ಐವತ್ತಕ್ಕೂ ಹೆಚ್ಚು ಯುವಕರು ಪ್ರೀತಂಗೌಡರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ

KannadaprabhaNewsNetwork | Published : Sep 19, 2024 1:47 AM

ಸಾರಾಂಶ

ಜೆಡಿಎಸ್‌ಗಾಗಿ ದುಡಿಯುತ್ತಿದ್ದ ಸತ್ಯಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೫೦ಕ್ಕೂ ಹೆಚ್ಚು ಯುವಕರು ಜೆಡಿಎಸ್‌ನಿಂದ ಹೊರಬಂದು ವಿದ್ಯಾನಗರದಲ್ಲಿರುವ ಮಾಜಿ ಶಾಸಕ ಪ್ರೀತಂ ಜೆ. ಗೌಡರ ನಿವಾಸದಲ್ಲಿ ಬಿಜೆಪಿ ಸೇರಿದರು. ಸ್ವಯಂಪ್ರೇರಿತವಾಗಿ ಬಂದ ಯುವಕರಿಗೆ ಪ್ರೀತಂಗೌಡರು ಬಿಜೆಪಿ ಶಾಲು ಹೊದಿಸಿ ಆತ್ಮೀಯವಾಗಿ ಸ್ವಾಗತಿಸಿದರು. ನಿಮಗೆ ಏನಾದರೂ ತೊಂದರೆ ಆಗಿದ್ದರೇ ನಮ್ಮ ಪಕ್ಷಕ್ಕೆ ಬನ್ನಿ ಇಲ್ಲವಾದರೇ ಬರುವುದು ಬೇಡ ಎಂದು ಪ್ರೀತಂ ಗೌಡರು ಸಲಹೆ ನೀಡಿದರು. ಆದರೆ ಪ್ರೀತಂ ಅವರು ನಮ್ಮ ಗ್ರಾಮಕ್ಕೆ ೧೫ ಕೋಟಿ ರು. ವೆಚ್ಚದ ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ಇಲ್ಲಿವರೆಗೂ ನಮ್ಮ ಭಾಗದಲ್ಲಿ ಯಾರೂ ಇಂತಹ ಕೆಲಸ ಮಾಡಿಕೊಟ್ಟಿಲ್ಲ. ಇನ್ನು ಪ್ರೀತಂ ಗೌಡರು ನಮಗೆ ಉತ್ತಮ ಸ್ಪಂದನೆ ಕೊಡುತ್ತಾರೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಹಲವಾರು ವರ್ಷಗಳ ಕಾಲ ಜೆಡಿಎಸ್‌ಗಾಗಿ ದುಡಿಯುತ್ತಿದ್ದ ಸತ್ಯಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೫೦ಕ್ಕೂ ಹೆಚ್ಚು ಯುವಕರು ಜೆಡಿಎಸ್‌ನಿಂದ ಹೊರಬಂದು ವಿದ್ಯಾನಗರದಲ್ಲಿರುವ ಮಾಜಿ ಶಾಸಕ ಪ್ರೀತಂ ಜೆ. ಗೌಡರ ನಿವಾಸದಲ್ಲಿ ಬಿಜೆಪಿ ಸೇರಿದರು. ಸ್ವಯಂಪ್ರೇರಿತವಾಗಿ ಬಂದ ಯುವಕರಿಗೆ ಪ್ರೀತಂಗೌಡರು ಬಿಜೆಪಿ ಶಾಲು ಹೊದಿಸಿ ಆತ್ಮೀಯವಾಗಿ ಸ್ವಾಗತಿಸಿದರು.

