ತಾಯಿಯ ಎದೆಹಾಲು ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲಿದೆ-ಗಣೇಶ ಲಿಂಗನಗೌಡ್ರ

KannadaprabhaNewsNetwork |  
Published : Oct 12, 2026, 02:30 AM IST
 ಶಿಗ್ಗಾವಿ ತಾಲೂಕಿನ ಸುರಫಗಟ್ಟಿ ಗ್ರಾಮದಲ್ಲಿ ನಡೆದ ಪೋಷಣ ಮಾಸಾಚರಣೆ ಸಮಾರೋಪ ಸಭೆಯನ್ನುದ್ದೇಸಿಸಿ ಸಿಡಿಪಿಓ ಗಣೇಶ ಲಿಂಗನಗೌಡ್ರ ಮಾತನಾಡಿದರು.      | Kannada Prabha

ಸಾರಾಂಶ

ಪೋಷಣ ಅಭಿಯಾನವು ಹದಿಹರೆಯದ ಹುಡುಗಿಯರ, ಗರ್ಭಿಣಿ ತಾಯಂದಿರ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುವ ಭಾರತ ಸರ್ಕಾರದ ಮಹತ್ವಪೂರ್ಣ ಯೋಜನೆಯಾಗಿದೆ ಎಂದು ಸಿಡಿಪಿಓ ಗಣೇಶ ಲಿಂಗನಗೌಡ್ರ ಹೇಳಿದರು.

ಶಿಗ್ಗಾಂವಿ: ಪೋಷಣ ಅಭಿಯಾನವು ಹದಿಹರೆಯದ ಹುಡುಗಿಯರ, ಗರ್ಭಿಣಿ ತಾಯಂದಿರ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುವ ಭಾರತ ಸರ್ಕಾರದ ಮಹತ್ವಪೂರ್ಣ ಯೋಜನೆಯಾಗಿದೆ ಎಂದು ಸಿಡಿಪಿಓ ಗಣೇಶ ಲಿಂಗನಗೌಡ್ರ ಹೇಳಿದರು.

ಸುರಫಗಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದ, ಪೋಷಣ ಅಭಿಯಾನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಮಹತ್ವಾಕಾಂಕ್ಷಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರು 2018 ಮಾ. 8ರಂದು ಚಾಲನೆ ನೀಡಿದರು. ಯೋಜನೆಯ ಪ್ರಯೋಜನವನ್ನು ಗರ್ಭಿಣಿ, ತಾಯಂದಿರು ಪಡೆದುಕೊಂಡು ಆರೋಗ್ಯವಂತ ಮಕ್ಕಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿ ಆರೋಗ್ಯಯುತ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.

ಜಿಲ್ಲಾ ನಿರೂಪಣಾಧಿಕಾರಿ ಶೈಲಜಾ ಕುರಹಟ್ಟಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಅಂಗನವಾಡಿ, ನಮ್ಮ ಜವಾಬ್ದಾರಿ ಎಂಬ ಧ್ಯೇಯವಾಕ್ಯದಂತೆ ಸಮೂದಾಯದ ಪಾತ್ರವು ಅಷ್ಟೇ ಮುಖ್ಯವಾಗಿದೆ. ಹಣ್ಣು ತರಕಾರಿ ಹಸಿ ಸೊಪ್ಪು ಸೇವಿಸುವ ಮೂಲಕ ಆರೋಗ್ಯಯುತ ಮಕ್ಕಳ ಜನನಕ್ಕೆ ಗರ್ಭಿಣಿಯರು ಕಾರಣರಾಗಬೇಕು. ಜನನವಾದ ಮಗುವಿಗೆ ತಾಯಿಯ ಎದೆಹಾಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ. ಸರ್ಕಾರ ಗರ್ಭಿಣಿ ಹಾಗೂ ಜನಿಸಿದ ಮಗುವಿನ ಆರೋಗ್ಯದ ಹಿತದೃಷ್ಟಿಯಿಂದ ಉಚಿತ ತಪಾಸಣೆ, ಔಷಧೋಪಚಾರ ನೀಡಲಾಗುತ್ತಿದೆ. ಸಮಯಕ್ಕೆ ಸರಿಯಾಗಿ ತಪಾಸಣೆಗೆ ಒಳಗಾಗಿ ಔಷಧೋಪಚಾರ ಸೇವಿಸುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸುವಂತೆ ತಾಯಂದಿರಿಗೆ ಕರೆ ನೀಡಿದರು.

ಮೇಲ್ವಿಚಾರಕಿ ಲಕ್ಷ್ಮಿ ಬಗಾಡೆ ಮಾತನಾಡಿದರು. ಸಭೆಯಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯ, ಜನನವಾದ ಮಗುವಿಗೆ ನಾಮಕರಣ, ಅನ್ನಪಾಶನ ಕಾರ್ಯಕ್ರಮ ಕೈಗೊಳ್ಳಲಾಯಿತು. ನಂತರ ಹೆಣ್ಣು ಮಗುವಿನ ದಿನಾಚರಣೆ, 3 ವರ್ಷದ ಮಕ್ಕಳಿಗೆ ಅಕ್ಕಿಯಲ್ಲಿ ಅಕ್ಷರ ಜ್ಞಾನ ಕಾರ್ಯಕ್ರಮ ಮಾಡಲಾಯಿತು.

ವಲಯ ಮೇಲ್ವಿಚಾರಕಿ ಸುಜಾತಾ ಜವಳಗೇರಿ, ವಿಜಯಲಕ್ಷ್ಮಿ, ಲತಾ ಸಾತಣ್ಣನವರ, ಪವಿತ್ರಾ ಕಾಮನಹಳ್ಳಿ ಸೇರಿದಂತೆ ಸರ್ವ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಡಗು ಗೌಡ ವಿದ್ಯಾ ಸಂಘದಿಂದ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ
ಕನ್ನಡ ರಾಜ್ಯೋತ್ಸವ ಆಚರಣೆಗೆ ಪೂರ್ವಭಾವಿ ಸಭೆ