಿ), 2.30 ರಿಂದ 4.45ರ ತನಕ ಭಜನಾ ಸಂಕೀರ್ತನೆ, 5 ರಿಂದ 5.45ರ ತನಕ ಧಾರ್ಮಿಕ ಪ್ರವಚನ, 5.45 ರಿಂದ 6.150 ತನಕ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, 6.30 ರಿಂದ 7.30 ರ ತನಕ ನೃತ್ಯ ಕಾರ್ಯಕ್ರಮ (ನಟೇಶ ನೃತ್ಯ ನಿಕೇತನ ಉಚ್ಚಿಲ, ನಿರ್ದೇಶನ: ವಿದುಷಿ ಮಂಗಳ ದೇವಾಡಿಗ), 8 ರಿಂದ 9.30 ರ ತನಕ ಭರತನಾಟ್ಯ ಕೂಚುಪುಡಿ, ಹಾಗೂ ಜಾನಪದ ನೃತ್ಯ (ನಾಟ್ಯನಿಲಯಂ ಮಂಜೇಶ್ವರ)
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.