ಕನ್ನಡಪ್ರಭ ವಾರ್ತೆ ಮೈಸೂರುಲೈಫ್ ಈಸ್ ಕಾಲಿಂಗ್ ಸಂಸ್ಥೆ ಆಯೋಜಿಸಿದ್ದ ಸೆಲೆಬ್ರೇಷನ್ ಮೈಸೂರು ಮ್ಯಾರಾಥಾನ್ನ 14ನೇ ಆವೃತ್ತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿಯಿಂದ ಆರಂಭವಾದ ಈ ಮ್ಯಾರಥಾನ್ ನಲ್ಲಿ 30 ಕಿ.ಮೀ. ಓಟ, 21 ಕಿ.ಮೀ. ಹಾಫ್ ಮ್ಯಾರಥಾನ್, 10 ಕಿ.ಮೀ. ಓಟ ಮತ್ತು 11 ವರ್ಷ ಮೇಲ್ಪಟ್ಟವರಿಗೆ 5 ಕಿ.ಮೀ. ಓಟ ಮತ್ತು ನಡಿಗೆ ಸ್ಪರ್ಧೆಯನ್ನು ಒಳಗೊಂಡಿತ್ತು.ಈ ಮ್ಯಾರಥಾನ್ಗೆ ಮೌಂಟ್ಎವರೆಸ್ಟ್ ಪರ್ವತಾರೋಹಿ ಡಾ. ಉಷಾ ಹೆಗ್ಡೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಮ್ಯಾರಥಾನ್ ಆಯೋಜನೆ ಉತ್ತಮವಾದದ್ದು ಎಂದರು.ಮುಕ್ತ ಪುರುಷರ 10 ಕಿ.ಮೀ. ಓಟದಲ್ಲಿ ಎಸ್.ವೈ. ಪ್ರಜ್ವಲ್- ಪ್ರಥಮ, ಎ.ಅಭಿಷೇಕ್- ದ್ವಿತೀಯ, ಕೆ. ಕಿರಣ್- ತೃತೀಯ ಸ್ಥಾನ ಪಡೆದರು.ಹಿರಿಯ ಪುರುಷರ 10 ಕಿ.ಮೀ. ಓಟದಲ್ಲಿ ಚಂದ್ರಶೇಖರನ್ ಸುಬ್ರಮಣಯ್ಯ- ಪ್ರಥಮ, ಕೆ.ಆರ್. ರಾಮಕೃಷ್ಣ- ದ್ವಿತೀಯ ಮತ್ತು ಎನ್.ಟಿ. ರಂಜಿತ್- ತೃತೀಯ ಸ್ಥಾನ ಪಡೆದರು.ವೆಟರನ್ ಪುರುಷರ 10 ಕಿ.ಮೀ. ಓಟದಲ್ಲಿ ರವೀಂದ್ರ ಗುಂಡುರಾವ್- ಪ್ರಥಮ, ಹೊಸೂರು ಉದಯಕುಮಾರ್ ಶೆಟ್ಟಿ- ದ್ವಿತೀಯ ಮತ್ತು ಎಲ್. ಅನಂತ್- ತೃತೀಯ ಸ್ಥಾನ ಪಡೆದರು.ಮುಕ್ತ ಮಹಿಳೆಯರ 10 ಕಿ.ಮೀ. ಓಟದಲ್ಲಿ ದೀಪಿಕಾ ಪ್ರಕಾಶ್- ಪ್ರಥಮ, ಸೀಮಾ ದೆಸಿಲ- ದ್ವಿತೀಯ ಮತ್ತು ಸಂಧ್ಯಾ ಸತ್ಯನ್ ತೃತೀಯ ಸ್ಥಾನಪಡೆದರು. ಹಿರಿಯ ಮಹಿಳೆಯರ 10 ಕಿ.ಮೀ. ಓಟದಲ್ಲಿ ಮಮತಾ ಭರಕ್ತಿಯ ಪ್ರಥಮ, ಶೋಭಾ ದ್ವಿತೀಯ ಮತ್ತು ಡಾ.ಬಿ.ಎಚ್. ವತ್ಸಲಾ ತೃತೀಯ, ವೆಟರನ್ ಮಹಿಳೆಯರ 10 ಕಿ.ಮೀ. ಓಟದಲ್ಲಿ ಶಾಮಲಾ ಪದ್ಮನಾಭನ್ಪ್ರಥಮ, ಗೀತಾ ವಿಜಯ ದ್ವಿತೀಯ ಸ್ಥಾನ ಪಡೆದರು.