ಕನಕಪುರ: ಸುಮಾರು 700 ವರ್ಷಗಳ ಇತಿಹಾಸ ಹೊಂದಿರು ಶ್ರೀ ದೇಗುಲ ಮಠದ ಹಿರಿಯ ಮುಮ್ಮಡಿ ಡಾ. ಶ್ರೀ ನಿರ್ವಾಣ ಸ್ವಾಮೀಜಿ ಲಿಂಗೈಕ್ಯದಿಂದ ತಾಲೂಕಿನ ಶ್ರದ್ಧಾ ಹಾಗೂ ಭಕ್ತಿ ಕೇಂದ್ರದ ಹಿರಿಯ ಕೊಂಡಿಯೊಂದು ಕಳಚಿ ಭಕ್ತ ಸಮೂಹ ಅನಾಥವಾಗಿದೆ.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದ ಶ್ರೀಗಳು, ಬಿಡುವಿನ ವೇಳೆಯಲ್ಲಿ ತಮ್ಮ ಸ್ವಗ್ರಾಮದಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದರು. 1965ರಲ್ಲಿ ಶ್ರೀಗಳ ತಂದೆ ಲಿಂಗೈಕ್ಯರಾದ
ಬಳಿಕ ಶಿಕ್ಷಣದ ಜೊತೆಗೆ ಮನೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು. 1970ರಲ್ಲಿ ಮಳವಳ್ಳಿ ತಾಲೂಕಿನ ನೆಲ್ಲಗೆರೆ ಮಠದ ಉತ್ತರಾಧಿಕಾರಿಯಾಗಿ ಪಟ್ಟಾಧಿಕಾರ ಪಡೆದು ಮಠವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. 1977ರಲ್ಲಿ ಶ್ರೀ ದೇಗುಲ ಮಠದ ಹಿರಿಯ ಶ್ರೀಗಳ ಒತ್ತಾಸೆಯಂತೆ ತಮ್ಮ 34ನೇ ವಯಸ್ಸಿಗೆ ಶ್ರೀ ಮಠದ ಉತ್ತರಾಧಿಕಾರಿಯಾಗಿ ಬಂದು ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳಾಗಿ ದೀಕ್ಷೆ ಪಡೆದು ಮಠದ ಧಾರ್ಮಿಕ, ಶೈಕ್ಷಣಿಕ ಕಾರ್ಯದಲ್ಲಿ ತೊಡಗಿಸಿಕೊಂಡರು.ಶ್ರೀಮಠದ ಉತ್ತರಾಧಿಕಾರಿಯಾದ ಬಳಿಕ ಹಲವು ಬದಲಾವಣೆ ತಂದು ಶೈಕ್ಷಣಿಕ ಸಂಸ್ಥೆಗಳನ್ನು ತೆರೆದು ತಾಲೂಕಿನ ಗ್ರಾಮೀಣ ಭಾಗದ ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಧಾರ್ಮಿಕ, ಸಾಮಾಜಿಕ ಕೆಲಸ ಕಾರ್ಯದ ಜೊತೆಗೆ ಶ್ರೀ ಮಠಕ್ಕೆ ಬರುವ ಭಕ್ತಾದಿಗಳಿಗೆ ಹಸಿವು ನೀಗಿಸಲು ಪ್ರತಿನಿತ್ಯ ಅನ್ನದಾಸೋಹ ಆರಂಭಿಸಿದ್ದರು.
ಲಿಂಗೈಕ್ಯ ಶ್ರೀಗಳು.