ತೋಟದಲ್ಲಿ ಅಡಕೆ ಕೊನೆ ಕೊಯ್ಲು ಮಾಡಿದ ಸಂಸದ ಕಾಗೇರಿ

KannadaprabhaNewsNetwork |  
Published : Jan 02, 2025, 12:30 AM IST
ಪೊಟೋ೧ಎಸ್.ಆರ್.ಎಸ್೬ (ಅಡಿಕೆ ಕೊಯ್ಲಿನಲ್ಲಿ ಭಾಗಿಯಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ) | Kannada Prabha

ಸಾರಾಂಶ

ಶಿರಸಿ ತಾಲೂಕಿನ ಕಾಗೇರಿಯ ತಮ್ಮ ತೋಟದ ಕೊನೆ ಕೊಯ್ಲಿನಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗಿಯಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮರವೇರಿದ ಕೊನೆ ಗೌಡನ ಹಗ್ಗ ಹಿಡಿದು ಅಡಕೆ ಕೊನೆಯನ್ನು ಇಳಿಸಿಕೊಂಡು, ಸರಳತೆಗೆ ಸಾಕ್ಷಿಯಾಗಿದ್ದಾರೆ.

ಶಿರಸಿ: ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಮ್ಮ ತೋಟದಲ್ಲಿ ಅಡಕೆ ಕೊನೆಯನ್ನು ಹಗ್ಗದ ಮೂಲಕ ಇಳಿಸುವ ಮೂಲಕ ಮನೆಯ ತೋಟದ ಕೊನೆ ಕೊಯ್ಲಿನಲ್ಲಿ ಭಾಗಿಯಾದರು.ತಾಲೂಕಿನ ಕಾಗೇರಿಯ ತಮ್ಮ ತೋಟದ ಕೊನೆ ಕೊಯ್ಲಿನಲ್ಲಿ ಭಾಗಿಯಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮರವೇರಿದ ಕೊನೆ ಗೌಡನ ಹಗ್ಗ ಹಿಡಿದು ಅಡಕೆ ಕೊನೆಯನ್ನು ಇಳಿಸಿಕೊಂಡು, ಸರಳತೆಗೆ ಸಾಕ್ಷಿಯಾಗಿದ್ದಾರೆ. ೬ ಬಾರಿ ಶಾಸಕರಾಗಿ, ಶಿಕ್ಷಣ ಸಚಿವರಾಗಿ, ಹಿಂದಿನ ಅವಧಿಯಲ್ಲಿ ವಿಧಾನಸಭೆಯ ಸಭಾಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಾಮಾನ್ಯರಂತೆ ತಮ್ಮ ಬಿಡುವಿನ ಅವಧಿಯಲ್ಲಿ ಗದ್ದೆ, ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ತೋಟದಲ್ಲಿ ಕೊನೆ ಕೊಯ್ಲಿನಲ್ಲಿ ಭಾಗಿಯಾಗಿದ್ದರು.ಜಾತ್ರಾ ಮಹೋತ್ಸವದ ಸಮಾಲೋಚನಾ ಸಭೆ

ಯಲ್ಲಾಪುರ: ಐತಿಹಾಸಿಕ ಪ್ರಸಿದ್ಧವಾದ ತಾಲೂಕಿನ ಭರತನಹಳ್ಳಿಯ ಭ್ರಮರಾಂಬಾ ದೇವಿಯ ೫ ದಿನಗಳ ಜಾತ್ರಾ ಮಹೋತ್ಸವ ಫೆ. ೧೬ರಿಂದ ೨೩ರ ವರೆಗೆ ವಿಧ್ಯುಕ್ತವಾಗಿ, ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಾಲಯದ ವಿಶ್ವಸ್ಥ ಸಮಿತಿ ಅಧ್ಯಕ್ಷ ಹೇರಂಬ ಹೆಗಡೆ ತಿಳಿಸಿದರು.ಡಿ. ೩೦ರಂದು ಭರತನಹಳ್ಳಿಯ ಭ್ರಮರಾಂಬಾ ಸಭಾಭವನದಲ್ಲಿ ಜಾತ್ರಾ ಮಹೋತ್ಸವದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜ. ೧೯ರಂದು ಕಲಾ ಸಂಕೋಚದೊಂದಿಗೆ ಜಾತ್ರಾ ಪ್ರಕ್ರಿಯೆ ಆರಂಭಗೊಳ್ಳಲಿದೆ. ನಂತರ ವೈದಿಕ ವಿಧಿ- ವಿಧಾನಗಳು ಚಾಲನೆ ಪಡೆಯುತ್ತವೆ ಎಂದರು.

ಇದೇ ಸಂದರ್ಭದಲ್ಲಿ ಜಾತ್ರಾ ಆಚರಣೆಗೆ ಅಗತ್ಯವಿರುವ ಸಂಪನ್ಮೂಲ ಕ್ರೋಢೀಕರಣ, ಧಾರ್ಮಿಕ ಮತ್ತು ವೈದಿಕ, ಸ್ವಚ್ಛತೆ ಮತ್ತು ನೀರು, ತೇರು, ಅಂಗಡಿ, ಗದ್ದುಗೆ ನಿರ್ವಹಣೆ, ರಕ್ಷಣೆ, ಹಣಕಾಸು, ಪ್ರಚಾರ ಹಾಗೂ ಸಾಂಸ್ಕೃತಿಕ ಉಪ ಸಮಿತಿಗಳನ್ನು ರಚಿಸಲಾಯಿತು.

ಸಮಿತಿ ಸದಸ್ಯರಾದ ವೆಂಕಟರಮಣ ಹೆಗಡೆ, ವೆಂಟ ಶೇರೂಗಾರ, ಮಂಜುನಾಥ ಹೆಗಡೆ, ಮಹಾಲಕ್ಷ್ಮಿ ನಾಯ್ಕ, ಹೊನ್ನಪ್ಪ ಪಟಗಾರ, ನಾಗೇಂದ್ರ ಹೆಗಡೆ, ಆರ್.ಜಿ. ಹೆಗಡೆ ಉಪಸ್ಥಿತರಿದ್ದರು. ಉದಯ ಭಟ್ಟ ಸ್ವಾಗತಿಸಿ, ನಿರ್ವಹಿಸಿದರು. ವಿನಾಯಕ ಭಟ್ಟ ವಂದಿಸಿದರು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