250ಕ್ಕೂ ಹೆಚ್ಚಿನ ಕಾರ್ಮಿಕರಿಗೆ ಕೂಲಿ ಬಾಕಿ

KannadaprabhaNewsNetwork |  
Published : Oct 11, 2026, 02:15 AM IST
10ಎಚ್ಎಸ್ಎನ್8 : ಚಿಕ್ಕಮಗಳೂರು- ಬೆಂಗಳೂರು ಮಾರ್ಗದ  ಕೆಎಸ್‌ಆರ್‌ಟಿಸಿ  ಬಸ್ಸು ಬ್ರೇಕ್ ಫೇಲ್ ಆಗಿ ಕಲ್ಕರೆ ಸಮೀಪ ಕೆಟ್ಟು ನಿಂತು ಪ್ರಯಾಣಿಕರು ಪರಿತಪಿಸುತ್ತಿರುವುದು. | Kannada Prabha

ಸಾರಾಂಶ

ಚಿಂಚೋಳಿ ತಾಲೂಕಿನ ಕರ್ಚಖೇಡ ಗ್ರಾಮದ 200 ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ವಿ.ಬಿ.ಜಿ.ರಾಮಜಿ ಯೋಜನೆ ಅಡಿಯಲ್ಲಿ ಕೂಲಿ ಕೆಲಸ ವೇತನ ನೀಡುವಂತೆ ಆಗ್ರಹಿಸಿ ಚಿಂಚೋಳಿ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿಂಚೋಳಿಚಿಂಚೋಳಿ ತಾಲೂಕಿನ ಕರ್ಚಖೇಡ ಗ್ರಾಮದ 200 ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ವಿ.ಬಿ.ಜಿ.ರಾಮಜಿ ಯೋಜನೆ ಅಡಿಯಲ್ಲಿ ಕೂಲಿ ಕೆಲಸ ವೇತನ ನೀಡುವಂತೆ ಆಗ್ರಹಿಸಿ ಚಿಂಚೋಳಿ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕರ್ಚಖೇಡ ಗ್ರಾಮದ 250 ಕ್ಕೂ ಹೆಚ್ಚು ಕೂಲಿ ಕಾರ್ಮಿಕರು, ಎರಡು ತಿಂಗಳಿಂದ ಕೆಲಸ ಮಾಡುತ್ತಿದ್ದೇವೆ. ಆದರೆ ನಮಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ವೇತನವನ್ನು ನಮ್ಮ ಖಾತೆಗೆ ಇನ್ನೂ ಜಮೆ ಆಗಿಲ್ಲ. ಅಲ್ಲಿನ ಪಿಡಿಓ ಮತ್ತು ಕಂಪ್ಯೂಟರ್ ಆಪರೇಟರ್ ನಮ್ಮ ಸಮಸ್ಯೆಗೆ ಸ್ಪಂದನೆ ಮಾಡುತ್ತಿಲ್ಲ. ಅನೇಕ ಸಲ ಪಂಚಾಯತಿಗೆ ಭೇಟಿಕೊಟ್ಟು ನಮ್ಮ ಸಂಕಷ್ಟವನ್ನು ಹೇಳಿಕೊಂಡು ಶೀಘ್ರವೇ ಕೂಲಿ ಜಮೆ ಮಾಡುವಂತೆ ಮನವಿ ಸಲ್ಲಿದ್ದೇವೆ. ಆದರೂ ಸ್ಥಳೀಯ ಪಿಡಿಒ, ಕಂಪ್ಯೂಟರ್‌ ಆಪರೇಟ್‌ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಮಸ್ತಾನಬೀ ಬಸ್ಸಮ್ಮ ನಾಗಮ್ಮ ಆಳಲು ತೋಡಿಕೊಂಡರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಪ್ಪ ಸಕ್ರಿ ಮಾತನಾಡಿ, ಕರ್ಚಖೇಡ ಛತ್ರಸಾಲ ಗ್ರಾಮದಲ್ಲಿರುವ ಅನೇಕ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಬಡವರಿಗೆ ಕೂಲಿ ವೇತನ ಹಾಕದೆ ಸತಾಯಿಸುತ್ತಿದ್ದಾರೆ. ಸೇಡಂ ಮತಕ್ಷೇತ್ರಕ್ಕೆ ಒಳಪಟ್ಟಿರುವ ನಮ್ಮ ಗ್ರಾಮದ ಪಂಚಾಯತಿ ಸಮಸ್ಯೆ ಬಗ್ಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ಗಮನಕ್ಕೆ ತರಲಾಗಿದೆ. ಆದರೆ ಇಲ್ಲಿಯವರೆಗೆ ಯಾರು ನಮ್ಮಂಥ ಬಡವರ ಗೋಳು ಕೇಳುತ್ತಿಲ್ಲ ಎಂಬ ಕಾರಣಕ್ಕೆ ನೇರವಾಗಿ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಕೂಲಿಕಾರ್ಮಿಕರೊಂದಿಗೆ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಕುಮಾರ್ ಚೌಹಾಣ್ ಮಾತನಾಡಿ, ಚಿಂಚೋಳಿ ತಾಲೂಕಿನ ಕರ್ಚಖೇಡ ಗ್ರಾಮದ ಕೂಲಿ ಕಾರ್ಮಿಕರಿಗೆ ಮುಂದಿನ ವಾರದೊಳಗೆ ಕೂಲಿ ವೇತನ ಜಮೆ ಆಗುವ ಸಾಧ್ಯತೆ ಇದೆ. ಕೆಲವು ಗ್ರಾಮ ಪಂಚಾಯತಿಗಳಲ್ಲಿ ಸಮಸ್ಯೆ ಇದ್ದು, ಅತಿ ಶೀಘ್ರವಾಗಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸದ ಮಾಡಿದ ಕಾರ್ಮಿಕರಿಗೆ ಕೂಲಿ ಹಣ ನೀಡಲಾಗುವುದು ಎಂದು ಭರವಸೆ ನೀಡಿದರು.

ಕೂಲಿ ಕಾರ್ಮಿಕರಾದ ಅಲ್ಲಾಹುದ್ದೀನ್, ಅಮೃತ ಬಾಬಣ್ಣ, ಮಾಣಿಕ್ ಕುಂಬಾರ್ ಮಲ್ಲಪ್ಪ, ಶೇಕಪ್ಪ, ಕತ್ತಲಪ್ಪ, ತುಳ್ಜಪ್ಪ ತಳವಾರ್, ಜಗನ್ನಾಥ್, ಕೃಷ್ಣಪ್ಪ ಲಬಡಿ, ಮಲ್ಲಪ್ಪ ಮೈಲಾರಿ, ಬಸ್ಸಮ್ಮ, ನಾಗಮ್ಮ, ಅನೇಕ ಕೂಲಿ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಫ್ರೀಡಂ ಪಾರ್ಕ್‌, ವಿಧಾನಸೌಧ ಬಳಿ ರೈತರ ಪ್ರತಿಭಟನೆ
ಮಂತ್ರಾಲಯ ಮಠಕ್ಕೆ ತಲೆನೋವಾದ ಆನ್ಲೈನ್ ವಂಚಕರು