‘ಯುಕೊ’ ನಿಯೋಗದಿಂದ ಸಂಸದ ಯದುವೀರ್ ಭೇಟಿ

KannadaprabhaNewsNetwork |  
Published : Aug 31, 2024, 01:35 AM IST
ಚಿತ್ರ :  30ಎಂಡಿಕೆ2 : ಯುಕೊ' ನಿಯೋಗದಿಂದ ಸಂಸದ ಯದುವೀರ್ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಯುಕೊ ಅಧ್ಯಕ್ಷ, ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದಲ್ಲಿ ಸಂಸದರ ಕಚೇರಿಯಲ್ಲಿ ಭೇಟಿ ಮಾಡಿ ಚರ್ಚಿಸಲಾಯಿತು. ಕೊಡವರನ್ನು ಹಿಂದುಳಿದ ವರ್ಗಗಳ ಕೇಂದ್ರದ ಪಟ್ಟಿಗೆ ಸೇರ್ಪಡೆಗೊಳಿಸುವ ಕುರಿತಂತೆ ಸಂಸದರಿಗೆ ಮನವರಿಕೆ ಮಾಡಿಕೊಡಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಯುನೈಟೆಡ್ ಕೊಡವ ಆರ್ಗನೈಜೇಶನ್- ಯುಕೊ ಸಂಘಟನೆಯ ನಿಯೋಗವು ಶುಕ್ರವಾರ ಮೈಸೂರಿನಲ್ಲಿ ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಟದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿಮಾಡಿ ಕೊಡವರನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುವಂತೆ ಮನವಿ ಸಲ್ಲಿಸಿ ಚರ್ಚೆ ನಡೆಸಿತು.

ಯುಕೊ ಅಧ್ಯಕ್ಷ, ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದಲ್ಲಿ, ನಗರದ ಕಾಡ ಕಚೇರಿ ಆವರಣದಲ್ಲಿರುವ ಸಂಸದರ ಕಚೇರಿಯಲ್ಲಿ ಭೇಟಿ ಮಾಡಿ ಚರ್ಚಿಸಲಾಯಿತು. ಕೊಡವ ಜನಾಂಗವು ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ 3 ಎ ಅಡಿಯಲ್ಲಿ ವರ್ಗಿಕರಣಗೊಂಡು ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿಗೆ ಭಾಜನರಾಗಿರುತ್ತಾರೆ. ಆದರೆ ಕೇಂದ್ರದ ಹಿಂದುಳಿದ ವರ್ಗಗಗಳ ಪಟ್ಟಿಯಿಂದ ಕೊಡವರನ್ನು ಕೈಬಿಡಲಾಗಿದ್ದು, ಇದರಿಂದಾಗಿ ಕೇಂದ್ರ ಸರ್ಕಾರದ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿಯಲ್ಲಿ ಕೊಡವರಿಗೆ ಅನ್ಯಾಯವಾಗುತ್ತಿದೆ. ಈ ನಿಟ್ಟಿನಲ್ಲಿ ಕೊಡವರನ್ನು ಹಿಂದುಳಿದ ವರ್ಗಗಳ ಕೇಂದ್ರದ ಪಟ್ಟಿಗೆ ಸೇರ್ಪಡೆಗೊಳಿಸುವ ಕುರಿತಂತೆ ಸಂಸದರಿಗೆ ಮನವರಿಕೆ ಮಾಡಿಕೊಡಲಾಯಿತು.

