ಕನ್ನಡಪ್ರಭ ವಾರ್ತೆ ಕುಂದಾಪುರ
ಬಳಿಕ ಮಾತನಾಡಿದ ಶ್ರೀಕಾಂತರು ತನ್ನ ಅಜ್ಜ, ತಂದೆ, ತಾಯಿ, ಗುರುಗಳು ತನಗೆ ಪ್ರೇರಕರಾಗಿದ್ದು, ಮುಂದಿನ ದಿನಗಳಲ್ಲಿ ಕಲಾರಂಗದ ಎಲ್ಲ ಚಟುವಟಿಕೆಗಳಿಗೆ ನೆರವಾಗಲು ಸಿದ್ದನಾಗಿದ್ದೇನೆ. ಸಮಾಜದ ದುರ್ಬಲ ವರ್ಗದ ಮಕ್ಕಳಿಗೆ ಉದ್ಯೋಗ ಕಲ್ಪಿಸಲು ಶ್ರಮಿಸುವುದಾಗಿ ತಿಳಿಸಿ, ಭವಿಷ್ಯದ ತನ್ನ ಯೋಜನೆಗಳನ್ನು ಪ್ರಕಟಿಸಿದರು.
ಅಭ್ಯಾಗತರಾಗಿ ಆಗಮಿಸಿದ ಶಿಕ್ಷಣತಜ್ಞ ಡಾ. ಬಿ. ಭಾಸ್ಕರ್ ರಾವ್, ಜಾಗತಿಕ ಮಟ್ಟದ ವಾಣಿಜ್ಯೋದ್ಯಮಿ ಶ್ರೀಕಾಂತರನ್ನು ಅಭಿನಂದಿಸಿ, ಅವರ ಅಗಾಧ ಸಾಮರ್ಥ್ಯವನ್ನು ಪ್ರಶಂಸಿದರು. ಭೀಮ ಗೋಲ್ಡ್ ಪ್ರೈ. ಲಿ. ಬೆಂಗಳೂರು ಇದರ ಪ್ರಮುಖರಾದ ಶ್ರೀಪತಿ ಭಟ್ ಅಭಿನಂದನೆಯ ಮಾತುಗಳನ್ನಾಡಿದರು. ಅರಿಮಣಿತ್ತಾಯರ ತಾಯಿ ಪುಷ್ಕಳಾ ಕೃಷ್ಣನ್, ಪುತ್ರ ವಿಶಾಲ್ ಅರಿಮಣಿತ್ತಾಯ, ಅಳಿಯ ನಚಿಕೇತ, ನಾಗರಾಜ ಆಚಾರ್ಯ, ಬಾಲಕೃಷ್ಣ ಕೋರ್ನಾಯ, ಸುಬ್ರಮಣ್ಯ ಭಟ್, ಹಯವದ ಭಟ್, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ, ಸದಸ್ಯರಾದ ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ವಿಜಯ ಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ಅಶೋಕ ಎಂ., ನಟರಾಜ ಉಪಾಧ್ಯ, ಗಣರಾಜ ಭಟ್, ವಿದ್ಯಾಪ್ರಸಾದ್, ಮಂಜುನಾಥ ಹೆಬ್ಬಾರ್, ಕಿಶೋರ್ ಸಿ. ಉದ್ಯಾವರ, ಗಣೇಶ ಬ್ರಹ್ಮಾವರ, ಗಣಪತಿ ಭಟ್ ಭಾಗವಹಿಸಿದ್ದರು.ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಎಚ್. ಎನ್. ವೆಂಕಟೇಶ್ ವಂದಿಸಿದರು. ಊರವರ ಪರವಾಗಿ ರಾಘವೇಂದ್ರ ಸೋಮಯಾಜಿ ಸಂಸ್ಥೆಗೆ ಹಾಗೂ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.