ಹಾವೇರಿ: ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಕೇವಲ ಒಂದು ಸೆಕ್ಸ್ ಸ್ಕ್ಯಾಮ್ ಅಲ್ಲ, ರೇಪ್‌ಗೆ ಸಮನಾದ ಪ್ರಕರಣ. ಅಮಾಯಕರ ದುರ್ಲಾಭ ಪಡೆದಿರುವ ಪ್ರಕರಣ ಇದು. ಇದು ಲೈಂಗಿಕ ದೌರ್ಜನ್ಯ ಪ್ರಕರಣ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹಿಂದೂ ಮಹಿಳೆಯರ ತಾಳಿಯ ಬಗ್ಗೆ ಮಾತನಾಡ್ತಾರೆ. ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಜೀವನ ಹಾಳು ಮಾಡಿದ್ದಾನೆ ಎಂದರು.ಪ್ರಜ್ವಲ್ ರೇವಣ್ಣನಿಗೆ ಟಿಕೆಟ್ ಕೊಡಬೇಡಿ ಎಂದು ಹಾಸನದ ಬಿಜೆಪಿ ಮುಖಂಡರು ಡಿಸೆಂಬರ್ ತಿಂಗಳಲ್ಲೇ ಪತ್ರ ಬರೆದಿದ್ದರು. ಆದರೂ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಪ್ರಧಾನಮಂತ್ರಿಗಳು ಹಿಂದೂ ಮಹಿಳೆಯರ ಬಗ್ಗೆ ಮಾತನಾಡುತ್ತಾರೆ. ಇಲ್ಲಿ ಇಷ್ಟೊಂದು ಹಿಂದೂ ಮಹಿಳೆಯರ ಮಾನಭಂಗವಾಗಿದೆ, ಮನೆಗಳನ್ನ ಒಡೆದಿದ್ದಾರೆ, ಮಾಂಗಲ್ಯ ಕಿತ್ತುಕೊಂಡಿದ್ದಾರೆ. ಇದೆಲ್ಲ ಗೊತ್ತಿದ್ರು ಅಲ್ಲೆ ಬಂದು ಮೋದಿ ಭಾಷಣ ಮಾಡಿದ್ದಾರೆ ಎಂದು ಕಿಡಿಕಾರಿದರು.ಇಲ್ಲಿಯವರೆಗೆ ಬಿಜೆಪಿ ನಾಯಕರು ಈ ಪ್ರಕರಣದ ಬಗ್ಗೆ ಮಾತನಾಡಿಲ್ಲ, ಎಸ್‌ಐಟಿ ಮಾಡಿದ್ದು ರಾಜಕೀಯ ಪ್ರೇರಿತ ಅಂತಾರೆ, ಹಾಗಾದ್ರೆ ಈ ಪ್ರಕರಣ ಮುಚ್ಚಿ ಹಾಕಬೇಕಾ ಎಂದು ಪ್ರಶ್ನಿಸಿದ ಅವರು, ಇದು ಪ್ರಪಂಚದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ ಎಂದರು.ಮೋದಿಯವರ ಹತ್ರ ಸಿಬಿಐ, ಇಡಿ ಇದೆ. ಪ್ರಜ್ವಲ್ ದೇಶ ಬಿಟ್ಟು ಹೋಗಲು ಹೇಗೆ ಬಿಟ್ಟಿದ್ದಾರೆ. ಮೋದಿಯವರ ಸಹಕಾರ ಇಲ್ಲದೆ ದೇಶ ಬಿಟ್ಟು ತಪ್ಪಿಸಿಕೊಂಡು ಹೋಗಲು ಸಾಧ್ಯನಾ?, ಲೈಂಗಿಕ ದೌರ್ಜನ್ಯ ಮಾಡಿ ದೇಶ ಬಿಟ್ಟು ಹೋದವರಿಗೆ ರಕ್ಷಣೆ ಕೊಡುತ್ತಿರುವವರು ಯಾರು ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಬೆಂಬಲಿಸಿ....
ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ. ಬಿಜೆಪಿ ಸಾಕು ಎನ್ನುವ ಅಭಿಪ್ರಾಯಕ್ಕೆ ಜನ ಬಂದಿದ್ದಾರೆ. ರೈತರು ಬೇಸತ್ತು ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದಾರೆ, ಬದಲಾವಣೆ ಗಾಳಿ ಬೀಸಿದೆ ಎಂದರು.ನಿಮಗೆ ಗೌರವ ತರುವ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಹಿರಿಯರು ಸೇರಿ ನಿಮ್ಮಮನೆ ಮಗನಂತೆ ಇರುವ ಆನಂದಸ್ವಾಮಿ ಗೆಲ್ಲಿಸಿ. ಬೊಮ್ಮಾಯಿ ಅವರು ಎಲ್ಲ ಅಧಿಕಾರ ಅನುಭವಿಸಿದ್ದಾರೆ ಅವರಿಗೆ ಅವಕಾಶ ಇದೆ. ಅವರು ಶಾಸಕರಾಗಿಯೇ ಕೆಲಸ ಮಾಡಲಿ, ಆನಂದಸ್ವಾಮಿ ಅವರಿಗೆ ಯಾವುದೇ ಅಧಿಕಾರ ಇಲ್ಲ, ಆನಂದಸ್ವಾಮಿ ಸಂಸದರಾಗಿ ಕೆಲಸ ಮಾಡಲಿ ಎಂದರು.ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನಲ್ಲಿ ಎಲ್ಲರೂ ಸಮಾನರು. ಆದರೆ ಬಿಜೆಪಿಯವರು ಸಂವಿಧಾನ ತೆಗೆದು ಹಾಕುವ ಹುನ್ನಾರ ಮಾಡ್ತಿದ್ದಾರೆ. ನರೇಂದ್ರ ಮೋದಿ ಅವರು ಸಂವಿಧಾನ ಬದಲಾವಣೆಗೆ ೪೦೦ಸೀಟ್ ಕೇಳ್ತಿದ್ದಾರೆ. ಬಡವರು, ಮಹಿಳೆಯರಿಗೆ ಇರುವ ಸಾಮಾನ್ಯ ಹಕ್ಕು ತೆಗೆದು ಹಾಕುವುದೇ ಅವರ ಗುರಿ ಎಂದರು.ಮೋದಿ ಜುಟ್ಟು ಶ್ರೀಮಂತ ಅದಾನಿ, ಅಂಬಾನಿ ಕೈಯಲ್ಲಿದೆ. ಬಿಜೆಪಿ ಶ್ರೀಮಂತರ ಪರ ಇದೆ. ಮೋದಿ ಎಲ್ಲದರ ಮೇಲು ಟ್ಯಾಕ್ಸ್, ಜಿಎಸ್‌ಟಿ ಬೇರೆ ಬೇರೆ ರೀತಿ ತೆರಿಗೆ ಹಾಕಿದ್ದಾರೆ. ರೈತರ ಸಾಲ ಮನ್ನಾ ಮಾಡಿ ಎಂದು ಪ್ರತಿಭಟನೆ ಮಾಡಿ ೭೦ ಜನ ರೈತರು ಸತ್ತರು. ಆದ್ರೆ ಮೋದಿ ಸರ್ಕಾರ ರೈತರ ಸಾಲ ಮನ್ನಾ ಮಾಡ್ಲಿಲ್ಲ, ರೈತರ ಸಾಲ ಮನ್ನಾ ಮಾಡಿದರೆ ದೇಶ ಬರ್ಬಾದ್ ಆಗುತ್ತೆ ಅಂತಾರೆ. ಅದಾನಿ, ಅಂಬಾನಿ ಅವರ ಸಾಲ ಏಕೆ ಇವರು ಮನ್ನಾ ಮಾಡಿದರು ಎಂದು ಪ್ರಶ್ನಿಸಿದರು.