ಕನ್ನಡಪ್ರಭ ವಾರ್ತೆ ನವಲಗುಂದ
ಗ್ರಾಮದ ಸಾವಿತ್ರಿ ಮಂಜುನಾಥ ಸರಕಾರ (26), ಮಕ್ಕಳಾದ ದರ್ಶನ (6) ಮತ್ತು ಸುಮಾ (4) ಮೃತ ದುರ್ದೈವಿಗಳು.
ಗಂಡ ಮತ್ತು ಗಂಡನ ಮನೆಯವರು ಕಿರುಕುಳ ನೀಡಿದ್ದರಿಂದ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಂದೆ ಶಿವಕಲ್ಲಪ್ಪ ಫಕ್ಕೀರಪ್ಪ ನರ್ತಿ ದೂರಿದ್ದು, ಮಗಳ ಸಾವಿನ ಕುರಿತು ಶಂಕೆ ಇದ್ದು ಕೂಲಂಕಷವಾಗಿ ತನಿಖೆಯಾಗಬೇಕು ಎಂದಿದ್ದಾರೆ.ಮದುವೆಯಾಗಿ 6 ವರ್ಷಗಳು ಕಳೆದರೂ ಗಂಡ ಮಂಜುನಾಥ ಕಲ್ಲಪ್ಪ ಸರಕಾರ, ಪಾರ್ವತೆವ್ವ ಕಲ್ಲಪ್ಪ ಸರಕಾರ, ಕಲ್ಲಪ್ಪ ಶಿವಪ್ಪ ಸರಕಾರ ಮಾನಸಿಕ ಕಿರುಕುಳ ನೀಡುತ್ತಿದ್ದರು. ಸಾವಿತ್ರಿಗೆ ಕೆಲಸ ಮಾಡಲು ಬರುವುದಿಲ್ಲ ಎಂದು ಬೈದಾಡುತ್ತಿದ್ದರು. ಅಲ್ಲದೆ, ಮನೆಗೆ ಬರುವವರ ಮುಂದೆ ಅವಮಾನಿಸಿದ್ದರಿಂದ ಮಾನಸಿಕವಾಗಿ ನೊಂದು ಶನಿವಾರ ರಾತ್ರಿ ವೇಳೆ ಮನೆಯ ಜಂತಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೊಮ್ಮಕ್ಕಳಾದ ದರ್ಶನ ಮತ್ತು ಸುಮಾ ಅವರ ಕುತ್ತಿಗೆಗೆ ಗಾಯವಾಗಿದ್ದು, ಕೊಲೆ ಮಾಡಿದ್ದಾರೆ ಎಂಬ ಸಂಶಯವಿದೆ ಎಂದು ಶಿವಕಲ್ಲಪ್ಪ ನರ್ತಿ (ಧಾರವಾಡ ಜಿಲ್ಲೆಯ ಸುಳ್ಳ ಗ್ರಾಮ) ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.