ಸತ್ಯಮಂಗಲ ನಿವಾಸಿಯಾದ ಗಿರೀಶ್ ಮಾಧ್ಯಮದೊಂದಿಗೆ ಮಾತನಾಡಿ, ನಾನು ಜೆಡಿಎಸ್‌ನಲ್ಲಿದ್ದು, ಪ್ರೀತಂ ಅಣ್ಣನ ಅಭಿವೃದ್ಧಿ ಕೆಲಸ ಮತ್ತು ಅವರ ಕಾರ್ಯವೈಖರಿ ಎಲ್ಲಾ ನೋಡಿ ನಾನು ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ. ಪ್ರೀತಂಗೌಡರ ಹತ್ತಿರ ಬಂದಾಗ ಅವರ ವರ್ಚಸ್ಸು ಹಾಗೂ ನಮ್ಮ ಬೆನ್ನೆಲುಬಾಗಿ ನಿಲ್ಲುವ ಬಗ್ಗೆ ನಮಗೆ ಗೊತ್ತಾಯಿತು. ಈ ಹುಡುಗರೆಲ್ಲಾ ಅನೇಕ ವರ್ಷಗಳ ಕಾಲ ಜೆಡಿಎಸ್ ಪಕ್ಷದಲ್ಲೆ ಇದ್ದವರು. ಇವರೆಲ್ಲಾ ಬೇಜಾರಾಗಿ ಜೆಡಿಎಸ್ ಪಕ್ಷ ಬಿಡುವ ಬಗ್ಗೆ ಹೇಳಿದಲ್ಲದೇ ಪ್ರೀತಂಗೌಡರನ್ನು ಭೇಟಿ ಮಾಡುವ ಬಗ್ಗೆ ನಮ್ಮ ಬಳಿ ಹೇಳಿಕೊಂಡು ಬಿಜೆಪಿ ಸೇರ್ಪಡೆ ಬಗ್ಗೆ ವ್ಯಕ್ತಪಡಿಸಿದರು.

ನಿಮಗೆ ಏನಾದರೂ ತೊಂದರೆ ಆಗಿದ್ದರೇ ನಮ್ಮ ಪಕ್ಷಕ್ಕೆ ಬನ್ನಿ ಇಲ್ಲವಾದರೇ ಬರುವುದು ಬೇಡ ಎಂದು ಪ್ರೀತಂ ಗೌಡರು ಸಲಹೆ ನೀಡಿದರು. ಆದರೆ ಪ್ರೀತಂ ಅವರು ನಮ್ಮ ಗ್ರಾಮಕ್ಕೆ ೧೫ ಕೋಟಿ ರು. ವೆಚ್ಚದ ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ಇಲ್ಲಿವರೆಗೂ ನಮ್ಮ ಭಾಗದಲ್ಲಿ ಯಾರೂ ಇಂತಹ ಕೆಲಸ ಮಾಡಿಕೊಟ್ಟಿಲ್ಲ. ಇನ್ನು ಪ್ರೀತಂ ಗೌಡರು ನಮಗೆ ಉತ್ತಮ ಸ್ಪಂದನೆ ಕೊಡುತ್ತಾರೆ. ಹಾಲಿ ಶಾಸಕರು ಯಾವ ರೀತಿಯೂ ಸ್ಪಂದಿಸುತ್ತಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ಪಕ್ಷಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬುಧವಾರ ಬಿಜೆಪಿ ಸೇರ್ಪಡೆ ಮಾಡಲಾಗಿದೆ ಎಂದರು.

ಈಗಾಗಲೇ ಸತ್ಯಮಂಗಲ ಗ್ರಾಮದಲ್ಲಿ ಯಾವ ಅಭಿವೃದ್ಧಿ ಆಗಬೇಕಾಗಿಲ್ಲ. ಎಲ್ಲಾ ಅಭಿವೃದ್ಧಿ ಮೊದಲೇ ಆಗಿದೆ. ಯುಜಿಡಿ, ರಸ್ತೆ, ವಿದ್ಯುತ್‌ ದೀಪ, ಡ್ರೈನೇಜ್ ಸೇರಿದಂತೆ ಎಲ್ಲಾ ಅಭಿವೃದ್ಧಿ ಮಾಡಿರುವುದು ಪ್ರೀತಂ ಗೌಡರು ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ರೋಹಿತ್, ಆಕಾಶ್, ವಿಶ್ವನಾಥ್, ಧನುಷ್, ಹೇಮಂತ್, ಮೋಹಿತ್ ಸೇರಿದಂತೆ ೫೦ಕ್ಕೂ ಹೆಚ್ಚು ಜನರು ಬಿಜೆಪಿ ಸೇರಿರುವುದಾಗಿ ಹೇಳಿದರು.

Share this article