ತಾಯಿ ಮಗುವಿನೊಂದಿಗೆ ಸಂವಹಿಸುವುದೇ ಮಾತೃಭಾಷೆ: ಯಲುವಹಳ್ಳಿ ಸೊಣ್ಣೇಗೌಡ

KannadaprabhaNewsNetwork |  
Published : Feb 24, 2026, 03:15 AM IST
 ಸಿಕೆಬಿ-4 ನಗರ ಹೊರವಲಯದ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ   ವಿಶ್ವ ಮಾತೃಭಾಷೆ ದಿನಾಚರಣೆ ಕಾರ್ಯಕ್ರಮದಲ್ಲಿ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿದರು | Kannada Prabha

ಸಾರಾಂಶ

ಭಾಷೆಯೆಂಬುದು ಭಾವನೆಗಳನ್ನು ಅಭಿವ್ಯಕ್ತಿಸುವ ಸಾಧನ. ಮಂಡೇಲಾರವರು ಹೇಳಿದಂತೆ ಅವರ ಭಾಷೆಯಲ್ಲಿ ಮಾತನಾಡಿದರೆ ತಲೆಗೆ ಮುಟ್ಟುತ್ತೆ. ಅವರ ಮಾತೃಭಾಷೆಯಲ್ಲಿ ಮಾತನಾಡಿದರೆ ಅವರ ಹೃದಯ ತಟ್ಟುತ್ತೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕನ್ನಡ ತಾಯಿ ತನ್ನ ಕಂದನೊಂದಿಗೆ ಸಂವಹನ ಮಾಡುವ ಭಾಷೆಯೇ ಮಾತೃಭಾಷೆ. ಜಗತ್ತಿನಲ್ಲಿ ಈಗ ಏಳು ಸಾವಿರಕ್ಕೂ ಹೆಚ್ಚಿನ ಭಾಷೆಗಳಿದ್ದು, ಪ್ರತಿ 30 ರಿಂದ 40 ಕಿಲೋಮೀಟರ್ ಗೆ ಭಾಷೆಯ ಶೈಲಿಯಲ್ಲಿ ವಿಭಿನ್ನತೆಯಿರುತ್ತದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಅಭಿಪ್ರಾಯಪಟ್ಟರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರ ಹೊರವಲಯದ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಮಾತೃಭಾಷೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನೂರಾರು ಭಾಷೆಗಳು ಅಳಿದು ಹೋಗಿದ್ದು, ಹಲವಾರು ಭಾಷೆಗಳು ಅಳಿವಿನಂಚಿನಲ್ಲಿವೆ. ಭಾಷೆಯೆಂದರೆ ಅದು ಬದುಕು, ಸಂಸ್ಕೃತಿಯ ಸಾರ. ಭಾಷೆ ಅಳಿದರೆ ಸಂಸ್ಕೃತಿಯು ಅಳಿದಂತೆ. ಭಾಷೆಗಳು ಅಳಿಯದೇ ಉಳಿಯುವುದು ಅವುಗಳನ್ನು ಮಾತನಾಡಿದಾಗ ಮಾತ್ರ ಸಾಧ್ಯ ಎಂದರು.

ಭಾಷೆಯೆಂಬುದು ಭಾವನೆಗಳನ್ನು ಅಭಿವ್ಯಕ್ತಿಸುವ ಸಾಧನ. ಮಂಡೇಲಾರವರು ಹೇಳಿದಂತೆ ಅವರ ಭಾಷೆಯಲ್ಲಿ ಮಾತನಾಡಿದರೆ ತಲೆಗೆ ಮುಟ್ಟುತ್ತೆ. ಅವರ ಮಾತೃಭಾಷೆಯಲ್ಲಿ ಮಾತನಾಡಿದರೆ ಅವರ ಹೃದಯ ತಟ್ಟುತ್ತೆ. ಕನ್ನಡದ ಕಣ್ವ ಬಿ.ಎಂ.ಶ್ರೀಯವರು, ತಾಯ ಕಾಲ ಮದಲು ಕುಡಿದು ನಲ್ಮೆಯಿಂದ ತೊದಲು ನುಡಿದು ಗೆಳೆಯರೊಡನೆ ಕೂಡಿ ಕಳೆದು ಆಡುವ ಭಾಷೆಯೇ ಮಾತೃಭಾಷೆ ಎಂದು ಹೇಳಿದ್ದಾರೆ. ಯಾವುದೇ ಭಾಷೆಗಳನ್ನು ಪರಭಾಷೆಯು ಅನ್ಯ ಭಾಷೆಗಳ ಪ್ರಭಾವದಿಂದ ಅಳಿದು ಹೋಗದಂತೆ ತಡೆಯಬೇಕಾದರೆ ಎಲ್ಲರಲ್ಲೂ ಭಾಷಾ ಪ್ರೇಮವು ಮುಸುಕಾಗದಂತೆ ಜಾಗೃತಿ ವಹಿಸಬೇಕಿದೆ ಎಂದು ತಿಳಿಸಿದರು.

