ನೆಲಮಂಗಲ : ಹೆತ್ತ ತಾಯಿಯೇ ತನ್ನ 45 ದಿನದ ಮಗುವನ್ನು ನೀರು ಕಾಯಿಸುವ ಹಂಡೆಯಲ್ಲಿ ಮುಳುಗಿಸಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ನಗರದ ರೇಣುಕಾನಗರದಲ್ಲಿ ನಡೆದಿದ್ದು ಅರೋಪಿಯನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ವಿಶ್ವೇಶ್ವರಪುರದ ರೇಣುಕಾ ನಗರ ನಿವಾಸಿ ರಾಧಾ ಬಂಧಿತ ಅರೋಪಿ.
ಘಟನೆ ಹಿನ್ನೆಲೆ: ಕಳೆದ ಒಂದೂವರೆ ವರ್ಷದ ಹಿಂದೆ ಒಂದೇ ಬಡಾವಣೆಯ ನಿವಾಸಿಯಾಗಿದ್ದ ಪವನ್‌ಕುಮಾರ್ ಹಾಗೂ ರಾಧಾ ನಡುವೆ ಸ್ನೇಹವಾಗಿ ಸ್ನೇಹ ಬಳಿಕ ಪ್ರೀತಿಯಾಗಿತ್ತು. ಬಳಿಕ ಮನೆಗೆ ತಿಳಿದಿದ್ದು ಇಬ್ಬರಿಗೂ ವಿವಾಹ ಮಾಡಿಕೊಟ್ಟಿದ್ದರು. ಪವನ್ ಹಾಗೂ ರಾಧೆ ದಂಪತಿಗೆ ಈ ಒಂದು ಗಂಡು ಮಗು ಜನಿಸಿತ್ತು. ಜು. 6ರಂದು ಭಾನುವಾರ ಸಂಜೆ ಪತಿ ಪವನ್ ಕೆಲಸ ಮಗಿಸಿಕೊಂಡು ಮದ್ಯ ಸೇವನೆ ಮಾಡಿ ಮನೆಗೆ ಬಂದಿದ್ದು ಊಟ ಮಾಡಿ ಬಳಿಕ ಮನೆ ಮುಂಭಾಗದ ಸ್ನೇಹಿತರೊಬ್ಬರ ಆಟೋದಲ್ಲಿ ಮಲಗಿದ್ದಾನೆ.
ತಾಯಿಯೇ ಕೊಲೆ ಮಾಡಿ ನಾಟಕ:ಜು. 7ರ ಸೋಮವಾರದಂದು ಬೆಳಗಿನ ಜಾವ 4:30 ವೇಳೆಯಲ್ಲಿ ಮಗುವನ್ನು ನೀರು ಕಾಯಿಸುವ ಹಂಡೆಯಲ್ಲಿ ಮುಳುಗಿಸಿ ಕೊಲೆ ಮಾಡಿ ಬಳಿಕ ಮಗುವಿಲ್ಲ ಎಂದು ನಾಟಕ ಮಾಡಿದ್ದಾಳೆ. ಪತಿ ಪವನ್ ಹಾಗೂ ಸಮೀಪದಲ್ಲಿರುವ ಸಂಬಂಧಿಸಿಕರು ಹುಡುಕಾಟ ನಡೆಸಿದ್ದಾರೆ. ಯಾರೇ ಇಬ್ಬರು ಬಂದು ಮಗುವನ್ನು ತಗೆದುಕೊಂಡು ಹೋದರೆಂದು ರಾಧಾ ನಾಟಕವಾಡಿದ್ದಾಳೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ತಾವೇ ಕೊಲೆ ಮಡಿರುವುದಾಗಿ ಒಪ್ಪಿಕೊಂಡ ತಾಯಿ:
ಪೊಲೀಸರು ತನಿಖೆ ಮಾಡುತ್ತಿದ್ದ ವೇಳೆ ಪತಿ ಪವನ್ ಕುಡಿತ ಚಟಕ್ಕೆ ಬಿದ್ದು ಕುಟುಂಬ ನೋಡಿಕೊಳ್ಳುತ್ತಿರಲಿಲ್ಲ. ಬಡತನ ಹಾಗೂ ಮಗುವಿನ ಆರೋಗ್ಯದ ಸಮಸ್ಯೆ, ಮಗುವಿನ ಆರೈಕೆ ಕಷ್ಟವಾದ ಹಿನ್ನೆಲೆಯಲ್ಲಿ ತಡರಾತ್ರಿ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ ರಾಧಾ ಒಪ್ಪಿಕೊಂಡಿರುವುದಾಗಿ ಪೊಲೀಸ್ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.
ಬಳಿಕ 45ದ ದಿನದ ಮಗುವನ್ನ ಮುಳುಗಿಸಿ ಕೊಲೆ ಮಾಡಿದ್ದ ಆರೋಪಿ ತಾಯಿಯನ್ನ ಪೊಲೀಸರು ಬಂಧಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.