ತನ್ನ ಮೂವರು ಹೆಣ್ಮಕ್ಕಳಿಗೆ ವಿಷದ ಮಾತ್ರೆ ಉಣ್ಣಿಸಿ, ತಾನೂ ಸಹ ವಿಷ ಸೇವಿಸಿದ್ದ ತಾಯಿ ಸೇರಿದಂತೆ ಒಂದು ಮಗು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ. ಇನ್ನುಳಿದ ಇಬ್ಬರು ಮಕ್ಕಳು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಧಾರವಾಡ:
ತನ್ನ ಮೂವರು ಹೆಣ್ಮಕ್ಕಳಿಗೆ ವಿಷದ ಮಾತ್ರೆ ಉಣ್ಣಿಸಿ, ತಾನೂ ಸಹ ವಿಷ ಸೇವಿಸಿದ್ದ ತಾಯಿ ಸೇರಿದಂತೆ ಒಂದು ಮಗು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ. ಇನ್ನುಳಿದ ಇಬ್ಬರು ಮಕ್ಕಳು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಸಮೀಪದ ಕರಡಿಗುಡ್ಡ ಗ್ರಾಮದಲ್ಲಿ ಶನಿವಾರ ನಡೆದ ಈ ದುರ್ಘಟನೆಯಲ್ಲಿ ತಾಯಿ ಸವಿತಾ ಮಲ್ಲಿಕಾರ್ಜುನ ಕುರಗುಂದ (38) ಹಾಗೂ ಎಂಟು ವರ್ಷದ ಗದಿಗೆವ್ವ ಕುರಗುಂದ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆರು ವರ್ಷದ ಭಾಗ್ಯಶ್ರೀ ಹಾಗೂ ಎರಡು ವರ್ಷದ ಹರ್ಷ ಎಂಬ ಮಕ್ಕಳ ಸ್ಥಿತಿ ಚಿಂತಾಜನಕವಾಗಿದ್ದು, ಸಾವು -ಬದುಕಿನ ಮಧ್ಯೆ ಹೋರಾಡುತ್ತಿವೆ.
ಆತ್ಮಹತ್ಯೆ ಮಾಡಿಕೊಂಡಿರುವ ಸವಿತಾ ಅವರು ಬೇರೆ ಬೇರೆ ಕಾರಣಕ್ಕಾಗಿ ವಿವಿಧ ಸಂಘ ಹಾಗೂ ಖಾಸಗಿಯಾಗಿ ಕೈಗಡವಾಗಿ ₹ 2.5 ಲಕ್ಷ ಸಾಲ ಮಾಡಿಕೊಂಡಿದ್ದರು. ಸಾಲ ಮರುಪಾವತಿ ಮಾಡಲಾಗದೆ ಮಾನಕ್ಕೆ ಅಂಜಿ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಪ್ರಾಥಮಿಕ ಮಾಹಿತಿ ಇದೆ.
ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ಮನಕಲಕುವ ಘಟನೆ ಕಣ್ಣಾರೆ ಕಂಡ ಗ್ರಾಮಸ್ಥರು ತಾನು ಮಾಡಿದ ತಪ್ಪಿಗೆ ಮಕ್ಕಳಿಗೆ ವಿಷ ಉಣ್ಣಿಸಿ ಕೊಲ್ಲುವ ಶಿಕ್ಷೆ ಕೊಡಬಾರದಿತ್ತು ಎಂದು ತಾಯಿ ಸವಿತಾಳಿಗೆ ಹಿಡಿಶಾಪ ಹಾಕುತ್ತಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.