ಇಂಡಿಯಲ್ಲಿ ಶೀಘ್ರ ತಾಯಿ-ಮಗುವಿನ ಆಸ್ಪತ್ರೆ

KannadaprabhaNewsNetwork |  
Published : May 29, 2025, 12:42 AM IST
ಇಂಡಿ ತಾಲೂಕು ಆಸ್ಪತ್ರೆ ಆವರಣದಲ್ಲಿ ಅಂದಾಜು ₹55 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸಾರ್ವಜನಿಕ ಆರೋಗ್ಯ ಘಟಕದ ನೂತನ ಪ್ರಯೋಗಾಲಯ ಕಟ್ಟಡವನ್ನು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಶೀಘ್ರದಲ್ಲೇ ಜಿಲ್ಲಾ ಮಟ್ಟದ ತಾಯಿ-ಮಕ್ಕಳ ಆಸ್ಪತ್ರೆ ಸೇವೆ ಒದಗಿಸಿಕೊಡಲು ಪ್ರಯತ್ನ ನಡೆದಿದ್ದು, ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಶೀಘ್ರದಲ್ಲೇ ಜಿಲ್ಲಾ ಮಟ್ಟದ ತಾಯಿ-ಮಕ್ಕಳ ಆಸ್ಪತ್ರೆ ಸೇವೆ ಒದಗಿಸಿಕೊಡಲು ಪ್ರಯತ್ನ ನಡೆದಿದ್ದು, ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕು ಆಸ್ಪತ್ರೆ ಆವರಣದಲ್ಲಿ ಅಂದಾಜು ₹55 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸಾರ್ವಜನಿಕ ಆರೋಗ್ಯ ಘಟಕದ ನೂತನ ಪ್ರಯೋಗಾಲಯ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ನಾನು ನಿರೀಕ್ಷಿಸಿದಷ್ಟು ಆರೋಗ್ಯ ಸೇವೆ ಇಲ್ಲಿನ ಅಧಿಕಾರಿಗಳಿಂದ ಪ್ರಾಮಾಣಿಕವಾಗಿ ದೊರೆತಿರುವುದಿಲ್ಲ. ಡಾ.ಯಾಳವಾರ ಅಂತವರು ಇಲ್ಲಿ ಪ್ರಾಮಾಣಿಕವಾಗಿ ಸಾರ್ವಜನಿಕ ಸೇವೆ ಮಾಡಿ ಹೋಗಿದ್ದಾರೆ. ಪ್ರಾಮಾಣಿಕತೆಯಿಂದ ಸೇವೆ ಮಾಡಿದವರ ಹೆಸರು ಅಜರಾಮರ ಇರುತ್ತದೆ ಎಂದು ಹೇಳಿದರು.

ಬಡವರು ವಿಶ್ವಾಸವಿಟ್ಟು ಚಿಕಿತ್ಸೆಗೆ ಆಸ್ಪತ್ರೆಗೆ ಬರುವ ವಾತಾವರಣ ನಿರ್ಮಾಣ ಮಾಡಬೇಕು. ಮಾಡುವ ಕೆಲಸದಲ್ಲಿ ಆತ್ಮಸಾಕ್ಷಿಗೆ ಹೆದರಿ ಸೇವೆ ಮಾಡಬೇಕು. ಸಂವೇದನಾ ಶೀಲರಾಗಿ ಬಡವರ ಆರೋಗ್ಯ ಸೇವೆ ಮಾಡಬೇಕು. ಬಡವರಿಗೆ ನಿಸ್ವಾರ್ಥದಿಂದ ಸೇವೆ ಮಾಡಿ ಗುಣಪಡಿಸಿದಾಗ, ಅವರು ನೀಡುವ ಹಾರೈಕೆ ಕುಟುಂಬಕ್ಕೆ ಸಲ್ಲುತ್ತದೆ ಎಂದರು. ಮಾನವೀಯತೆಯ ಸೇವೆ ಮುಖ್ಯವಾಗಿದ್ದು ಅಂತಹ ಸೇವೆ ನಿಮ್ಮಿಂದ ಜನರಿಗೆ ಸಿಗಲಿ. ಮನುಷ್ಯತ್ವದಿಂದ ಬದುಕು ಸಾಗಿಸಿದರೆ ಅದುವೆ ಸಾರ್ಥಕ ಬದುಕು ಎಂದರು.

