ಸವಣೂರು: ಜಾತ್ರೆ ಎಲ್ಲರಿಗೂ ಸಂತೋಷ, ಸಂಭ್ರಮ ತರುವ ಉತ್ಸವವಾಗಿದೆ ಎಂದು ಶಿರಹಟ್ಟಿಯ ಫಕೀರ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.ತಾಲೂಕಿನ ಗುಂಡೂರು ಗ್ರಾಮದ ಗ್ರಾಮದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಧರ್ಮ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.ಶ್ರೀದೇವಿ ಕರುಣೆಗೆ, ಪ್ರೀತಿಗೆ ಸಾಕ್ಷಿಯಾಗಿರುವಂತ ದೇವರು. ಕರುಣಾಮಯಿ, ಪ್ರೇಮಾಮಯಿ ಹಾಗೂ ಅಂತಃಕರಣಮಯಿ ದೇವಿ ತಾಯಿ ಸಮಾನವಾಗಿದ್ದಾಳೆ. ಭೂಮಿ ಮೇಲಿನ ಕಣ್ಣಿಗೆ ಕಾಣುವ ನಡೆದಾಡುವ ದೇವರು ತಾಯಿಯಾಗಿದ್ದಾಳೆ. ಅಂತಹ ತಾಯಿಗೆ ಮಕ್ಕಳು ಸರಿಯಾಗಿ ನೋಡಿಕೊಳ್ಳದೇ ಗ್ರಾಮದೇವಿಯ ಜಾತ್ರೆ ಮಾಡಿದರೆ ಯಾವ ಪ್ರಯೋಜನವೂ ಇಲ್ಲ. ಹಾಗಾಗಿ ತಾಯಿ- ತಂದೆಯರನ್ನು ಬಿಟ್ಟು ಬೇರೆ ದೇವರಿಲ್ಲ ಎಂಬುದನ್ನು ಅರಿಯಬೇಕು ಎಂದರು.ಹಿರೇಮಣಕಟ್ಟಿಯ ಹಿರೇಮಠದ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ರಾಣಿಬೆನ್ನೂರಿನ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಡಾ. ಬಸವರಾಜ ತೋಟದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ನಿವೃತ್ತ ಪ್ರಾಚಾರ್ಯ ಗುಂಡೂರಿನ ಡಾ. ಎಚ್.ಐ. ತಿಮ್ಮಾಪುರ ಅವರ ಗುಣಮಧುರ ಅಭಿನಂದನಾ ಗ್ರಂಥವನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು.
ಸವಣೂರಿನ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಗಂಗಾನಾಯಕ ಎಲ್., ಗ್ರಂಥ ಪರಿಚಯ ಮಾಡಿದರು.ಪ್ರಮುಖರಾದ ಫಕ್ಕೀರಯ್ಯ ಹಿರೇಮಠ, ಗುರುಪುತ್ರಯ್ಯ ಹಿರೇಮಠ, ಶೇಖಯ್ಯ ಹಿರೇಮಠ, ಶಂಕರಗೌಡ್ರ ಪಾಟೀಲ, ಶೇಕಪ್ಪ ದೇಟಿನ, ಆನಂದಯ್ಯ ಕಲ್ಮಠ, ನಿಂಗಪ್ಪ ಕೆಮ್ಮಣಕೇರಿ, ಫಕೀರೇಶ ಕಮಡೊಳ್ಳಿ, ರೇವಣಪ್ಪ ನೇಗುಣಿ, ವೈ.ಬಿ. ಪಾಟೀಲ, ಕುಬೇರಪ್ಪ ಗಾಣಿಗೇರ, ಬಸನಗೌಡ ಕೊಪ್ಪದ, ಧರಿಯಪ್ಪಗೌಡ ಪಾಟೀಲ, ಚಿದಾನಂದ ಬಡಿಗೇರ, ಬಸವರಾಜ ಸವೂರ, ಎಂ.ಜಿ. ಪಾಟೀಲ, ಬಿ.ಪಿ. ಪಾಟೀಲ, ವಿಶ್ವನಾಥ ಹಾವಣಗಿ, ಪ್ರಭು ಅರಗೋಳ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು. ಶಿಕ್ಷಕರಾದ ಶಿವಕುಮಾರ ಗಾಣಿಗೇರ, ನಜೀರಸಾಬ್ ಮುರಡಿ ನಿರ್ವಹಿಸಿದರು.ಶೇಷಗಿರಿಯಲ್ಲಿ ರಂಗಾಯಣ ನಾಟಕ ಪ್ರದರ್ಶನ ಇಂದುಹಾನಗಲ್ಲ: ತಾಲೂಕಿನ ರಂಗ ಗ್ರಾಮ ಶೇಷಗಿರಿಯಲ್ಲಿ ಮಾ. 18ರಂದು ರಂಗಾಯಣ ಪ್ರಸ್ತುತಿಯಲ್ಲಿ ಸತ್ತವರ ನೆರಳು ನಾಟಕ ಪ್ರದರ್ಶನಗೊಳ್ಳಲಿದ್ದು, ಶಿಗ್ಗಾಂವಿಯ ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡೀಗೌಡ್ರ ನಾಟಕ ಉದ್ಘಾಟಿಸುವರು.
ಮಂಗಳವಾರ ಸಂಜೆ 7 ಗಂಟೆಗೆ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ಧಾರವಾಡ, ಶ್ರೀ ಗಜಾನನ ಯುವಕ ಮಂಡಳದ ಆಶ್ರಯದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನೀಕಟ್ಟಿ, ಲಲಿತ ಕಲಾ ಅಕಾಡಿಮಿ ಸದಸ್ಯ ಕರಿಯಪ್ಪ ಹಂಚಿನಮನಿ, ಸಾಹಿತಿ ಡಾ. ಎಂ. ಪ್ರಸನ್ನಕುಮಾರ, ಗ್ರಾಪಂ ಅಧ್ಯಕ್ಷೆ ರೇಖಾ ಕುರುಬರ, ಸದಸ್ಯೆ ಸುಶೀಲಾ ತಳವಾರ, ಸಿದ್ದಪ್ಪ ಅಂಬಿಗೇರ ಅತಿಥಿಗಳಾಗಿ ಪಾಲ್ಗೊಳ್ಳುವರು. ಶಂಕರಪ್ಪ ಗುರಪ್ಪನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ಸಂಘದ ಅಧ್ಯಕ್ಷ ಪ್ರಭು ಗುರಪ್ಪನವರ, ಸಂಚಾಲಕ ನಾಗರಾಜ ಧಾರೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.