ಜಿಲ್ಲೆಯಲ್ಲಿ 35 ಕೆಜಿಗೂ ಅಧಿಕ ಗಾಂಜಾ ನಾಶ

KannadaprabhaNewsNetwork | Published : Feb 9, 2024 1:47 AM

ಸಾರಾಂಶ

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ 35 ಕೆಜಿ 409 ಗ್ರಾಂ ಗಾಂಜಾ ಜಪ್ತು ಮಾಡಲಾಗಿತ್ತು. ಒಟ್ಟು 19 ಪ್ರಕರಣಗಳಲ್ಲಿ ಜಪ್ತು ಮಾಡಿದ್ದ ಸುಮಾರು 3.64,400 ರು. ಮೌಲ್ಯದ ಗಾಂಜಾ ನಾಶಪಡಿಸಲು ನ್ಯಾಯಾಲಯದಿಂದ ಡ್ರಗ್ ಡಿಸ್ಪೋಸಲ್ ಕಮಿಟಿ ಮುಖಾಂತರ ಗಾಂಜಾ ನಾಶಕ್ಕೆ ಅನುಮತಿ ಪಡೆಯಲಾಗಿತ್ತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಎನ್‌ಡಿಪಿಎಸ್ ಕಾಯ್ದೆಯಡಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡಿದ್ದ ಸುಮಾರು 3,64,400 ರು. ಮೌಲ್ಯದ 35 ಕೆಜಿ 409 ಗ್ರಾಂ ಗಾಂಜಾವನ್ನು ತಾಲೂಕಿನ ಆವರಗೊಳ್ಳ ಗ್ರಾಮದ ಹೊರ ವಲಯದ ದಾವಣಗೆರೆ ಪಾಲಿಕೆಯ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶಪಡಿಸಲಾಯಿತು.

ತಾಲೂಕಿನ ಆವರಗೊಳ್ಳ ಸಮೀಪದ ಪಾಲಿಕೆ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಡ್ರಗ್ ಡಿಸ್ಪೋಸಲ್ ಕಮಿತಿ ಅಧ್ಯಕ್ಷರು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಮಂಜುನಾಥ, ಸಮಿತಿ ಸದಸ್ಯರಾದ ನಗರ ಡಿವೈಎಸ್ಪಿ ಮಲ್ಲೇಶ ದೊಡ್ಮನಿ, ಚನ್ನಗಿರಿ ಡಿವೈಎಸ್ಪಿ ಪ್ರಶಾಂತ ಮನ್ನೋಳಿ, ಅಧಿಕಾರಿ, ಸಿಬ್ಬಂದಿ, ಪಂಚರ ಸಮಕ್ಷಮದಲ್ಲಿ 35 ಕೆಜಿಗೂ ಅದಿಕ ಗಾಂಜಾವನ್ನು ಬೆಂಕಿ ಹಚ್ಚಿ ನಾಶಪಡಿಸಲಾಯಿತು.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ 35 ಕೆಜಿ 409 ಗ್ರಾಂ ಗಾಂಜಾ ಜಪ್ತು ಮಾಡಲಾಗಿತ್ತು. ಒಟ್ಟು 19 ಪ್ರಕರಣಗಳಲ್ಲಿ ಜಪ್ತು ಮಾಡಿದ್ದ ಸುಮಾರು 3.64,400 ರು. ಮೌಲ್ಯದ ಗಾಂಜಾ ನಾಶಪಡಿಸಲು ನ್ಯಾಯಾಲಯದಿಂದ ಡ್ರಗ್ ಡಿಸ್ಪೋಸಲ್ ಕಮಿಟಿ ಮುಖಾಂತರ ಗಾಂಜಾ ನಾಶಕ್ಕೆ ಅನುಮತಿ ಪಡೆಯಲಾಗಿತ್ತು.

ಜಿಲ್ಲೆಯ ಪರಿಸರ ಅಧಿಕಾರಿಗಳು ನಿಗದಿಪಡಿಸಿದ ಸ್ಥಳವಾದ ತಾಲೂಕಿನ ಆವರಗೊಳ್ಳ ಗ್ರಾಮದ ಹೊರ ವಲಯದ ಪಾಲಿಕೆಯ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಡ್ರಗ್ ಡಿಸ್ಪೋಸಲ್‌ ಸಮಿ ತಿ ಅಧ್ಯಕ್ಷರೂ ಆದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್, ಎಎಸ್ಪಿ ಜಿ.ಮಂಜುನಾಥ, ಡಿವೈಎಸ್ಪಿಗಳಾದ ದಾವಣಗೆರೆ ನಗರದ ಮಲ್ಲೇಶ ದೊಡ್ಮನಿ, ಚನ್ನಗಿರಿಯ ಪ್ರಶಾಂತ್ ಮನ್ನೋಳಿ, ಅಧಿಕಾರಿ, ಸಿಬ್ಬಂದಿ ಹಾಗೂ ಪಂಚರ ಸಮ್ಮುಖದಲ್ಲಿ 35.409 ಕೆಜಿ ಗಾಂಜಾಗೆ ಬೆಂಕಿ ಹಚ್ಚಿ ನಾಶಪಡಿಸಲಾಯಿತು.

................

Share this article