ಕನ್ನಡಪ್ರಭ ವಾರ್ತೆ ಉಡುಪಿ
ವಿಶ್ವಕರ್ಮ ಯೋಜನೆಗೆ ಜಿಲ್ಲೆಯಲ್ಲಿ ಒಟ್ಟು ೧೩,೪೮೫ ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ಜಿಲ್ಲಾ ಸಮಿತಿಗೆ ಒಟ್ಟು ೧೦,೭೨೭ ಅರ್ಜಿಯನ್ನು ಶಿಫಾರಸ್ಸು ಮಾಡಲಾಗಿದೆ. ಅಲ್ಲದೇ ಇದರಲ್ಲಿ ಒಟ್ಟು ೧,೧೨೮ ಅಭ್ಯರ್ಥಿಗಳು ಟೈಲರಿಂಗ್ ತರಬೇತಿಯನ್ನು ಈಗಾಗಲೇ ಮುಗಿಸಿದ್ದು, ಅವರಿಗೆ ಪರಿಕರಗಳನ್ನು ಮತ್ತು ಕೇಂದ್ರ ಸರ್ಕಾರದ ಸಾಲಸೌಲಭ್ಯವನ್ನು ಪೂರೈಸುವ ಬಗ್ಗೆ ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ ಎಂದು ಇಲಾಖಾ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಪ್ರಸ್ತುತ ೪೦ ಜನ ಅಭ್ಯರ್ಥಿಗಳು ಇಂಡಿಯನ್ ಇನ್‌ಸ್ಟಿಟ್ಯೂಟ್ ಜೆಮ್ಸ್ ಆ್ಯಂಡ್ ಜ್ಯುವೆಲ್ಲರಿ ಸಂಸ್ಥೆಯಲ್ಲಿ ತರಬೇತಿಯ ಪಡೆಯುತ್ತಿದ್ದು, ಅವರಿಗೂ ಸಹ ತರಬೇತಿ ಪಡೆದ ನಂತರ ಇವರ ಕೆಲಸಕ್ಕೆ ಅಗತ್ಯವಾದ ಕಿಟ್‌ಗಳನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಇಲಾಖಾ ಅಧಿಕಾರಿಗಳು ಸಭೆಗೆ ತಿಳಿಸಿದರು.ಅಲ್ಲದೆ ಫಲಾನುಭವಿಗಳಿಗೆ ಕೊಡಮಾಡುವ ತರಬೇತಿ ಕಿಟ್‌ಗಳನ್ನು ಸಹ ವೀಕ್ಷಿಸಿ, ತರಬೇತಿಯನ್ನು ಪಡೆಯುತ್ತಿರುವ ಅರ್ಜಿದಾರರೊಂದಿಗೆ ಸಮಾಲೋಚಿಸಿ ಅವರ ಸಮಸ್ಯೆಯನ್ನು ಆಲಿಸಿದರು. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಲೀಡ್ ಬ್ಯಾಂಕ್ ಮುಖ್ಯಸ್ಥರಿಗೆ ಸೂಚಿಸಿದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹರೀಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ತರಬೇತಿ ಕೇಂದ್ರದ ಮುಖ್ಯಸ್ಥ ಕೌಶಿಕ್ ಉಪಸ್ಥಿತರಿದ್ದರು.