ನ.2ಕ್ಕೆ ಅಕ್ಕಮ್ಮ -ಶರಣ ಹೆಂಡದ ಮಾರಯ್ಯ ಸ್ಮರಣೆ

KannadaprabhaNewsNetwork |  
Published : Oct 11, 2026, 02:15 AM IST
 | Kannada Prabha

ಸಾರಾಂಶ

ಅನುಭವ ಮಂಟಪದಲ್ಲಿ ಶರಣರಾಗಿ ಮೆರೆದ ಅತಿ ಹಿಂದುಳಿದ ಸಮುದಾಯದ ಶರಣ ಹೆಂಡದ ಮಾರಯ್ಯ ಹಾಗೂ ಶರಣೆ ಈಡಿಗರ ಅಕ್ಕಮ್ಮನವರ ಸ್ಮರಣೋತ್ಸವ ಉಪನ್ಯಾಸ ಹಾಗೂ ಅವರ ಹೆಸರಿನಲ್ಲಿ 25 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ, ರಾಷ್ಟ್ರೀಯ ಈಡಿಗ ಮಹಾಮಂಡಳಿ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಉಪನ್ಯಾಸ ನ.2 ರಂದು ಕಲಬುರಗಿಯಲ್ಲಿ ನಡೆಯಲಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಮಠಾಧೀಶ ಡಾ.ಪ್ರಣವಾನಂದ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿಅನುಭವ ಮಂಟಪದಲ್ಲಿ ಶರಣರಾಗಿ ಮೆರೆದ ಅತಿ ಹಿಂದುಳಿದ ಸಮುದಾಯದ ಶರಣ ಹೆಂಡದ ಮಾರಯ್ಯ ಹಾಗೂ ಶರಣೆ ಈಡಿಗರ ಅಕ್ಕಮ್ಮನವರ ಸ್ಮರಣೋತ್ಸವ ಉಪನ್ಯಾಸ ಹಾಗೂ ಅವರ ಹೆಸರಿನಲ್ಲಿ 25 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ, ರಾಷ್ಟ್ರೀಯ ಈಡಿಗ ಮಹಾಮಂಡಳಿ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಉಪನ್ಯಾಸ ನ.2 ರಂದು ಕಲಬುರಗಿಯಲ್ಲಿ ನಡೆಯಲಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಮಠಾಧೀಶ ಡಾ.ಪ್ರಣವಾನಂದ ಸ್ವಾಮೀಜಿ ಹೇಳಿದರು.

ಕಲಬುರಗಿಯ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನುಭವ ಮಂಟಪದಲ್ಲಿದ್ದ 770 ಅಮರಗಣಂಗಳಲ್ಲಿ 154 ವಚನ ಬರೆದ ಶರಣೆ ಈಡಿಗರ ಅಕ್ಕಮ್ಮ ಹಾಗೂ 12 ವಚನಗಳನ್ನು ಬರೆದ ಶರಣ ಹೆಂಡದ ಮಾರಯ್ಯನವರ ಕೊಡುಗೆ ಬೆಳಕಿಗೆ ತರಲು ಇದೇ ಮೊದಲ ಬಾರಿಗೆ ರಾಜ್ಯಮಟ್ಟದಲ್ಲಿ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ. ಪ್ರಸ್ತುತ ಕೆಲವೇ ಪ್ರಮುಖ ಶರಣರನ್ನು ಮಾತ್ರ ಉಲ್ಲೇಖಿಸಿ ಪ್ರಚಾರ ಮಾಡುವ ಬದಲು ಅನುಭವ ಮಂಟಪದಲ್ಲಿದ್ದ ಈಡಿಗ ಸಮುದಾಯದ ಇಬ್ಬರು ಶರಣರ ಬಗ್ಗೆ ಕೂಡ ಮಾಹಿತಿ ತಿಳಿಸುವ ಪ್ರಯತ್ನದ ಭಾಗವಾಗಿ ವಿಶೇಷ ಕಾರ್ಯಕ್ರಮವನ್ನು ನ.2 ರಂದು ಕಲಬರಗಿಯ ಹೋಟೆಲ್ ಬೃಂದಾವನ ಗ್ರಾಂಡ್ ಬಲದೇವ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯಲಿದೆ ಎಂದರು.

ಸಮುದಾಯದ ಮುಖಂಡ ಕಾರ್ಕಳದ ವಿ.ಸುನೀಲ್ ಕುಮಾರ್ ಉದ್ಘಾಟಿಸಲಿದ್ದು, ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಎಚ್ಆರ್ ಶ್ರೀನಾಥ್, ಶಾಸಕ ಅಲ್ಲಂಪ್ರಭು ಪಾಟೀಲ್ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಅನುಭವ ಮಂಟಪದ ಪ್ರಮುಖ ಲಿಂಗಾಯತ ಗುರುಗಳು ಹಾಗೂ ಹಿಂದುಳಿದ ವರ್ಗಗಳ ಸ್ವಾಮಿಜಿಗಳು ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸುವರು ಎಂದು ತಿಳಿಸಿದರು..

