ಶ್ರವಣ, ಮನನ, ನಿದಿದ್ಯಾಸನಗಳ ಮಾಸವೇ ಶ್ರಾವಣ ಮಾಸ. ಶ್ರಾವಣ ಎಂದರೆ ಕೇಳುವುದು ಎಂದರ್ಥ.ಈ ಮಾಸದಲ್ಲಿ ಪೂಜ್ಯರ ವಿಚಾರಗಳನ್ನು ತಿಳಿದುಕೊಳ್ಳುವುದೆಂದರ್ಥ. ತಾಯಿ ಮಗುವಿಗೆ ಜನ್ಮಕೊಟ್ಟಿಂತೆ. ಮಕ್ಕಳಿಗೆ ಸಂಸ್ಕಾರವನ್ನು ಕಲಿಸಲು ಮುಂದಾಗಬೇಕೆಂದು ಶಿರಿಗೆರೆ ತರಳಬಾಳು ಮಠದ ಪೀಠಾಧ್ಯಕ್ಷರಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಕುಮಾರಪಟ್ಟಣ: ಶ್ರವಣ, ಮನನ, ನಿದಿದ್ಯಾಸನಗಳ ಮಾಸವೇ ಶ್ರಾವಣ ಮಾಸ. ಶ್ರಾವಣ ಎಂದರೆ ಕೇಳುವುದು ಎಂದರ್ಥ.ಈ ಮಾಸದಲ್ಲಿ ಪೂಜ್ಯರ ವಿಚಾರಗಳನ್ನು ತಿಳಿದುಕೊಳ್ಳುವುದೆಂದರ್ಥ. ತಾಯಿ ಮಗುವಿಗೆ ಜನ್ಮಕೊಟ್ಟಿಂತೆ. ಮಕ್ಕಳಿಗೆ ಸಂಸ್ಕಾರವನ್ನು ಕಲಿಸಲು ಮುಂದಾಗಬೇಕೆಂದು ಶಿರಿಗೆರೆ ತರಳಬಾಳು ಮಠದ ಪೀಠಾಧ್ಯಕ್ಷರಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ರಾಣೆಬೆನ್ನೂರು ತಾಲೂಕು ಚಳಗೇರಿ ಗ್ರಾಮದಲ್ಲಿ ನಿರ್ಮಿಸಿರುವ ಮರಳು ಸಿದ್ದೇಶ್ವರ ದೇವಸ್ಥಾನ ಹಾಗೂ ಬಸವಣ್ಣದೇವರ ನೂತನ ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಅವರು, ಇಂದಿಗೂ ಹಳ್ಳಿಗಳಲ್ಲಿ ಭಕ್ತಿ ಶ್ರದ್ಧೆ ಇದೆ. ಈ ಗ್ರಾಮದಲ್ಲಿ ಮರಳು ಸಿದ್ದೇಶ್ವರ ದೇವಸ್ಥಾನ ೧೯೬೪ರಲ್ಲೆ ಉದ್ಘಾಟನೆ ಆಗಿದೆ. ಅದು ಶ್ರಾವಣ ಮಾಸದಲ್ಲಿ ಆಗಿದೆ. ಶ್ರಾವಣ ಮಾಸ ರೈತರಿಗೆ ಕೃಷಿ ಚಟುವಟಿಕೆಗಳು ಬಹಳ ಕಡಿಮೆ. ಈ ಮಾಸ ಮಹಿಳೆಯರಿಗೆ, ರೈತರಿಗೆ ಎಲ್ಲರಿಗೂ ಭಕ್ತಿ ಶ್ರದ್ಧೆಯ ಕಾಲ. ಎಲ್ಲಾ ದೇವರುಗಳಿಗೂ ಪೂಜೆ, ಪುನಸ್ಕಾರದಿಂದ ಭಕ್ತರು ನಮಿಸುತ್ತಿರುತ್ತಾರೆ. ಸಂಸ್ಕೃತಿಗಳಿಗೆ ಗ್ರಾಮಗಳೆ ಹೆಸರುವಾಸಿ ಎಂದು ಶ್ರೀಗಳು ಹೇಳಿದರು.ಶುಭ ಬ್ರಾಹ್ಮಿ ಮುಹೂರ್ತದಲ್ಲಿ ನೂತನ ಶಿಲಾಮೂರ್ತಿಗಳ ಪೂಜಾ ಅಭಿಷೇಕ, ಪ್ರಾಣ ಪ್ರತಿಷ್ಠಾಪನೆ ಹಾಗೂ ಧರ್ಮ ಸಭಾ ನೆರವೇರಿತು. ಖಂಡೇರಾಯನಳ್ಳಿಯ ಆರೂಢ ತಪೋಭೂಮಿಯ ನಾಗರಾಜನಂದಾ ಸ್ವಾಮಿಗಳು ಭಾಗವಹಿಸಿದ್ದರು. ದಾವಣಗೆರೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುಮತಿಜಯಪ್ಪ, ಶ್ರೀ ಮರುಳು ಸಿದ್ದೇಶ್ವರ ಜೀವನಚರಿತ್ರೆಯ ಬಗ್ಗೆ ಉಪನ್ಯಾಸ ನೀಡಿದರು. ಜಟ್ಟೆಪ್ಪಕರೆಗೌಡರ ಸ್ವಾಗತಿಸಿದರು. ಪ್ರಕಾಶ್ ಸೋಮನಗೌಡ್ರ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.