ಚಿಕ್ಕಮಗಳೂರುರೈತರ ಜಮೀನಿನಲ್ಲಿ ಎಲೆಕ್ಟ್ರಿಕ್ ಮೋಟಾರ್ ಸ್ಟ್ರಾರ್ಟರ್ ಮತ್ತು ಕೇಬಲ್ ಕಳ್ಳತನಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 3 ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುರೈತರ ಜಮೀನಿನಲ್ಲಿ ಎಲೆಕ್ಟ್ರಿಕ್ ಮೋಟಾರ್ ಸ್ಟ್ರಾರ್ಟರ್ ಮತ್ತು ಕೇಬಲ್ ಕಳ್ಳತನಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 3 ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ನವೀನ್ ಕುಮಾರ್ (34), ಸುನೀಲ್(32), ಸುನೀಲ್(33) ಹಾಗೂ ಅನಿಲ್(28) ಬಂಧಿತ ಆರೋಪಿಗಳು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬೇಸಿಗೆ ಆರಂಭಗೊಂಡ ನಂತರ ಚಿಕ್ಕ ಮಗಳೂರು ಗ್ರಾಮಾಂತರ ಭಾಗದ ರೈತರ ಜಮೀನಿನಲ್ಲಿ ಮೋಟರ್ ಪಂಪ್, ಎಲೆಕ್ಟ್ರಿಕ್ ಮೋಟಾರ್ ಸ್ಟ್ರಾರ್ಟರ್ ಮತ್ತು ಕೇಬಲ್ ಸರಣಿ ಕಳ್ಳತನ ಪ್ರಕರಣ ಹೆಚ್ಚಾಗಿದ್ದವು.ಈ ಸಂಬಂಧಿಸಿದಂತೆ ವಿಶೇಷ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಿದ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು, ಬೆಳವಾಡಿ, ಪಾಯಗೊಂಡನಹಳ್ಳಿ,ನಾಗರಹಳ್ಳಿ ಗಳಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳತನವಾಗಿದ್ದ ಸುಮಾರು ₹20 ಸಾವಿರ ಬಾಳುವ 120 ಮೀ. ಉದ್ದದ ಕೇಬಲ್ ವಯರ್ ಹಾಗೂ ₹10 ಸಾವಿರ ಬೆಲೆ ಬಾಳುವ ಒಂದು ಮೋಟರ್ ಸ್ಟಾಟರ್ ಬಾಕ್ಸ್, ಅನ್ನು ಹಾಗೂ ಆರೋಪಿಗಳು ಕಳ್ಳತನಕ್ಕೆ ಉಪಯೋಗಿಸಿದ ಸುಮಾರು ₹1,15,000 ಮೌಲ್ಯದ ಮೂರು ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.