*ಸಿಎಂ ಡಿಕೆಶಿ ಸ್ಪಂದನೆ ಶ್ಲಾಘನಾರ್ಹ: ಕಳೆದ ಆರು ವರ್ಷಗಳಲ್ಲಿ ನಡೆಸಿದ ಹೋರಾಟ ಪ್ರತಿಭಟನೆಗೆ ಉತ್ತಮ ಪ್ರತಿಕ್ರಿಯೆ ವ್ಯರ್ಥವಾಗಿದ್ದು ಈಗಾಗಲೇ ನಿಗಮ ರಚನೆಗೊಂಡಿದೆ. ನಾರಾಯಣ ಗುರುಗಳ ಪುತ್ಥಳಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸುವುದು, ನಿಗಮಕ್ಕೆ ಹೆಚ್ಚು ಹಣ ಒದಗಿಸುವುದು ಮುಂತಾದ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದನೆ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. 32ಕ್ಕೂ ಹೆಚ್ಚು ಸ್ವಾಮೀಜಿಗಳ ನೇತೃತ್ವದಲ್ಲಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತದೆ ಎಂದು ಡಾ. ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ಆಚಾರದ ಶರಣೆ ಈಡಿಗರ ಅಕ್ಕಮ್ಮ ಅವರ ಬದುಕಿನ ಸಾಧನೆಯ ಬಗ್ಗೆ ಚಿಂತಕಮ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ. ಸದಾನಂದ ಪೆರ್ಲ ಹಾಗೂ ಶರಣ ಹೆಂಡದ ಮಾರಯ್ಯನವರ ಬಗ್ಗೆ ಉಪನ್ಯಾಸಕ ಬಿಎಂ ರಾವೂರ್ ವಿಶೇಷ ಉಪನ್ಯಾಸ ನೀಡುವರು ಎಂದರು. ಸುದ್ದಿಗೋಷ್ಠಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಕಾರ್ಯದರ್ಶಿ ವೆಂಕಟೇಶ ಗುಂಡಾನೂರು, ಶಕ್ತಿಪೀಠದ ಮಾಧ್ಯಮ ಕಾರ್ಯದರ್ಶಿ ಡಾ. ಸದಾನಂದ ಪೆರ್ಲ, ಈಡಿಗ ಸಮಾಜದ ತಾಲೂಕ ಅಧ್ಯಕ್ಷ ಮಹೇಶ್ ಗುತ್ತೇದಾರ್ ಹೊಳಕುಂದ, ರಾಷ್ಟ್ರೀಯ ಈಡಿಗ ಮಹಾಮಂಡಲದ ಯುವ ಘಟಕದ ಅಧ್ಯಕ್ಷ ಅಖಿಲೇಶ್ ಗುತ್ತೇದಾರ್ ಚಿಂತಕ ಬಿ.ಎಮ್ ರಾವೂರ್ ಉಪಸ್ಥಿತರಿದ್ದರು.

*ಪದಗ್ರಹಣ ಸಮಾರಂಭ: ರಾಷ್ಟ್ರೀಯ ಈಡಿಗ ಮಹಾಮಂಡಲದ ಕಲಬುರುಗಿ ಜಿಲ್ಲಾ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕೂಡ ನಡೆಯಲಿದ್ದು ಬೆಳಗ್ಗೆ 10.30 ರಿಂದ ಸ್ಮರಣೋತ್ಸವ ಉದ್ಘಾಟನೆ, ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸ ನಡೆಯಲಿದೆ. ಮಧ್ಯಾಹ್ನದ ನಂತರ ಸಮುದಾಯದ ವಿವಿಧ ವಿಷಯಗಳ ಕುರಿತು ಚರ್ಚೆ ಹಾಗೂ ಕಲಬುರ್ಗಿ ಜಿಲ್ಲೆ ರಾಷ್ಟ್ರೀಯ ಈಡಿಗ ಮಹಾಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಡಾ.ಪ್ರಣವಾನಂದ ಸ್ವಾಮೀಜಿ ಹೇಳಿದರು.25 ಸಾಧಕರಿಗೆ ಪ್ರಶಸ್ತಿ ಪ್ರದಾನ: ಸಮಾಜದಲ್ಲಿ ಸಾಧನೆಗೈದ 13 ಮಂದಿಗೆ ಶರಣೆ ಈಡಿಗರ ಅಕ್ಕಮ್ಮ ಹೆಸರಿನಲ್ಲಿ ಹಾಗೂ 12 ಜನ ಸಾಧಕರಿಗೆ ಶರಣ ಹೆಂಡದ ಮಾರಯ್ಯ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು. ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್ ಅಪ್ಪ ಸಹಿತ ಅನೇಕ ಗಣ್ಯರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಆಯ್ಕೆ ಸಮಿತಿಯ ತಜ್ಞರು ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಡಾ ಪ್ರಣವಾನಂದ ಶ್ರೀಗಳು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಫ್ರೀಡಂ ಪಾರ್ಕ್‌, ವಿಧಾನಸೌಧ ಬಳಿ ರೈತರ ಪ್ರತಿಭಟನೆ
ಮಂತ್ರಾಲಯ ಮಠಕ್ಕೆ ತಲೆನೋವಾದ ಆನ್ಲೈನ್ ವಂಚಕರು