ತಾಯಿ ಎದೆಹಾಲು ಸಂಜೀವಿನಿ: ಡಾ. ರಾಜೇಶ್ವರಿ

KannadaprabhaNewsNetwork |  
Published : Aug 13, 2024, 12:50 AM IST
 ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಡಾ. ರಾಜೇಶ್ವರಿ ಗುತ್ತೇದಾರ ಉದ್ಘಾಟಿಸಿದರು. | Kannada Prabha

ಸಾರಾಂಶ

Mother breast milk Sanjeevini: Dr. Rajeshwari

-ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿದ ಡಾ.ರಾಜೇಶ್ವರಿ ಗುತ್ತೇದಾರ

------

ಕನ್ನಡಪ್ರಭ ವಾರ್ತೆ ಶಹಾಪುರ

ತಾಯಿಹಾಲು ಸಂಜೀವಿನಿ, ತಾಯಿ ಎದೆ ಹಾಲು ಒಂದು ಸಂಪೂರ್ಣ ಆಹಾರವಾಗಿದ್ದು, ಅಮೃತಕ್ಕೆ ಸಮಾನ ಎಂದು ದೋರನಹಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತದ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಗುತ್ತೇದಾರ ಹೇಳಿದರು.

ತಾಲೂಕಿನ ದೋರನಹಳ್ಳಿ ಗ್ರಾಮದ ಅಂಗನವಾಡಿ ನಂಬರ್‌-1 ಕೇಂದ್ರದಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಗುವಿಗೆ ರೋಗ ನಿರೋಧಕ ಶಕ್ತಿ ಹಾಗೂ ಪೌಷ್ಟಿಕಾಂಶ ಯತೇಚ್ಛವಾಗಿ ತಾಯಿ ಹಾಲು ನೀಡುವ ಬಗ್ಗೆ ಜಾಗೃತಿ ಮೂಡಿಸುವಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ನಡಲಾಗುತ್ತಿದೆ. ಆದರೆ, ಕೆಲವರು ಮೂಢನಂಬಿಕೆ, ಮೌಢ್ಯದಂತಹ ಅಂಶ ಬಳಸುವ ಪದ್ಧತಿ ಬಗ್ಗೆ ಎಚ್ಚರಿಕೆ ನೀಡುವ ಕೆಲಸ ಸ್ಥಳೀಯ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ತಿಳಿ ಹೇಳಬೇಕೆಂದರು.

ಆರೋಗ್ಯ ನೀರಕ್ಷಕ ಭೀಮಣ್ಣ ಮಾತನಾಡಿ, ತಾಯಿ ಹಾಲು ಅಮೃತಕ್ಕೆ ಸಮಾನ. ಮಗು ಜನಿಸಿದ ತಕ್ಷಣ ತಾಯಿಯ ಹಾಲನ್ನು ನೀಡಬೇಕು. ಹೊರಗಿನ ಹಾಲನ್ನು ನೀಡದೆ ತಾಯಿ ಹಾಲನ್ನೇ ಅತಿ ಹೆಚ್ಚು ಹಾಕಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ ಎಂದರು.

ವಿಶ್ವ ಸ್ತನ್ಯಪಾನ ಸಪ್ತಾಹ 2024ರ ಘೋಷ ವಾಕ್ಯ ‘ಕೊರತೆಗಳನ್ನು ಕೊನೆಗೊಳಿಸಿ ಸರ್ವರಿಗೂ ಸ್ತನ್ಯಪಾನದ ಬೆಂಬಲ ನೀಡಿ’ ಎನ್ನುವ ಘೋಷವಾಕ್ಯದಂತೆ ಗರ್ಭಿಣಿ ಮತ್ತು ಬಾಣಂತಿಯರು ಹಾಗೂ ಮಕ್ಕಳ ತಾಯಂದಿರಿಗೆ ಎದೆಯ ಹಾಲಿನ ಮಹತ್ವದ ಅರಿವು ಮೂಡಿಸಬೇಕಿದೆ. ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರದಲ್ಲಿ ಸಪ್ತಾಹ ಕಾರ್ಯಕ್ರಮ ನಡೆಸಿ ತಾಯಿ ಹಾಲಿನ ಮಹತ್ವ ತಿಳಿಸಲಾಗುತ್ತಿದೆ ಎಂದರು.

ನಿಖಿತಾ, ಭೀಮಣ್ಣ, ಅಮೃತಾ, ಮೀನಾಕ್ಷಿ, ಸವಿತಾ, ನೂರಜಹಾನ್ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು, ಗರ್ಭಿಣಿಯರು ಇತರರಿದ್ದರು.

----

ಫೋಟೊ:

12ವೈಡಿಆರ್9: ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಡಾ. ರಾಜೇಶ್ವರಿ ಗುತ್ತೇದಾರ ಉದ್ಘಾಟಿಸಿದರು.

---000---

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...