ಬ್ಯಾಡಗಿ ಮಾರುಕಟ್ಟೆಗೆ 2 ಲಕ್ಷಕ್ಕೂ ಅಧಿಕ ಚೀಲ ಮೆಣಸಿನಕಾಯಿ ಆವಕ : ದರದಲ್ಲಿ ಮಾತ್ರ ಎಂದಿನಂತೆ ಸ್ಥಿರತೆ

KannadaprabhaNewsNetwork |  
Published : Feb 21, 2025, 12:49 AM ISTUpdated : Feb 21, 2025, 12:30 PM IST
ಮ | Kannada Prabha

ಸಾರಾಂಶ

ಕಳೆದ ಸೋಮವಾರ ಮೊದಲ ಬಾರಿಗೆ ಆವಕ 2 ಲಕ್ಷ ದಾಟಿತ್ತು. ಇದೀಗ ಗುರುವಾರವೂ ಆವಕದ ಗಡಿಯು 2 ಲಕ್ಷ ದಾಟಿದ್ದು, ದರದಲ್ಲಿ ಮಾತ್ರ ಎಂದಿನಂತೆ ಸ್ಥಿರತೆ ಕಂಡುಕೊಂಡಿದೆ. ಮಾರುಕಟ್ಟೆಯಲ್ಲಿ ಸೀಡ್ ವೆರೈಟಿ ಮೆಣಸಿನಕಾಯಿ ಪ್ರಮಾಣ ಹೆಚ್ಚಾಗಿದೆ.

ಬ್ಯಾಡಗಿ: ಸ್ಥಳೀಯ ಅಂತಾರಾಷ್ಟ್ರೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ ಮೆಣಸಿನಕಾಯಿ ಚೀಲಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಪ್ರಸಕ್ತ ವರ್ಷದ ಸೀಸನ್‌ನಲ್ಲಿ ಎರಡನೇ ಬಾರಿಗೆ 2 ಲಕ್ಷ ಚೀಲ ಮೆಣಸಿಕಾಯಿ ಆವಕವಾಗುವ ಮೂಲಕ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು.

ಕಳೆದ ಸೋಮವಾರ ಮೊದಲ ಬಾರಿಗೆ ಆವಕ 2 ಲಕ್ಷ ದಾಟಿತ್ತು. ಇದೀಗ ಗುರುವಾರವೂ ಆವಕದ ಗಡಿಯು 2 ಲಕ್ಷ ದಾಟಿದ್ದು, ದರದಲ್ಲಿ ಮಾತ್ರ ಎಂದಿನಂತೆ ಸ್ಥಿರತೆ ಕಂಡುಕೊಂಡಿದೆ. ಮಾರುಕಟ್ಟೆಯಲ್ಲಿ ಸೀಡ್ ವೆರೈಟಿ ಮೆಣಸಿನಕಾಯಿ ಪ್ರಮಾಣ ಹೆಚ್ಚಾಗಿದೆ. ಉಳಿದಂತೆ ಬ್ಯಾಡಗಿ ತಳಿ ಕಡ್ಡಿ ಮತ್ತು ಡಬ್ಬಿ ಗುಣಮಟ್ಟದ ಮೆಣಸಿನಕಾಯಿ ಆವಕದಲ್ಲಿ ಪ್ರಮಾಣ ಕಡಿಮೆ ಇದ್ದುದರಿಂದ ವರ್ತಕರು ಇಂತಹ ಚೀಲಗಳ ಖರೀದಿಗೆ ಪೈಪೋಟಿ ನಡೆಸಿದರು.

