ಸೇವಾ ವಿಕಾಸ ಶಾಲೆಯ ವಾಷಿರ್ಕೊತ್ಸವ । ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪಕಳೆದ ೪೦ ವಷರ್ಗಳಿಂದ ನಡೆಯುತ್ತಿರುವ ಸೇವಾ ವಿಕಾಸ ಶಾಲೆಗೆ ಕೋಟಿ ರು.ಗಳಿಗೂ ಹೆಚ್ಚು ಬೆಲೆಬಾಳುವ ತಮ್ಮ ಕುಟುಂಬ ಒಡೆತನದಲ್ಲಿ ಇರುವ ಅರು ಎಕರೆ ಜಮೀನನ್ನು ಶಾಲೆಗೆ ಕೊಡಿಗೆಯಾಗಿ ಕೊಡುವುದಾಗಿ ಸಂಸದ ಬಿ.ವೈ.ರಾಘವೇಂದ್ರ ಘೋಷಿಸಿದರು.
ಪಟ್ಟಣದ ಅಂಚೆ ಕಚೇರಿ ಬಳಿ ಇರುವ ಸೇವಾ ವಿಕಾಸ ಶಾಲೆಯ ವಾಷಿರ್ಕೊತ್ಸವ ಸಮಾರಂಭವನ್ನು ಶುಕ್ರವಾರ ರಾತ್ರಿ ದೀಪ ಬೆಳಗಿಸಿ ಉದ್ಘಾಟಿಸಿ ನಂತರ ಮಾತನಾಡಿದ ಅವರು, ಈ ಶಾಲೆ ಧಾರ್ಮಿಕ, ಆಧ್ಯಾತ್ಮಿಕ ತಳಹದಿಯಲ್ಲಿ ಶಿಕ್ಷಣವನ್ನು ಕೊಡುತ್ತಿದ್ದು, ನೂರಾರು ಮಕ್ಕಳು ಶಿಕ್ಷಣ ಪಡೆಯುತ್ತಿರುವ ಶಾಲೆಗೆ ಜಾಗದ ಕೊರತೆ ಇರುವದನ್ನು ಮನಗಂಡು ಕೊಡುತ್ತಿರುವದಾಗಿ ಹೇಳಿದರು.ಶಿಕಾರಿಪುರ ತಾಲೂಕಿನಲ್ಲಿ ಶಿಕ್ಷಣ ಪಡೆಯಲು ಯಾವದೇ ಕೊರತೆ ಆಗದಿರಲೆಂದು ಹಲವಾರು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಲಾಗಿದೆ. ಗ್ರಾಮಾಂತರ ಪ್ರದೇಶದ ಮಕ್ಕಳ ಅನಕೂಲಕ್ಕಾಗಿ ಹಾಸ್ಟೆಲ್ ಪ್ರಾರಂಭಿಸಲಾಗಿದೆ. ಶರಾವತಿ ನದಿಯಿಂದ ಶಿರಾಳಕೊಪ್ಪಕ್ಕೆ ಪಟ್ಟಣಕ್ಕೆ ಕುಡಿಯುವ ನೀರು ತರಲು ೩೨ಕೋಟಿ ಹಣ ವೆಚ್ಚಮಾಡಿ ಪ್ರತಿ ಮನೆಗೆ ಶು‘್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಯೋಜನೆ ಸಿದ್ದವಾಗಿದೆ.ಶಿಕಾರಿಪುರ ಹತ್ತಿರದ ಕಾಳೇನಹಳ್ಳಿ ಬಳಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ರೇಲ್ವೆ ಯೋಜನೆ ಮಾಡಲಾಗಿದೆ. ತುಂಗ ಭದ್ರಾ ನದಿಯಿಂದ ಕೆರೆ ಕಟ್ಟೆ ತುಂಬಿಸುವ ಏತ ನೀರಾವರಿ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು.
ವಿಶ್ವಹಿಂದು ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ್ ಮಾತನಾಡಿ, ಇಂದು ಭಾರತ ವಿಶ್ವಕ್ಕೆ ಗುರುವಾಗಿದೆ. ಅತಿ ಹೆಚ್ಚು ಬುದ್ದಿವಂತರನ್ನು ಹೊಂದಿದ ದೇಶ ಭಾರತ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಸೊನ್ನೆಯ ಮುಖಾಂತರ ಲೆಕ್ಕವನ್ನು ಪರಿಚಯಿಸಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ ಎಂದರು.ಪ್ರಾರಂಭದಲ್ಲಿ ಸಂಸ್ಥೆಯ ಸಂಚಾಲಕ ಎಂಎಡಿಬಿ ಮಾಜಿ ಅಧ್ಯಕ್ಷ ಪದ್ಮನಾಭ್ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಏಕಾಂತಪ್ಪ, ಕಾರ್ಯದರ್ಶಿ ಅರುಣ್ ಕುಮಾರ್, ಗಂಗಂಮ್ಮ, ಲೋಕೇಶ್ ರಟ್ಟಿಹಳ್ಳಿ, ಲಿಂಗರಾಜು ಇದ್ದರು.
ಕೊನೆಯಲ್ಲಿ ಮಕ್ಕಳಿಂದ ಸಾಂಸ್ಕ್ರತಿಕ ಕಾಯರ್ಕ್ರಮ ನಡೆಯಿತು.