ಸಂಡೂರು: ಕಾಂಗ್ರೆಸ್ ಪಕ್ಷದ ಹಲವು ಸಮಾನ ಮನಸ್ಕ ಮುಖಂಡರು ಬುಧವಾರ ತಾಲೂಕಿನ ತೋರಣಗಲ್ಲಿನಲ್ಲಿ ಸಭೆ ನಡೆಸಿ, ಸಂಡೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಹಾಗೂ ಮೀಸಲಾತಿ ಒಂದೇ ಕುಟುಂಬಕ್ಕೆ ಮೀಸಲಾಗುವುದು ಬೇಡ. ಈ ಬಾರಿಯ ಉಪ ಚುನಾವಣೆಯಲ್ಲಿ ಸಂಸದ ಈ.ತುಕಾರಾಂ ಅವರ ಕುಟುಂಬವನ್ನು ಹೊರತುಪಡಿಸಿ ವಾಲ್ಮೀಕಿ ಸಮಾಜದ ಹಾಗೂ ಸಂತೋಷ್ ಲಾಡ್ ಅವರ ಅಭಿಮಾನಿಗಳಲ್ಲಿ ಒಬ್ಬರಿಗೆ ನೀಡುವಂತೆ ವರಿಷ್ಠರಿಗೆ ಮನವಿ ಮಾಡಲು ತೀರ್ಮಾನಿಸಿದರು.
ಈ ಹಿಂದೆ ಸಂತೋಷ್ ಲಾಡ್ ನನ್ನನ್ನು ಮಸ್ಕಿ ಕ್ಷೇತ್ರಕ್ಕೆ ಪಕ್ಷ ಸಂಘಟನೆಗೆ ಕಳುಹಿಸಿದ್ದರು. ನಾನು ೬ ತಿಂಗಳು ಅಲ್ಲಿ ಪಕ್ಷ ಸಂಘಟನೆ ಮಾಡಿದೆ. ನನಗೆ ಅಲ್ಲಿ ಟಿಕೆಟ್ ಸಿಗಲಿಲ್ಲ. ಈ ಬಾರಿ ಸಂಡೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಕೇಳಿದ್ದೇನೆ. ಮೀಸಲಾತಿ ಒಂದೇ ಕುಟುಂಬಕ್ಕೆ ಸೀಮಿತವಾಗಬಾರದು ಎಂದರು.
ಸಭೆಯಲ್ಲಿ ಚರ್ಚಿತವಾದ ವಿಷಯವನ್ನು ಫೋನ್ ಮೂಲಕ ಮುಖಂಡರು ಸಂತೋಷ್ ಲಾಡ್ ಗಮನಕ್ಕೆ ತಂದರು. ಈ ಕುರಿತು ಚರ್ಚಿಸಲು ಗುರುವಾರ ಬೆಂಗಳೂರಿಗೆ ಬರಲು ಸಂತೋಷ್ ಲಾಡ್ ತಿಳಿಸಿದರು. ಈ ಹಿನ್ನೆಲೆಯಲ್ಲಿ ಪಕ್ಷದ ಹಲವು ಮುಖಂಡರು ಗುರುವಾರ ಬೆಂಗಳೂರಿಗೆ ತೆರಳಿ, ಲಾಡ್‌ಗೆ ಬೇಡಿಕೆ ಸಲ್ಲಿಸಲು ತೀರ್ಮಾನಿಸಿದರು.ಸಭೆಯಲ್ಲಿ ಪಕ್ಷದ ಮುಖಂಡರಾದ ಪಿ.ರವಿಕುಮಾರ್, ಶಿವಕುಮಾರ್, ನವಲೂಟಿ ಜಯಣ್ಣ, ವಸಂತಕುಮಾರ್, ಕೆ.ವಿ. ಸುರೇಶ್, ಈರೇಶ್ ಶಿಂಧೆ, ಎ. ಪೊಂಪಣ್ಣ, ಸಿದ್ದೇಶ್, ಹೊಸಗೇರಪ್ಪ ಸೇರಿದಂತೆ ನೂರಾರು ಮುಖಂಡರು ಭಾಗವಹಿಸಿದ್ದರು.