ಸೆಫ್ಟಿಕ್ ಟ್ಯಾಂಕಿಗೆ ಬಿದ್ದ ಮರಿಯ ರಕ್ಷಿಸಿದ ತಾಯಾನೆ

KannadaprabhaNewsNetwork |  
Published : Jul 16, 2026, 03:15 AM IST
ತಾಯಿ ಆನೆಯಿಂದ ಮರಿಯಾನೆ ರಕ್ಷಣೆ | Kannada Prabha

ಸಾರಾಂಶ

ಆಹಾರ ಅರಸಿ ಬಂದ ಕಾಡಾನೆಗಳ ಹಿಂಡಿನಲ್ಲಿದ್ದ ಮರಿಯಾನೆಯೊಂದು ಸೆಫ್ಟಿಕ್ ಟ್ಯಾಂಕ್ ಗೆ ಬಿದ್ದ ಘಟನೆ ಕುಶಾಲನಗರ ಅರಣ್ಯ ವಲಯದ ನೆಲ್ಯಹುದಿಕೇರಿ ವ್ಯಾಪ್ತಿಯ ನಾಲ್ವತೆಕ್ರೆಯಲ್ಲಿ ನಡೆದಿದೆ.

ಕನ್ನಡಪ್ರಭವಾರ್ತೆ ಮಡಿಕೇರಿಆಹಾರ ಅರಸಿ ಬಂದ ಕಾಡಾನೆಗಳ ಹಿಂಡಿನಲ್ಲಿದ್ದ ಮರಿಯಾನೆಯೊಂದು ಸೆಫ್ಟಿಕ್ ಟ್ಯಾಂಕ್ ಗೆ ಬಿದ್ದ ಘಟನೆ ಕುಶಾಲನಗರ ಅರಣ್ಯ ವಲಯದ ನೆಲ್ಯಹುದಿಕೇರಿ ವ್ಯಾಪ್ತಿಯ ನಾಲ್ವತೆಕ್ರೆಯಲ್ಲಿ ನಡೆದಿದೆ.ನಾಲ್ವತೆಕ್ರೆ ನಿವಾಸಿ ಮಣಿ ಎಂಬುವವರ ಮನೆ ಬಳಿ ಬಂದ ಆನೆ ಗುಂಪಿನಲ್ಲಿದ್ದ ಮರಿಯೊಂದು ನಿರ್ಮಾಣ ಹಂತದಲ್ಲಿರೋ ಸೆಫ್ಟಿಂಕ್‌ ಟ್ಯಾಂಕ್‌ಗೆ ಬಿದ್ದಿದೆ. ಮಂಗಳವಾರ ರಾತ್ರಿ 7.30 ಸುಮಾರಿಗೆ ಘಟನೆ ನಡೆದಿದ್ದು, ಗುಂಡಿಯಿಂದ ಮೇಲಕ್ಕೆರಲು ಮರಿಯಾನೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟಿದೆ. ಕೂಡಲೇ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ತಲುಪುವ ಮುನ್ನವೇ ತಾಯನೆ ಸಹಾಯದಿಂದ ಗುಂಡಿಯಿಂದ ಮೇಲೇರಿದ ಆನೆ ಮರಿ ಗುಂಪಿನೊಂದಿಗೆ ಕಾಡಿನತ್ತ ಸಾಗಿದೆ.

ಇಲಾಖೆ ಮನವಿ: ಕಾಡಾನೆ ಮರಿಗಳು ತೆರೆದ ಗುಂಡಿಯೊಳಗೆ ಬೀಳಬಹುದಾದ ಸಾಧ್ಯತೆ ಇರುವ ಹಿನ್ನೆಲೆ, ತಮ್ಮ ಮನೆ, ಶಾಲೆ ಮತ್ತು ತೋಟಗಳಲ್ಲಿ ಮೇಲೆ ಮುಚ್ಚದೆ ಇರುವ ಕಸದ ಗುಂಡಿ ಹಾಗೂ ಸೆಫ್ಟಿಕ್ ಟ್ಯಾಂಕ್ ಗುಂಡಿಗಳನ್ನು ತುರ್ತಾಗಿ ಮುಚ್ಚುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಘಟನೆ ಸಂಬಂಧ ಕುಶಾಲನಗರ ವಲಯ ಮೀನುಕೊಳ್ಳಿ ವಿಭಾಗದ

ಡಿಆರ್‌ಎಫ್‌ಒ ಸಚಿನ್ ನಿಂಬಾಳ್ಕರ್, ಅರಣ್ಯ ವೀಕ್ಷಕರಾದ ಜಗದೀಶ್, ತಿಲಕ್, ಸತೀಶ್, ಆಶಿಕ್ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಬೆಳುವಾಯಿ ಘಟಕಕ್ಕೆ ಮುರಳಿಧರ್ ಎಸ್. ಅಧ್ಯಕ್ಷರಾಗಿ ಆಯ್ಕೆ
ಪಂಚವರ್ಣಕ್ಕೆ ಹಸಿರು ರಥ ಹಸ್ತಾಂತರ