ಚನ್ನಬಸವೇಶ್ವರ ಮೂರ್ತಿಯಿಂದ ಪಟ್ಟಣಕ್ಕೆ ಹಿರಿಮೆ

KannadaprabhaNewsNetwork |  
Published : Mar 18, 2025, 12:32 AM IST
ಬೈಲಹೊಂಗಲ | Kannada Prabha

ಸಾರಾಂಶ

ಭಕ್ತರ ಅಭಿಲಾಷೆಯಂತೆ 21 ಅಡಿ ಎತ್ತರದ ಭವ್ಯವಾದ ಉಳವಿ ಚನ್ನಬಸವೇಶ್ವರ ಮೂರ್ತಿ ನಿರ್ಮಾಣ ಕಾರ್ಯ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ನಮ್ಮ ಭಾಗದ ರೈತರ ಆರಾಧ್ಯದೈವ ಉಳವಿ ಚನ್ನಬಸವೇಶ್ವರ ಮೂರ್ತಿ ಸ್ಥಾಪನೆಯಾಗುತ್ತಿರುವುದು ಸಂತೋಷದ ವಿಷಯ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಪಟ್ಟಣದ ದೊಡ್ಡ ಕೆರೆ ಉದ್ಯಾನವನದಲ್ಲಿ ನಿರ್ಮಾಣವಾಗಲಿರುವ ಉಳವಿ ಚನ್ನಬಸವೇಶ್ವರರ ಮೂರ್ತಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಭಕ್ತರ ಅಭಿಲಾಷೆಯಂತೆ 21 ಅಡಿ ಎತ್ತರದ ಭವ್ಯವಾದ ಉಳವಿ ಚನ್ನಬಸವೇಶ್ವರ ಮೂರ್ತಿ ನಿರ್ಮಾಣ ಕಾರ್ಯ ನಡೆಯಲಿದೆ. ನುರಿತ ಶಿಲ್ಪಿಗಳಿಂದ ನಿರ್ಮಾಣವಾಗುವ ಉತ್ತಮ ಮೂರ್ತಿಯಿಂದ ಪಟ್ಟಣದ ಹಿರಿಮೆ ಹೆಚ್ಚಲಿದೆ ಎಂದರು.

ಚಿತ್ರನಟ ಶಿವರಂಜನ ಬೋಳನ್ನವರ ಮಾತನಾಡಿ, ಶಾಸಕ ಮಹಾಂತೇಶ ಕೌಜಲಗಿ ಅವರ ಸಹಕಾರದಿಂದ ದೊಡ್ಡ ಕೆರೆಯ ಉದ್ಯಾನವನದಲ್ಲಿ ಚನ್ನಬಸವೇಶ್ವರರ ಮೂರ್ತಿ ನಿರ್ಮಾಣಕ್ಕಾಗಿ 10 ಅಡಿ ಆಳದ ಹಾಗೂ 14 ಅಡಿ ಎತ್ತರದ ಫಿಲರ್ ನಿರ್ಮಿತವಾಗಿದೆ. ಪುರಸಭೆಯಿಂದ ಅಭಿವೃದ್ಧಿಗೊಳಿಸಲಾದ ದೊಡ್ಡಕೆರೆಯಲ್ಲಿ ಚನ್ನಬಸವೇಶ್ವರರ ಮೂರ್ತಿ ಪ್ರತಿಷ್ಠಾಪನೆಗೆ ಭಕ್ತರು ಸಹಕಾರ ನೀಡಬೇಕೆಂದರು.

ಸದಾಶಿವಯ್ಯ ಪತ್ರಿಮಠ ಶಾಸ್ತ್ರಿ ಪೂಜೆ ವಿಧಿವಿಧಾನ ನೆರವೇರಿಸಿದರು. ಬ್ರಹ್ಮಕುಮಾರಿ ಈಶ್ವರೀಯ ಪ್ರಭಾ ಅಕ್ಕ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಮಹಾಂತಯ್ಯ ಆರಾದ್ರಿಮಠ ಶಾಸ್ತ್ರಿ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಪುರಸಭೆ ಮುಖ್ಯಾಧಿಕಾರಿ ವಿರೇಶ ಹಸಬಿ, ವಿರೂಪಾಕ್ಷಯ್ಯ ಕೋರಿಮಠ, ರಾಜು ಜನ್ಮಟ್ಟಿ, ಡಾ.ಎ.ಎನ್.ಬಾಳಿ, ಮಹಾಂತೇಶ ತುರಮರಿ, ಪ್ರಮೋದಕುಮಾರ ವಕ್ಕುಂದಮಠ, ಬಿ.ಬಿ.ಗಣಾಚಾರಿ, ಶ್ರೀಶೈಲ ಯಡಳ್ಳಿ, ಮಡಿವಾಳಪ್ಪ ಹೋಟಿ, ಪಾಂಡಪ್ಪ ಇಂಚಲ, ಎಫ್.ಎಸ್.ಸಿದ್ದನಗೌಡರ, ಕಾಶೀನಾಥ ಬಿರಾದಾರ, ಬಸವರಾಜ ಭರಮಣ್ಣವರ, ಮೋಹನ ಪಾಟೀಲ, ಸುಭಾಷ ತುರಮರಿ, ಶಂಕರ ಬೋಳನ್ನವರ ಸೇರಿ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