ಪೊಲೀಸ್ ಬಿಗಿ ಭದ್ರತೆ: ದರ ಕುಸಿತವೆಂದು ಆರೋಪಿಸಿ ಕಳೆದ ವರ್ಷ ಮಾ. 11ರಂದು ರೈತರು ನಡೆಸಿದ ಗಲಾಟೆಯಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಪ್ರಸಕ್ತ ವರ್ಷದ ಸೀಸನ್ ಆರಂಭದಿಂದಲೂ ಬಿಗಿ ಭದ್ರತೆಯನ್ನು ಏರ್ಪಡಿಸಿದ್ದು, ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆ ಮಾಡುವ ಮೂಲಕ ರೈತರ ಹೆಸರಿನಲ್ಲಿ ಪುಂಡಾಟ ಮಾಡುವವರ ಬಗ್ಗೆ ತೀವ್ರ ನಿಗಾ ವಹಿಸಿದೆ. ಹೀಗಾಗಿ ಗುರುವಾರ ಮಾರುಕಟ್ಟೆ ದರದಲ್ಲಿ ಕುಸಿತ ಕಾಣಲಿದೆ ಎಂಬ ಮಾಹಿತಿ ಹಿನ್ನೆಲೆ ಇಲಾಖೆ ಸಿಬ್ಬಂದಿಗಳೊಂದಿಗೆ ಬೆಳಗ್ಗೆ ಮತ್ತು ಮಧ್ಯಾಹ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಎರಡು ಬಾರಿ ಪರೇಡ್‌ ನಡೆಸಿದರು. 

ಗುರುವಾರ ಮಾರುಕಟ್ಟೆ ದರ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿ ಮೆಣಸಿನಕಾಯಿ ತಳಿ ಕನಿಷ್ಠ ₹2759 ಗರಿಷ್ಠ 31811, ಡಬ್ಬಿತಳಿ ಕನಿಷ್ಠ ₹3289, ಗರಿಷ್ಠ ₹38009, ಗುಂಟೂರು ಕನಿಷ್ಠ ₹1000 ಗರಿಷ್ಠ ₹163259ಕ್ಕೆ ಮಾರಾಟವಾಗಿವೆ.

ಛತ್ರಪತಿ ಶಿವಾಜಿ ಮಹಾರಾಜರ ತೊಟ್ಟಿಲು ಕಾರ್ಯಕ್ರಮ

ರಾಣಿಬೆನ್ನೂರು: ತಾಲೂಕು ಕ್ಷತ್ರೀಯ ಮರಾಠ ಸಮಾಜದ ವತಿಯಿಂದ ನಗರದ ದೊಡ್ಡಪೇಟೆ ತುಕ್ಕಾ ಭವಾನಿ ದೇವಸ್ಥಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ತೊಟ್ಟಿಲು ಕಾರ್ಯಕ್ರಮ ಸಡಗರ, ಸಂಭ್ರಮದಿಂದ ಜರುಗಿತು.ಮಾಜಿ ಶಾಸಕ ಅರುಣಕುಮಾರ ಪೂಜಾರ, ತಾಲೂಕು ಕ್ಷತ್ರೀಯ ಮರಾಠ ಸಮಾಜದ ಪವಿತ್ರಕುಮಾರ ನಾಗೇನಹಳ್ಳಿ, ತಹಸೀಲ್ದಾರ್ ಆರ್.ಎಚ್. ಭಾಗವಾನ, ನಗರಸಭೆ ಅಧ್ಯಕ್ಷ ಚಂಪಕ ಬಿಸಲಹಳ್ಳಿ, ಉಪಾಧ್ಯಕ್ಷ ನಾಗರಾಜ ಪವಾರ, ಶಿವಮೂರ್ತಿ ದಿಲ್ಲಿವಾಲಾ, ನಾಗವೇಣಿ ಪವಾರ, ಪರಶುರಾಮ ಕೋಕಾಳೆ, ಪರಶುರಾಮ ಕಾಳೇರ, ಬಾಬುರಾವ್ ಅವತಾಡೆ, ಶಿವಾಜಿರಾವ್ ಮಾಕನೂರ, ಮಾರುತಿ ಜಾಧವ, ಉದಯ ಗಾವಡೆ, ನಾಗಪ್ಪ ಜಾಧವ, ನರಸಿಂಹ ಮರಾಠ, ಶಿವಾನಂದ ಆರೇರ, ಬಿ.ಕೆ. ರಾಜನಹಳ್ಳಿ, ಮಾರುತಿ ತುಮ್ಮಿನಕಟ್ಟಿ, ಸತೀಶ್ ಬಣಕಾರ, ವಿಜಯಕುಮಾರ ಮಾನೆ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