ರೇಂಜರ್ ಮತ್ತು ರೋವರ್ಸ್ ಘಟಕಗಳ ಸಮಾರೋಪ ಸಮಾರಂಭ
ಪ್ರಾಮಾಣಿಕತೆ, ಶ್ರದ್ಧೆ ಮತ್ತು ಸಮಯ ಪ್ರಜ್ಞೆಯಿಂದ ಮುಂದೆ ಸಾಗಿದರೆ ಗುರಿ ತಲುಪಲು ಸಾಧ್ಯ ಎಂದು ಶಾಸಕ ಎಚ್. ಡಿ. ತಮ್ಮಯ್ಯ ಹೇಳಿದರು.ತಾಲೂಕಿನ ಸಖರಾಯಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ 2025-25 ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ , ರಾ.ಸೇ.ಯೋ.,ಯುವ ರೆಡ್ ಕ್ರಾಸ್, ರೇಂಜರ್ ಮತ್ತು ರೋವರ್ಸ್ ಘಟಕಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ ಶಿಕ್ಷಣದಲ್ಲಿ ಓದು ಎಷ್ಟು ಮುಖ್ಯವೋ ಅಷ್ಟೇ ಪ್ರಾಮುಖ್ಯ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡಿದರೆ ಮನಸ್ಸು ಮತ್ತು ದೇಹಕ್ಕೆ ಮುದ ಕೊಡುತ್ತವೆ.ಪದವಿ ಭವಿಷ್ಯದ ಅಂತಿಮ ಘಟ್ಟ.ಇದನ್ನು ಕ್ಷಣಿಕ ಸುಖಕ್ಕೆ ಮಾರು ಹೋಗದೆ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಓದಿನ ಕಡೆ ಗಮನ ಕೊಟ್ಟು ಜೀವನವನ್ನು ಉತ್ತಮ ಗುರಿ ಕಡೆಗೆ ಸಾಗಿಸಿ. ಚೆನ್ನಾಗಿ ಓದಿ ಮುಂದಿನ ಜೀವನ ರೂಪಿಸಿಕೊಳ್ಳಿ. ದೊಡ್ಡ ದೊಡ್ಡ ಕನಸುಗಳನ್ನು ಕಂಡು ಅದರ ಈ ಡೇರಿಕೆಯತ್ತ ಸಾಗ ನೀಡಬೇಕು ಎಂದು ಕರೆ ನೀಡಿದರು.
ಮೋಬೈಲಿನ ಗೀಳು ಬಿಟ್ಟು ಓದಿಗೆ ಅನುಕೂಲವಾಗುವ ವಿಷಯ ತಿಳಿಯಲು ಮಾತ್ರ ಉಪಯೋಗಿಸಿ. ಉಪನ್ಯಾಸಕರು ಮಕ್ಕಳ ಪ್ರತಿಭೆ ಪೋಷಿಸಿ ಪ್ರೋತ್ಸಾಹಿಸಬೇಕು ಎಂದರು.ಬಸವನಹಳ್ಳಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಜೆ. ಎಸ್. ದಯಾನಂದ್ ಸಮಾರೋಪ ನುಡಿ ನುಡಿದು, ಜೀವನ ಎನ್ನುವುದು ಗಳಿಕೆ ಉಳಿಕೆ ಮತ್ತು ಮೋಜು ಮಾಡುವ ಸಮ್ಮಿಶ್ರಣ. ಜೀವನ ಎನ್ನುವುದು ಭೋರ್ಗರೆವ ನದಿಯಾಗದೆ ಶಾಂತವಾಗಿ ಹರಿಯುವ ಜರಿಯಾಗಬೇಕು ಎನ್ನುವುದು ವಿದ್ಯಾ ರ್ಥಿಗಳ ಮುಂದಿರುವ ಪ್ರಶ್ನೆ ಪದವಿ ನಂತರ ಮುಂದೇನು? ಅವರ ಜೀವನ ಅವರೇ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ರೀಲ್ಸ್ ನೋಡುವುದನ್ನು ಬಿಟ್ಟರೆ ಜೀವನದಲ್ಲಿ ಮುಂದೆ ಬರಬಹುದು ಎಂದರು. ಇದೇ ಸಂದರ್ಭದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೆಲುವು ಸಾಧಿಸಿದವರಿಗೆ ಬಹುಮಾನ ವಿತರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಕಲಾವತಿ ಮಾತನಾಡಿದರು. ಉಪನ್ಯಾಸಕರಾದ ಡಾ.ಜಗದೀಶ್, ಮಮತಾ, ಗಣೇಶ್, ಜ್ಯೋತಿ, ಡಾ.ಪ್ರವೀಣಕುಮಾರ್, ಡಾ.ಸುಚೇತ, ಪೂರ್ಣಚಂದ್ರ, ನಾಗರತ್ನ, ಕಾಲೇಜು ಅಭಿವೃದ್ಧಿ ಸಮಿತಿಯ ಚಿನ್ಪಯ್, ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗವಹಿಸಿದ್ದರು. 27ಕೆಕೆಡಿಯು2.ಕಡೂರು ತಾಲೂಕಿನ ಸಖರಾಯಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ 2025-26ನೇ ಸಾಲಿನ ಸಾಂಸ್ಕೃತಿಕ,ಕ್ರೀಡಾ , ರಾ.ಸೇ.ಯೋ.,ಯುವ ರೆಡ್ ಕ್ರಾಸ್, ರೇಂಜರ್ಸ್ ಮತ್ತು ರೋವರ್ಸ್ ಘಟಕಗಳ ಸಮಾರೋಪ ಸಮಾರಂಭವನ್ನು ಶಾಸಕ ಹೆಚ್. ಡಿ. ತಮ್ಮಯ್ಯ ಉದ್ಘಾಟಿಸಿದರು. ]