ಅಲೆಮಾರಿಗಳ ಗುಡಿಸಲುಗಳಿಗೆ ಸಂಸದ ಭೇಟಿ

KannadaprabhaNewsNetwork |  
Published : Aug 04, 2025, 11:45 PM IST
ಚಿತ್ರ 4ಬಿಡಿಆರ್54 | Kannada Prabha

ಸಾರಾಂಶ

ಪಟ್ಟಣದ ಅಲೆಮಾರಿ ಜನಾಂಗ ವಾಸಿಸುವ ಗುಡಿಸಲು ಮನೆಗಳಿಗೆ ಸೋಮವಾರ ಭೇಟಿ ನೀಡಿದ ಸಂಸದ ಸಾಗರ ಖಂಡ್ರೆ ಅವರ ಸಮಸ್ಯೆ ಆಲಿಸಿದರು. ಈ ವೇಳೆ ಮಾತನಾಡಿದ ಅವರು, ಈಗಾಗಲೇ 2 ಎಕರೆ ಜಮೀನು ಮಂಜೂರಾತಿಯಾಗಿದೆ.

ಕನ್ನಡಪ್ರಭ ವಾರ್ತೆ ಔರಾದ್‌

ಪಟ್ಟಣದ ಅಲೆಮಾರಿ ಜನಾಂಗ ವಾಸಿಸುವ ಗುಡಿಸಲು ಮನೆಗಳಿಗೆ ಸೋಮವಾರ ಭೇಟಿ ನೀಡಿದ ಸಂಸದ ಸಾಗರ ಖಂಡ್ರೆ ಅವರ ಸಮಸ್ಯೆ ಆಲಿಸಿದರು.

ಈ ವೇಳೆ ಮಾತನಾಡಿದ ಅವರು, ಈಗಾಗಲೇ 2 ಎಕರೆ ಜಮೀನು ಮಂಜೂರಾತಿಯಾಗಿದೆ. ಇನ್ನೂ 2 ಎಕರೆ ಜಮೀನು ಮಂಜುರಾತಿ ಮಾಡಲಾಗುತ್ತದೆ. ಮನೆಗಳಿಗಾಗಿ ತಾವುಗಳು ಅರ್ಜಿ ಸಲ್ಲಿಸುವಂತೆ ಎಲ್ಲ ಜನರಿಗೆ ಮನವರಿಕೆ ಮಾಡಿದರು. ನಾವುಗಳು 40 ವರ್ಷದಿಂದ ಇಲ್ಲಿಯೇ ವಾಸವಾಗಿದ್ದೇವೆ. ಆದರೆ ಇಲ್ಲಿಯವರಗೆ ಯಾವುದೇ ಸಮಸ್ಯೆ ಬಗೆಹರಿದಿಲ್ಲ. ಕೂಡಲೇ ತಾವುಗಳು ನಮ್ಮ ಸಮಸ್ಯೆಗೆ ಸ್ಪಂದಿಸಬೇಕು ಎಂದು ಗೊಳು ತೋಡಿಕೊಂಡರು.

ಅಭಿಮಾನಿಯ ಹರಿಕೆ ತೀರಿಸಿದ ಖಂಡ್ರೆ:

ಸಾಗರ ಖಂಡ್ರೆ ಸಂಸದನಾದರೇ ಅವರಿಂದ ವಿಶೇಷ ಪೂಜೆ ಸಲ್ಲಿಸುವ ಮೂಲಕ 101 ತೆಂಗಿನಕಾಯಿ ಒಡೆಯುವುದಾಗಿ ಸಾಗರ ಖಂಡ್ರೆ ಅವರ ಅಭಿಮಾನಿ ಅನಿಲ ನಿರ್ಮಳೆ ಅವರು ಅಮರೇಶ್ವರ ದೇವರ ಮೇಲೆ ಹರಕೆ ಮಾಡಿದರು.

ಸಂಸದ ಸಾಗರ ಖಂಡ್ರೆ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಎರಡು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಉಳಿದ 99 ತೆಂಗಿನಕಾಯಿಯನ್ನು ಸಂಸದ ಸಾಗರ ಖಂಡ್ರೆ ಅವರ ಹೆಸರಿನ ಮೇಲೆ ಅನಿಲ ನಿರ್ಮಳೆ ಒಡೆದು ಸಾರ್ವಜನಿಕರಿಗೆ ಸಿಹಿ ತಿನ್ನಿಸಿ ಹರಿಕೆ ತೀರಿಸುವುದು ಎಲ್ಲರ ಗಮನ ಸೆಳೆಯಿತು.

ಖಂಡ್ರೆಗೆ ಬಾಜಾ ಭಜಂತ್ರಿಯೊಂದಿಗೆ ಸ್ವಾಗತ:

ಸಂಸದ ಸಾಗರ ಖಂಡ್ರೆ ಡೋಂಗರಗಾಂವ ಗ್ರಾಮಕ್ಕೆ ಭೇಟಿ ನೀಡುತ್ತಿದಂತೆ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ಬಳಿಕ ಬಾಜಾ ಭಜಂತ್ರಿಯೊಂದಿಗೆ ಮುಖ್ಯರಸ್ತೆಯಲ್ಲಿ ಅದ್ಧೂರಿ ಮೆರವಣಿಗೆ ನಡೆಸಿದರು.

ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯುತ್ತಿದೆ. ಅಲ್ಲದೇ ಗ್ರಾಮದಲ್ಲಿ ನೀರಿನ ಸಮಸ್ಯೆಯಿದೆ ಎಂದು ಸಮಸ್ಯೆ ತೋಡಿಕೊಂಡಾಗ ಇದಕ್ಕೆ ಸ್ಪಂದಿಸಿದ ಖಂಡ್ರೆ ತಾಪಂ ಇಒ ಶಿವಕುಮಾರ ಘಾಟೆ ಅವರಿಗೆ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ತಿಳಿಸಿದರು. ಇದೇ ರೀತಿ ಕೊಳ್ಳುರ್ ಗ್ರಾಮದಲ್ಲಿಯೂ ಸಂಸದ ಖಂಡ್ರೆ ಅವರಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