ಕನ್ನಡಪ್ರಭ ವಾರ್ತೆ ಔರಾದ್
ಅವ್ವ ಎಂದರೆ ತ್ಯಾಗ ಮತ್ತು ಪ್ರೀತಿಯ ಸ್ವರೂಪಳಾಗಿದ್ದು, ಅವಳ ಋಣ ಎಂದಿಗೂ ತಿರಿಸಲು ಆಗಲಾರದು, ಅಮ್ಮ ಇಲ್ಲದೇ ಜಗವೇ ಬರಿ ಶೂನ್ಯವಾಗಿದೆ ಎಂದು ಬೀದರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಪಕಿ ಡಾ.ಜ್ಯೋತಿ ಎಕ್ಕೆಳ್ಳೆ ನುಡಿದರು.ತಾಲೂಕಿನ ವಡಗಾಂವ(ದೇ) ಗ್ರಾಮದಲ್ಲಿ ಆರಾಧ್ಯ ಬೇಸಿಗೆ ತರಬೇತಿ ಕೇಂದ್ರದಲ್ಲಿ ಏರ್ಪಡಿಸಿದ ವಿಶ್ವ ತಾಯಂದಿರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅವ್ವ ಎಂದರೆ ಕರುಣೆ, ಅವ್ವ ಎಂದರೆ ವಾತ್ಸಲ್ಯ, ಅವ್ವ ಎಂದರೆ ಆಸರೆ, ಅವ್ವ ಎಂದರೆ ಹೋರಾಟ, ಅವ್ವ ಎಂದರೆ ತ್ಯಾಗ, ಅವ್ವ ಎಂದರೆ ಪ್ರೀತಿ, ಅವ್ವ ಎಂದರೆ ವಾತ್ಸಲ್ಯ. ಹಾಗಾಗಿ ಆಕೆಯನ್ನು ಏನೆಂದು ವರ್ಣಿಸಿದರೂ ಅದು ಕಡಿಮೆಯಾಗುತ್ತದೆ. ಅಮ್ಮ ಎನ್ನುವ ಶಕ್ತಿಯಲ್ಲಿ ಜಗತ್ತೇ ಅಡಗಿದೆ. ಅವಳಿಲ್ಲದೇ ಜೀವನವೇ ಬರಿಶೂನ್ಯವಾಗಿದೆ. ಎಲ್ಲರು ತಾಯಂದಿರನ್ನು ಗೌರವಿಸಿ ಅವರ ಋಣ ತೀರಿಸಬೇಕು ಎಂದರು.
ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವು ಕೂಡಾ ನಮ್ಮನ್ನು ಜನ್ಮ ನೀಡಿದ ತಾಯಂದಿರಿಗೆ ಪೂಜೆ ಗೌರವ ಸಲ್ಲಿಸಲು ಈ ವರ್ಷವು ಕೂಡಾ ಅಧ್ದೂರಿಯಾಗಿ ಕಾರ್ಯಕ್ರಮ ಹಮ್ಮಿಕೊಂಡು ತಾಯಂದಿರಿಗೆ ಗೌರವಿಸಿ ಅವರ ಪಾದಗಳಿಗೆ ನಮಿಸಿ ಸನ್ಮಾನ ಮಾಡಿದ್ದೇವೆ ಎಂದರು.ತಾಯಂದಿರ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮೀತವಾಗದೇ ದಿನಾಲು ಆಚರಿಸುವಂತಾಗಬೇಕು. ಮನೆಯಲ್ಲಿ ಮುಂಜಾನೆ ಎದ್ದ ತಕ್ಷಣ ಎಲ್ಲರು ತಂದೆ ತಾದಿಯಂರಿಗೆ ನಮಸ್ಕರಿಸಿದರೇ ಮಾತ್ರ ಅವರ ಬದುಕು ಬಂಗಾರವಾಗುತ್ತದೆ ಎಂದರು.
ಸಂಪನ್ಮೂಲ ಶಿಕ್ಷಕ ಸಂತೋಷ ಮಹಾರಾಜವಾಡೆ ಮಾತನಾಡಿ, ತಾಯಿಗೆ ಸರಿಸಾಟಿ ಯಾರು ಇರಲು ಸಾಧ್ಯವಿಲ್ಲ. ಅವಳಿಗೆ ಅವಳೇ ಸಾಟಿ ಮತ್ತು ಸ್ಫೂರ್ತಿ. ಆ ಸ್ಥಾನಕ್ಕೆ ಅವಳೇ ಅಮೃತ ಕಳಸ ಎಂದರು.ಆರಾಧ್ಯ ಬೇಸಿಗೆ ತರಬೇತಿ ಕೇಂದ್ರದ ಮಕ್ಕಳಿಂದ ತಾಯಿಗೆ ನಮನ ಸಲ್ಲಿಸುವ ಅನೇಕ ಮನೋರಂಜನಾ ಹಾಗು ಮನ ಕರಗುವ ನಾಟಕ ಮತ್ತು ಕಲೆಗಳ ಪ್ರದರ್ಶನ ಜರುಗಿದವು.
ಎಲ್ಲ ತಾಯಂದಿರಿಗೆ ಗೌರವಿಸಿ, ಸನ್ಮಾನಿಸಿ ತಾಯಂದಿರ ದಿನಾಚರಣೆಗೆ ಶೋಭೆ ತರಲಾಯಿತು. .ನಸೀಮಾಬೇಗಮ್, ಶ್ರೀದೇವಿ ಗೌಡಾ, ಡಾ. ಸಿದ್ದರೆಡ್ಡಿ ಬಿರಾದರ್, ರತಿಕಾಂತ ನೇಳಗೆ, ಚಂದ್ರಕಾಂತ ಫುಲೆ, ಸಿದ್ದಪ್ಪ, ಪ್ರೀಯಾಂಕಾ, ಅಂಬಿಕಾ, ರೇಣುಕಾ, ಸೋನಿ, ಪೂಜಾ, ಆಕಾಶ, ನಸೀಮಾಬೇಗಂ, ಶ್ರೀದೇವಿ ಗೌಡಾ, ಡಾ. ಸಿದ್ದರೆಡ್ಡಿ ಬಿರಾದರ್, ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ, ರತಿಕಾಂತ ನೇಳಗೆ, ಹಾವಗಿರಾವ್ ಇತರರಿದ್ದರು. ಶಿಕ್ಷಕ ಹಾವಗಿರಾವ್ ನೇಳಗೆ ವಂದಿಸಿ ನಿರೂಪಿಸಿದರು.