ಸಂಘ ಶತಾಬ್ದಿ: ಆರ್‌ಎಸ್‌ಎಸ್‌ ಪಥ ಸಂಚಲನ

KannadaprabhaNewsNetwork |  
Published : Oct 16, 2025, 02:01 AM IST
ಚಿತ್ರ :  12ಎಂಡಿಕೆ1 : ಸಂಘ ಶತಾಬ್ದಿ - ಆರ್ ಎಸ್ ಎಸ್ ಪಥ ಸಂಚಲನನಡೆಯಿತು.  | Kannada Prabha

ಸಾರಾಂಶ

ರಾಷ್ಟ್ರೀಯ ಸ್ವಯಂ ಸೇವಕ 100ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿ ಸಂಘದ ಘೋಷ್‌ ಸಹಿತ ಪಥಸಂಚಲನ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಷ್ಟ್ರೀಯ ಸ್ವಯಂಸೇವಕ ಸಂಘ 100ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿ ಸಂಘದ ಘೋಷ್ ಸಹಿತ ಪಥಸಂಚಲನ ನಡೆಯಿತು.

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಸ್ವಯಂಸೇವಕರು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸೇರಿ ಅಲ್ಲಿಂದ ಜೂನಿಯರ್ ಕಾಲೇಜ್ ಮುಂಭಾಗ, ಚೌಕ್, ಗಣಪತಿ ಬೀದಿ, ಮಹದೇವ ಪೇಟೆ, ಹಳೆ ಖಾಸಗಿ ಬಸ್ ನಿಲ್ದಾಣ, ಜನರಲ್ ತಿಮ್ಮಯ್ಯ ವೃತ್ತವಾಗಿ ಪಥ ಸಂಚಲನ ನಡೆದು ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡಿತು. ಬಳಿಕ ಅಲ್ಲಿ ಸಂಘದ ಪ್ರಾರ್ಥನೆ ಮತ್ತು ಧ್ವಜ ವಂದನೆಯೊಂದಿಗೆ ಕೊನೆಗೊಂಡಿತು.

ಆರ್‌ಎಸ್‌ಎಸ್‌ನ ಜಿಲ್ಲಾ ಸಂಘ ಚಾಲಕ್ ಚಕ್ಕೇರ ಮನುಕಾವೇರಪ್ಪ, ಜಿಲ್ಲಾ ಕಾರ್ಯವಾಹ ರವಿ ಕುಶಾಲಪ್ಪ, ಸಹಕಾರ್ಯವಾಹ ಕುಟ್ಟಂಡ ಮಿರನ್ ಕಾವೇರಪ್ಪ, ಮಂಗಳೂರು ವಿಭಾಗ ಸಹಕಾರ್ಯವಾಹ ಸುಭಾಷ್, ವಿಭಾಗ ಶಾರೀರಿಕ್ ಪ್ರಮುಖ್ ಡಿ.ಕೆ.ಡಾಲಿ, ವಿಭಾಗ ಸಹಸಂಪರ್ಕ ಪ್ರಮುಖ್ ಕುಟ್ಟಂಡ ಪ್ರಿನ್ಸ್ ಗಣಪತಿ, ಜಿಲ್ಲಾ ಪ್ರಮುಖರಾದ ಕೆ.ಕೆ. ದಿನೇಶ್ ಕುಮಾರ್, ಕೆ.ಕೆ. ಮಹೇಶ್ ಕುಮಾರ್, ಅರುಣ್ ಕುಮಾರ್, ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಲನ್ ಕುಮಾರ್ ಹಾಗೂ ನೂರಾರು ಸ್ವಯಂಸೇವಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