ಜಿಲ್ಲಾ ಕಸಾಪ ಪ್ರತಿನಿಧಿ ಸರ್ದಾರ್ ಚಾಂದ್ ಪಾಷಾ ಮಾತನಾಡಿ, ಬಾಂಗ್ಲಾದೇಶದಲ್ಲಿ ನಡೆದ ಮಾತೃಭಾಷಾ ಚಳವಳಿಯಲ್ಲಿ ನಡೆದ ಹಲವರ ಬಲಿದಾನದಿಂದಾಗಿ ವಿಶ್ವ ಸಂಸ್ಥೆಯು 1999ರಿಂದ ವಿಶ್ವ ಮಾತೃಭಾಷೆಯ ದಿನವನ್ನು ಘೋಷಣೆ ಮಾಡಿತು. 2000 ಇಸ್ವಿಯಿಂದ ವಿಶ್ವಸಂಸ್ಥೆಯು ಮಾತೃಭಾಷಾ ದಿನವನ್ನು ಆಚರಿಸುತ್ತಾ ಬಂದಿದೆ. ಮಾತೃಭಾಷೆಯ ದಿನವು ಈ ವರ್ಷ ಬೆಳ್ಳಿಮಹೋತ್ಸವವನ್ನು ಆಚರಿಸುತ್ತಿದೆ. ಮಾತೃ ಭಾಷೆಯ ಮಹತ್ವ, ಭಾಷಾ ವೈವಿಧ್ಯತೆ ಮತ್ತು ಭಾಷಾ ಸಂರಕ್ಷಣೆಯೇ ಈ ವರ್ಷದ ವಿಶ್ವ ಸಂಸ್ಥೆಯ ಘೋಷವಾಕ್ಯವಾಗಿದೆ ಎಂದು ತಿಳಿಸಿದರು.

ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ ಜಿ.ಡಿ.ಚಂದ್ರಯ್ಯ ಮಾತನಾಡಿ, ಮಾತೃಭಾಷೆಯೆಂದರೆ ತಾಯಿಗೆ ಸಮಾನ. ಪ್ರಪಂಚದಲ್ಲಿ ಬಹುತೇಕ ದೊಡ್ಡ ದೊಡ್ಡ ಮಹನೀಯರು ಮಾತೃಭಾಷಾ ಶಿಕ್ಷಣ ಕಲಿತವರೇ ಆಗಿದ್ದಾರೆ.ಶಿಕ್ಷಣವನ್ನು ಪರಿಣಾಮಕಾರಿಯಾಗಿ ಪಡೆಯುವಲ್ಲಿ ಮಾತೃಭಾಷೆಯ ಮಹತ್ವ ಬಹಳ ದೊಡ್ಡದು ಎಂದರು.

ಕಸಾಪ ಕಾರ್ಯದರ್ಶಿ ಕೆ.ಎಂ.ರೆಡ್ಡಪ್ಪ ರವರು ಮಾತೃ ಭಾಷೆಯ ಮಹತ್ವ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಸದಸ್ಯರಾದ ಅಣ್ಣಮ್ಮ, ಜಿ.ಎಂ.ವೆಂಕಟೇಶ್, ಉಪನ್ಯಾಸಕ ಹರೀಶ್ ಬಾಬು, ಕಾಲೇಜಿನ ಭೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

-------

ಸಿಕೆಬಿ-4 ನಗರ ಹೊರವಲಯದ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ವಿಶ್ವ ಮಾತೃಭಾಷೆ ದಿನಾಚರಣೆ ಕಾರ್ಯಕ್ರಮದಲ್ಲಿ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೆಯಲ್ಲಿ 90 ಹಳ್ಳಿಯಲ್ಲಿ ನೀರಿನ ಸಮಸ್ಯೆ
ಕೊಪ್ಪಳ: ಊರ ಜಾತ್ರೆ ವೇಳೆ ದಲಿತರು-ಸವರ್ಣೀಯರ ಸಂಘರ್ಷ