ಮೂರ್ನಾಡು: ಹಿರಿಯ ಸಾಹಿತಿ ಬೈರಪ್ಪಗೆ ಶ್ರದ್ಧಾಂಜಲಿ

KannadaprabhaNewsNetwork |  
Published : Oct 16, 2025, 02:01 AM IST
ಚಿತ್ರ : 12ಎಂಡಿಕೆ3 : ಸಾಹಿತಿ ಎಸ್.ಎಲ್.ಬೈರಪ್ಪರಿಗೆ ಮೂರ್ನಾಡು ಕಸಾಪದಿಂದ ಶ್ರದ್ಧಾಂಜಲಿ. | Kannada Prabha

ಸಾರಾಂಶ

ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಸಾಹಿತಿ ಪದ್ಮಭೂಷಣ ಎಸ್‌.ಎಲ್‌ ಬೈರಪ್ಪ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕ ಶ್ರದ್ಧಾಂಜಲಿ ಅರ್ಪಿಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಪದ್ಮ ಭೂಷಣ ಎಸ್.ಎಲ್.ಬೈರಪ್ಪ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕ ಶ್ರದ್ಧಾಂಜಲಿ ಅರ್ಪಿಸಿತು.

ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದ ಘಟಕದ ಪದಾಧಿಕಾರಿಗಳು ಹಾಗೂ ಸಾಹಿತ್ಯಾಸಕ್ತರು ಎಸ್.ಎಲ್.ಬೈರಪ್ಪ ಅವರ ಸಾಹಿತ್ಯ ಸಾಧನೆ ಸ್ಮರಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪದ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷರಾದ ಈರಮಂಡ ಹರಿಣಿ ವಿಜಯ್ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಎಸ್.ಎಲ್.ಬೈರಪ್ಪ ಅವರು ಅಪಾರ ಕೊಡುಗೆ ನೀಡಿದ್ದಾರೆ. ಇವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.ಹಿರಿಯ ಸಾಹಿತಿ ಕಿಗ್ಗಾಲು.ಎಸ್.ಗಿರೀಶ್ ಅವರು ಶ್ರೇಷ್ಠ ಸಾಹಿತಿ ಎಸ್.ಎಲ್.ಬೈರಪ್ಪ ಅವರ ಸಾಧನೆ ಹಾಗೂ ಜೀವನ ಚರಿತ್ರೆಯನ್ನು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ವಿವರಿಸಿದರು. ಮೂರ್ನಾಡು ಹೋಬಳಿ ಘಟಕದ ಸ್ಥಾಪಕಾಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ, ಪದಾಧಿಕಾರಿಗಳಾದ ವಿಘ್ನೇಶ್ ಮೂರ್ನಾಡು, ವಿ.ಎಂ.ಧನಂಜಯ, ಪುದಿಯೊಕ್ಕಡ ರಮೇಶ್, ಮಹಾಬಲೇಶ್ವರ ಭಟ್, ಮಹಿಳಾ ಪ್ರತಿನಿಧಿ ಮೀನಾಕ್ಷಿ ಕೇಶವ, ಗೌರವ ಕಾರ್ಯದರ್ಶಿ ಕಟ್ಟೆಮನೆ ಮಹಾಲಕ್ಷ್ಮಿ, ಸಂಘಟನಾ ಕಾರ್ಯದರ್ಶಿಗಳಾದ ಕೊಂಪುಳಿರ ಮಮತ, ಅಬ್ದುಲ್ ಖಾದರ್, ಕೋಶಾಧಿಕಾರಿ ಮಡೆಯಂಡ ಸೂರಜ್, ಕಾರ್ಯದರ್ಶಿ ಅಪ್ಪಚಂಡ ಸುಚಿತ ಕಾವೇರಪ್ಪ, ಕವಯತ್ರಿ ರಮ್ಯ ಕೆ.ಜಿ, ಮಡಿಕೇರಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಮುಖಂಡರಾದ ಎಚ್.ಕೆ.ಉಮಾವತಿ, ಮರಗೋಡು ಗಣಪತಿ ಭಜನಾ ಮಂಡಳಿಯ ಪ್ರೇಮ ಗಣೇಶ್, ಸಿ.ಜೆ.ತಾರಾದೇವಿ, ಭಾನುಪ್ರಿಯ, ಮೂರ್ನಾಡು ಸಂಜೀವಿನಿ ಒಕ್ಕೂಟದ ರಮ್ಯಾ ಎಂ.ಡಿ, ಭಾರತಿ ಬಿ.ಎಲ್, ಮೂರ್ನಾಡು ಟೈಲರ್ ಸಂಘದ ಸದಸ್ಯರಾದ ರೋಸ್ಲಿ, ಡೈಸಿ ಬಿ.ಡಿ, ಅಜರುದ್ದೀನ್ ವಿ.ಯು, ಬಿ.ಪಿ.ಶಾಂತಿ ಮತ್ತಿತರರು ಹಾಜರಿದ್ದು ಎಸ್.ಎಲ್.ಬೈರಪ್ಪ ಅವರಿಗೆ ಗೌರವ ಸಲ್ಲಿಸಿದರು.ನ.6 ರಂದು ರಾಜ್ಯೋತ್ಸವ: ನಂತರ ನಡೆದ ಕಸಾಪ ಸಭೆಯಲ್ಲಿ ಮೂರ್ನಾಡು ಹೋಬಳಿ ಘಟಕದ ವತಿಯಿಂದ ನ.6 ರಂದು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ನಿರ್ಧಾರ ಕೈಗೊಳ್ಳಲಾಯಿತು.ಸಾಹಿತ್ಯ ಪರಿಷತ್ ನ ಏಳಿಗೆಗಾಗಿ ದುಡಿದ ಪ್ರಮುಖರ ಸಮ್ಮುಖದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧ ಪಡಿಸುವ ಕುರಿತು ಚರ್ಚಿಸಲಾಯಿತು. ಮೂರ್ನಾಡು ಹೋಬಳಿ ಘಟಕಕ್ಕೆ ಆರು ಗ್ರಾಮಗಳು ಸೇರಿದ್ದು, ಈ ಗ್ರಾಮಗಳ ಸಂಘ ಸಂಸ್ಥೆಗಳು, ಗ್ರಾಮ ಪಂಚಾಯಿತಿ, ಶಾಲಾ ಕಾಲೇಜುಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ರಾಜ್ಯೋತ್ಸವವನ್ನು ಅದ್ದೂರಿ ಮತ್ತು ಯಶಸ್ವಿಯಾಗಿ ಆಚರಿಸಲು ಕೈಜೋಡಿಸಬೇಕು ಎಂದು ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಮನವಿ ಮಾಡಿದರು. ಕಸಾಪ ಸದಸ್ಯ ವಿಘ್ನೇಶ್ ಮೂರ್ನಾಡು ಪ್ರಾರ್ಥಿಸಿ, ಗೌರವ ಕಾರ್ಯದರ್ಶಿ ಕಟ್ಟೆಮನೆ ಮಹಾಲಕ್ಷ್ಮಿ ಅವರು ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆ ಕಳ್ಳತನಕ್ಕೆ ಕಳ್ಳರ ವಿಫಲಯತ್ನ
ಕೇಂದ್ರ ಕಾರಾಗೃಹಕ್ಕೆ ಶಶಿಧರ ಕೋಸಂಬೆ ಭೇಟಿ