ಶಿರಸಿ ಕಾಳು ಮೆಣಸು ಸಂಬಾರ ಮಂಡಳಿ ದರಪಟ್ಟಿಯಲ್ಲಿ ನಮೂದಿಸುವಂತೆ ಸಂಸದರ ಹಕ್ಕೊತ್ತಾಯ

KannadaprabhaNewsNetwork |  
Published : Mar 12, 2025, 12:45 AM IST
ಪೊಟೋ೧೧ಎಸ್.ಆರ್.ಎಸ್೫ ( ಕಾಳುಮೆಣಸು ಬೆಲೆಯನ್ನು ಸಂಬಾರ ಮಂಡಳಿಯ ದರಪಟ್ಟಿಯಲ್ಲಿ ನಮೂದಿಸುವಂತೆ ಕೇಂದ್ರ ವಾಣಿಜ್ಯ ಸಚಿವ ಪಿಯುಷ್ ಗೋಯಲ್ ಅವರನ್ನು ಭೇಟಿಯಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿನಂತಿಸಿದರು.) | Kannada Prabha

ಸಾರಾಂಶ

ಸ್ಪೈಸ್ ಬೋರ್ಡ್ ದರ ಪಟ್ಟಿಯಲ್ಲಿ ಕೇವಲ ಕೊಚ್ಚಿನ್ ಕಪ್ಪುಮೆಣಸು ಎಂದು ಮಾತ್ರ ನಮೂದಿಸಲಾಗುತ್ತಿದೆ

ಶಿರಸಿ:

ಕೊಚ್ಚಿಯ ಕಾಳು ಮೆಣಸಿನಷ್ಟೇ ಗುಣಮಟ್ಟ, ಅಧಿಕ ಉತ್ಪಾದನೆಯ ನೆಲೆಯಾದ ಕರ್ನಾಟಕದ ಅದರಲ್ಲೂ ಶಿರಸಿಯ ಕಪ್ಪು ಬಂಗಾರದ ಬೆಲೆಯನ್ನು ಸಂಬಾರ ಮಂಡಳಿಯ ದರಪಟ್ಟಿಯಲ್ಲಿ ನಮೂದಿಸುವಂತೆ ಕೇಂದ್ರ ವಾಣಿಜ್ಯ ಸಚಿವ ಪಿಯುಷ್ ಗೋಯಲ್ ಅವರಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಕ್ಕೊತ್ತಾಯ ಮಾಡಿದರು.

ದೆಹಲಿಯಲ್ಲಿ ವಾಣಿಜ್ಯ ಸಚಿವರನ್ನು ಮಂಗಳವಾರ ಭೇಟಿ ಮಾಡಿದ ಕಾಗೇರಿ, ಸ್ಪೈಸ್ ಬೋರ್ಡ್ ದರ ಪಟ್ಟಿಯಲ್ಲಿ ಕೇವಲ ಕೊಚ್ಚಿನ್ ಕಪ್ಪುಮೆಣಸು ಎಂದು ಮಾತ್ರ ನಮೂದಿಸಲಾಗುತ್ತಿದೆ. ಆದರೆ, ಕರ್ನಾಟಕವು ವಿಶೇಷವಾಗಿ ಇದರಲ್ಲೂ ಉತ್ತರ ಕನ್ನಡವು ದೇಶದಲ್ಲೇ ಕಾಳುಮೆಣಸು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಈ ಬೆಳೆಯ ಮಾರುಕಟ್ಟೆ ಕೇಂದ್ರ ಸ್ಥಳವಾದ ಶಿರಸಿ ಕಾಳುಮೆಣಸು ಬೆಲೆಯನ್ನು ಕೂಡ ಸಂಬಾರ ಮಂಡಳಿಯ ಅಧಿಕೃತ ದರಪಟ್ಟಿಯಲ್ಲಿ ನಿತ್ಯ ದಾಖಲಿಸಬೇಕು ಎಂದು ಆಗ್ರಹಿಸಿದರು.

ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು, ರೈತರಿಗೆ ಗುಣಮಟ್ಟದ ಬೆಳೆಗೆ ಯೋಗ್ಯ ದರ ಸಿಗುವ ನಿಟ್ಟಿನಲ್ಲಿ ಅಗತ್ಯ ಕೈಗೊಳ್ಳುವ ಭರವಸೆ ನೀಡಿದರು.

ಈಚೆಗೆ ಶಿರಸಿಯ ಕದಂಬ ಸಂಸ್ಥೆಯಲ್ಲಿ ನಡೆದ ಕಾಳುಮೆಣಸು ಹಬ್ಬದಲ್ಲಿ ಸ್ಪೈಸ್ ಬೋರ್ಡ ದರಪಟ್ಟಿಯಲ್ಲೂ ಶಿರಸಿ ಮೆಣಸಿನ ದರ ದಾಖಲಾಗಬೇಕು ಎಂದು ಆಗ್ರಹ ಕೇಳಿ ಬಂದಿತ್ತು ಎಂಬುದು ಉಲ್ಲೇಖನೀಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