ಮುಕ್ತ ಪುರುಷರ ಹಾಫ್ ಮ್ಯಾರಥಾನ್ (21 ಕಿ.ಮೀ.) ನಲ್ಲಿ ಮಧುಸೂದನ್ ಪ್ರಥಮ, ಸೈಯದ್ ಅತೀಫ್ ಉಮರ್ ದ್ವಿತೀಯ ಮತ್ತು ಧನಶೇಖರ್ರಾಜೇಂದ್ರನ್ ತೃತೀಯ.ಹಿರಿಯ ಪುರುಷರ ಹಾಫ್ಮ್ಯಾರಥಾನ್ ನಲ್ಲಿ ಬಿ.ಕೆ. ಮಧುಕರ್ ಪ್ರಥಮ, ಭಾಗ್ಯಾ ಮೋಹನ್ ಕೊನ್ವರ್ ದ್ವಿತೀಯ ಮತ್ತು ಆರ್. ಸುಜನ್ಯ ತೃತೀಯ ಸ್ಥಾನ ಪಡೆದರು.ವೆಟರನ್ ಪುರುಷರ ಹಾಫ್ ಮ್ಯಾರಥಾನ್ ನಲ್ಲಿ ಗಿರೀಶ್ ಗುಬ್ಬಿ ದಾಸಪ್ಪ ಪ್ರಥಮ, ಸಂಜೀವ ಬಾಲ್ಕುರ್ ದ್ವಿತೀಯ ಮತ್ತು ಕುರುಪತ್ ಸುರೇಶ್ಕುಮಾರ್ ತೃತೀಯ.ಮುಕ್ತ ಮಹಿಳೆಯರ ಹಾಫ್ ಮ್ಯಾರಥಾನ್ ನಲ್ಲಿ ಮೀರಾ ಪ್ರಥಮ, ಭಾರತಿ ಚಂದ್ರಶೇಖರ್ ದ್ವಿತೀಯ ಮತ್ತು ಕೆ. ಮಾಧವಿ ತೃತೀಯ. ಹಿರಿಯ ಮಹಿಳೆಯರ ಹಾಫ್ ಮ್ಯಾರಥಾನ್ ನಲ್ಲಿ ದಿವ್ಯಾ ಮಾದಯ್ಯ ಪ್ರಥಮ, ಸರ್ವನಿಧಿ ಥಾಕೂರ್ ದ್ವಿತೀಯ ಮತ್ತು ರಶ್ಮಿ ಅರಸ್ ತೃತೀಯ ಸ್ಥಾನಪಡೆದರು.ವೆಟರ್ನ್ ಮಹಿಳೆಯರ ಹಾಫ್ಮ್ಯಾರಥಾನ್ ನಲ್ಲಿ ಎಸ್.ಜಿ. ವಿಜಯಾ ಜಯಗಳಿಸಿದರು.ಮುಕ್ತ ಪುರುಷರ ಮ್ಯಾರಥಾನ್ 30 ಕಿ.ಮೀ. ಮೊಹಮ್ಮದ್ ಸಹಿಲ್ ಅಣ್ಣಿಗೇರಿ ಪ್ರಥಮ, ಸ್ರೀಜಿನ್ ಥಂಕಮಣಿ ದ್ವಿತೀಯ ಮತ್ತು ಚನ್ಪಾಷಾ ತೃತೀಯ. ಹಿರಿಯ ಪುರುಷರ 30 ಕಿ.ಮೀ. ಓಟದಲ್ಲಿ ರಾಜಿ ಕುಮಾರ್ ಅರವಿಂದಕ್ಷನ್ ಪ್ರಥಮ, ರವಿಕುಮಾರ್ಲಗಚ್ದ್ವಿತೀಯ ಮತ್ತು ಸಿದ್ಧಾರ್ಥಮೆನನ್ತೃತೀಯ.ವೆಟರನ್ ಪುರುಷರ 30 ಕಿ.ಮೀ. ಓಟದಲ್ಲಿ ಜಿ. ಮೋಹನ್ರಾವ್ಪ್ರಥಮ, ರಾಮಕೃಷ್ಣ ದ್ವಿತೀಯ.ಮುಕ್ತ ಮಹಿಳೆಯರ 30 ಕಿ.ಮೀ. ಓಟದಲ್ಲಿ ಪ್ರಗತಿ ಗುಪ್ತ ಪ್ರಥಮ, ಮಮ್ತ ಯಾದವ್ದ್ವಿತೀಯ ಬಿಂದು ಜೆ. ಪ್ರಕಾಶ್ತೃತೀಯ. ಹಿರಿಯ ಮಹಿಳೆಯರ 30 ಕಿ.ಮೀ. ಓಟದಲ್ಲಿ ಸುಮನ್ಶ್ರೀನಿವಾಸ ಪ್ರಥಮ, ರಾಜಲಕ್ಷ್ಮೀ ಮಣಿ ದ್ವಿತೀಯ ಮತ್ತು ಎಂ. ಚಿಂಕನಾ ಪಾಟ್ಕರ್ತೃತೀಯ ಸ್ಥಾನಗಳಿಸಿದರು.