ಜೈನಾಪುರದ 50ಕ್ಕೂ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

KannadaprabhaNewsNetwork |  
Published : Apr 23, 2024, 12:48 AM ISTUpdated : Apr 23, 2024, 02:08 PM IST
22ಸಿಕೆಡಿ2 | Kannada Prabha

ಸಾರಾಂಶ

 ಚಿಕ್ಕೋಡಿ ಲೋಕಸಭಾ ಕ್ಷೇತ್ರದ ₹8,810 ಅಧಿಕ ಕೋಟಿಯ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜೈನಾಪುರ ಗ್ರಾಮದ 50ಕ್ಕೂ ಅಧಿಕ ಸದಸ್ಯರು ಹಾಗೂ ನಾಗರಮುನ್ನೊಳಿ ಗ್ರಾಮದ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು.

 ಚಿಕ್ಕೋಡಿ :  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ₹8,810 ಅಧಿಕ ಕೋಟಿಯ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜೈನಾಪುರ ಗ್ರಾಮದ ದುಂಡಪ್ಪ ಘರಬುಡೆ, ಈರಗೌಡ ಟೊಪುಗೊಳ, ರಾಜು ಭಾಕರೇ ರಾಮಗೌಂಡ ಸುಳಕುಡೆ ಅಲಗೊಂಡ ಬ್ಯಾಳಿ ರಾಜು ಮಠದ ಅರ್ಜುನ ಕಮತೆ ಹಾಗೂ ಅವರ ತಂಡದ ಸದಸ್ಯರು ಒಟ್ಟು 50ಕ್ಕೂ ಅಧಿಕ ಸದಸ್ಯರು ಹಾಗೂ ನಾಗರಮುನ್ನೊಳಿ ಗ್ರಾಮದ ಸಿದ್ದಪ್ಪ ಚೌಗಲಾ, ಬಸವರಾಜ ಯಾದಗುಡೆ, ಲಕ್ಷ್ಮಣ ಬಂಬಲವಾಡೆ ಸತ್ಯಪ್ಪ ಜುಲಪೆ, ಈರಪ್ಪ ಚೌಗಲಾ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಅವರನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶಶಿಕಲಾ ಜೊಲ್ಲೆಯವರು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.

ಅರುಣ ಐಹೊಳೆ, ವಿಜಯ ಕೋಟಿವಾಳೆ ರಾಯಗೌಡ ಕೆಳಗಿನಮನಿ, ರವಿ ಹಿರೇಕುಡೆ, ಅಣ್ಣಾಸಾಬ ಖೇಮಲಾಪುರೆ, ಪ್ರಥ್ವಿರಾಜ ಜಾಧವ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