ತಾಲೂಕಿನಿಂದ ಆಸ್ಪತ್ರೆಗೆ ಬರುವ ಜನರಿಗೆ 24/7 ಸೇವೆ ಒದಗಿಸಬೇಕು. ರೋಗಿಗಳು ನಮ್ಮ ಆಸ್ಪತ್ರೆಯ ಅತಿಥಿಗಳು ಎಂಬ ಭಾವನೆಯಿಂದ ಒಳ್ಳೆಯ ಸೇವೆ ಒದಗಿಸಬೇಕು. ತಾಲೂಕಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಡೆಗೆ ಗಮನ ಹರಿಸಬೇಕು. ಭ್ರಷ್ಟಾಚಾರ ರಹಿತ ಸೇವೆ, ಸ್ಚಚ್ಚತೆ, ಗುಣಮಟ್ಟದ ಸೇಗೆಗೆ ಆದ್ಯತೆ ನೀಡಬೇಕು. ಆರೋಗ್ಯ ಸಂಪತ್ತಿಗಿಂತ ದೊಡ್ಡ ಸಂಪತ್ತು ಬೇರೆ ಇಲ್ಲ. ಪ್ರತಿಯೊಬ್ಬರು ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಕೋವಿಡ್ ಬಗ್ಗೆ ಭಯಪಡದೇ, ಜಾಗೃತರಾಗಿರಬೇಕು. ಅಂತರ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಡಿಎಸ್ಒ ಡಾ.ಇನಮದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಸಿ ಅನುರಾಧಾ ವಸ್ತ್ರದ, ತಹಸೀಲ್ದಾರ್‌ ಬಿ.ಎಸ್.ಕಡಕಭಾವಿ, ತಾಪಂ ಇಒ ನಂದೀಪ ರಾಠೋಡ, ಡಾ.ಇಂಗಳೆ, ಲಿಂಬಾಜಿ ರಾಠೋಡ, ಜಹಾಂಗೀರ ಸೌದಾಗರ, ಜಾವೀದ ಮೋಮಿನ, ಇಲಿಯಾಸ ಬೊರಾಮಣಿ, ಪ್ರಶಾಂತ ಕಾಳೆ, ಡಾ.ಅರ್ಚನಾ ಕುಲಕರ್ಣಿ, ಜೀತಪ್ಪ ಕಲ್ಯಾಣಿ, ಭೀಮಾಶಂಕರ ಮೂರಮನ, ಮುಸ್ತಾಕ ಇಂಡಿಕರ, ಸತೀಶ ಕುಂಬಾರ, ಡಾ.ರಾಜೇಶ ಕೋಳೆಕರ, ಸಂತೋಷ ಪರಸೆನವರ, ಶಿವಯೋಗೆಪ್ಪ ಚನಗೊಂಡ, ಭೀಮಣ್ಣ ಕವಲಗಿ, ಸುಧೀರ ಕರಕಟ್ಟಿ, ಡಾ.ಅಮೀತ ಕೊಳೆಕರ, ಡಾ.ಧೂಮಗೊಂಡ, ಡಾ.ರವಿ, ಡಾ.ಪ್ರವೀಣ, ಡಾ.ವಿಪುಲ, ಡಾ.ಸಂತೋಷ, ಡಾ.ವಿಕಾಸ, ರವಿ ಪೊಳ, ವಿಜಯಲಕ್ಷ್ಮಿ ಹಾದಿಮನಿ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.

PREV

Recommended Stories

ಕೂಡಲೇ ಹಳದಿ ಮಾರ್ಗ ಮೆಟ್ರೋ ಉದ್ಘಾಟನೆ ಮಾಡಿ : ತೇಜಸ್ವಿ ಆಗ್ರಹ
ಐದು ಸಾವಿರ ಕೋಟಿ ರು. ವೆಚ್ಚದ 5ನೇ ಹಂತದ ಕಾವೇರಿ ಯೋಜನೆಗೆ ಕೇವಲ 70 ಸಾವಿರ ಸಂಪರ್ಕ!