ತಾಯಿ ಗುಪ್ತಾಂಗದ ಫೋಟೋ ಲವರ್‌ಗೆ ಕಳಿಸಿದಳು!

KannadaprabhaNewsNetwork |  
Published : Feb 10, 2026, 02:00 AM IST
ಫೋಟೋ  | Kannada Prabha

ಸಾರಾಂಶ

ಕುಟುಂಬ ಸದಸ್ಯರ ಗುಪ್ತಾಂಗದ ಫೋಟೋಗಳನ್ನು ತೆಗೆದು ಪ್ರಿಯಕರನಿಗೆ ಕಳುಹಿಸಿದ್ದ ಆರೋಪದ ಮೇರೆಗೆ ಯುವತಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಬೆಂಗಳೂರು :  ಕುಟುಂಬ ಸದಸ್ಯರ ಗುಪ್ತಾಂಗದ ಫೋಟೋಗಳನ್ನು ತೆಗೆದು ಪ್ರಿಯಕರನಿಗೆ ಕಳುಹಿಸಿದ್ದ ಆರೋಪದ ಮೇರೆಗೆ ಯುವತಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಯುವತಿ ಆಕೆಯ ಸ್ನೇಹಿತ ವರುಣ್‌ ಅಲಿಯಾಸ್‌ ಗಿರಿಧರ್‌ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಿದ್ಯಾಭ್ಯಾಸಕ್ಕಾಗಿ ಮೊಬೈಲ್‌ ಬೇಕೆಂದು 23 ವರ್ಷದ ಮಗಳು ಕೇಳಿದ್ದ ಕಾರಣ ಪಾಲಕರು ಆಕೆಗೆ ಮೊಬೈಲ್ ಖರೀದಿಸಿ ಕೊಟ್ಟಿದ್ದರು. ಅದಕ್ಕೆ ಆಕೆ ಪಾಸ್‌ವರ್ಡ್‌ ಇಟ್ಟುಕೊಂಡಿದ್ದಳು. ಕೆಲವು ದಿನಗಳ ಹಿಂದೆ ಆಕೆ ಯುವಕನೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವಿಚಾರ ತಾಯಿಯ ಗಮನಕ್ಕೆ ಬಂದಿತ್ತು. ಈ ವಿಚಾರವನ್ನು ಪತಿಗೆ ತಾಯಿ ತಿಳಿಸಿದ್ದರು. ಅದಾದ ನಂತರ ಅನುಮಾನ ಬಂದು ಆಕೆಯಿಂದ ಪಾಸ್‌ವರ್ಡ್‌ ಪಡೆದು ಮೊಬೈಲ್ ಪರಿಶೀಲನೆ ನಡೆಸಿದಾಗ ಕುಟುಂಬದವರಿಗೆ ಶಾಕ್‌ ಆಗಿದೆ.

ಅಮ್ಮ-ದೊಡ್ಡಮ್ಮನ ಫೋಟೋ ಕಳುಹಿಸಿದ್ದಳು:

ಯುವತಿ ತನ್ನ ಅಮ್ಮ ಮತ್ತು ದೊಡ್ಡಮ್ಮನ ಖಾಸಗಿ ಫೋಟೋಗಳನ್ನು ರಹಸ್ಯವಾಗಿ ತೆಗೆದು ಪ್ರಿಯಕರನಿಗೆ ಕಳುಹಿಸಿರುವುದು ಗೊತ್ತಾಗಿದೆ. ಗಿರಿಧರ್ ಎಂಬಾತ ಈ ರೀತಿ ಫೋಟೋ ಕಳುಹಿಸು ಎಂದು ತಮ್ಮ ಪುತ್ರಿಯನ್ನು ಕೇಳಿದ್ದಾನೆ. ಹೀಗಾಗಿ ಆಕೆ ರೀತಿಯ ಫೋಟೋ ಕಳುಹಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಖಾಸಗಿ ಅಂಗಾಂಗಗಳ ಫೋಟೋಗಳನ್ನು ತೆಗೆದು ಕಳುಹಿಸಿದ್ದಳು

ಯುವತಿ ತನ್ನ ತಾಯಿ ಮಲಗಿದ್ದ ವೇಳೆ ಅವರ ಖಾಸಗಿ ಅಂಗಾಂಗಗಳ ಫೋಟೋಗಳನ್ನು ತೆಗೆದು ಕಳುಹಿಸಿದ್ದಳು ಎಂಬುದು ಮೊಬೈಲ್ ಪರಿಶೀಲಿಸಿದಾಗ ಗೊತ್ತಾಗಿದೆ. ಅಷ್ಟೇ ಅಲ್ಲದೆ, ಯುವತಿಯು ತನ್ನ ದೊಡ್ಡಮ್ಮ ಸ್ನಾನ ಮಾಡುತ್ತಿದ್ದಾಗ ಅವರಿಗೆ ಗೊತ್ತಾಗದಂತೆ ನಗ್ನ ಫೋಟೊಗಳನ್ನು ಕೂಡ ತೆಗೆದಿದ್ದಾಳೆ. ಅದನ್ನು ಕೂಡ ಆತನಿಗೆ ಕಳುಹಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವಿಷಯ ತಿಳಿದು ಮಗಳಿಗೆ ಬುದ್ಧಿ ಹೇಳಿ ಫೋಟೋಗಳನ್ನು ಅಳಿಸಿ ಹಾಕಿದ್ದೇವೆ. ಅಲ್ಲದೆ, ಭವಿಷ್ಯದಲ್ಲಿ ಆ ಫೋಟೊಗಳು ದುರುಪಯೋಗವಾಗುವ ಭಯದಿಂದ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಮಹಿಳೆ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಆಟೋ ಗ್ಯಾಸ್‌ಗೆ ರಾತ್ರಿಯಿಡೀ ಜಾಗರಣೆ
ಕಾಲಿಂದ ಪತ್ನಿ ಕುತ್ತಿಗೆ ತುಳಿದು ಕೊಂದ ಪತಿ