ಹಾಗೆಯೇ ಕೇಂದ್ರ ಸರ್ಕಾರವು ಯುಜಿಸಿ ಸಹಯೋಗದಲ್ಲಿ, ಅಳಿವಿನಂಚಿನಲ್ಲಿರುವ ಭಾಷೆಗಳ ಅಭಿವೃದ್ಧಿ ನಿಟ್ಟಿನಲ್ಲಿ, ದಾಖಲೀಕರಣ, ಅಧ್ಯಯನ ಹಾಗೂ ಸಂರಕ್ಷಣೆಯ ಧ್ಯೇಯದೊಂದಿಗೆ ಪ್ರಾರಂಭಿಸಿರುವ ಎಸ್.ಪಿ.ಪಿ.ಪಿ.ಇ.ಎಲ್ ಹಾಗೂ ಅಸ್ಮಿತ ಎಂಬ ಎರಡು ಯೋಜನೆಗಳನ್ನು ಪ್ರಾರಂಭಿಸಿದ್ದು, ಈ ಯೋಜನೆಗೆ ಯುನೆಸ್ಕೋ ವರದಿಯ ಆಧಾರದಲ್ಲಿ ಅಳಿವಿನಂಚಿನಲ್ಲಿರುವ ಕೊಡವ ಜನಾಂಗವು ಅರ್ಹತೆಯನ್ನು ಹೊಂದಿದೆ. ಈ ಯೋಜನೆಗೆ ಕೊಡವ ಭಾಷೆಯನ್ನು ಪರಿಗಣಿಸುವಂತೆಯೂ ಸಂಸದರೊಂದಿಗೆ ಚರ್ಚಿಸಲಾಯಿತು.

ಮನವಿ ಸ್ವೀಕರಿಸಿ, ಪೂರಕವಾಗಿ ಸ್ಪಂದಿಸಿ ಮಾತನಾಡಿದ ಸಂಸದರು, ಮನವಿಯಲ್ಲಿನ ಅಂಶಗಳನ್ನು ಪರಿಗಣಿಸಿ, ಪರಿಶೀಲಿಸಿ ಸೂಕ್ತವಾದ ಪ್ರಕ್ರಿಯೆಗಳ ಮೂಲಕ ಮನವಿಯಲ್ಲಿನ ಅಂಶಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಡೊಯ್ಯುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದಾಗಿ ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ಸಂದರ್ಭೋಚಿತವಾಗಿ ತಮ್ಮೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನವನ್ನು ಕೈಗೊಳ್ಳುವುದಾಗಿಯೂ ತಿಳಿಸಿದರು.

ಈ ಸಂದರ್ಭ ಹಾಜರಿದ್ದ ಕೊಡಗು-ಮೈಸೂರು ಕ್ಷೇತ್ರದ ಮಾಜಿ ಸಂಸದ ಹಾಗೂ ಹಾಲಿ ಎಂಎಲ್‌ಸಿ ಅಡಗೂರು ಎಚ್. ವಿಶ್ವನಾಥ್ ಮಾತನಾಡಿ, ಕೊಡವರ ಐತಿಹಾಸಿಕ ಹಿನ್ನಲೆ, ದೇಶಕ್ಕೆ ಕೊಡವರ ಕೊಡುಗೆ ಹಾಗೂ ಕೊಡವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಸಂಸದರಿಗೆ ಮಾಹಿತಿ ಹಾಗೂ ಸಲಹೆಯನ್ನು ನೀಡಿ, ಕೊಡವರ ಬೇಡಿಕೆಗಳನ್ನ ಬೆಂಬಲಿಸಿ ಸಂಸದರಿಗೆ ಮನವರಿಕೆ ಮಾಡಿದರು.

ನಿಯೋಗದಲ್ಲಿ ಚೆಪ್ಪುಡಿರ ಸುಜು ಕರುಂಬಯ್ಯ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ನೆಲ್ಲಮಕ್ಕಡ ಜೆಫ್ರಿ ಮಾದಯ್ಯ, ಅಜಿನಿಕಂಡ ಸೂರಜ್ ತಿಮ್ಮಯ್ಯ, ಮಚ್ಚಾಮಾಡ ಅರುಣ ಸೋಮಯ್ಯ, ರಮೇಶ್, ಬೊಳಿಯಂಗಡ ಬೋಪಣ್ಣ, ಪುದಿಯೊಕ್ಕಡ ದಿನೇಶ್, ತೀತಿಮಾಡ ಬೋಸ್ ಅಯ್ಯಪ್ಪ, ಪೊಂಜಂಡ ಗಿರಿ, ಚಿರಿಯಪಂಡವಿಶು ಕಾಳಪ್ಪ, ಚೆಪ್ಪುಡಿರ ಪ್ರತಿಮಾ ಕರುಂಬಯ್ಯ, ಕಳ್ಳಿಚಂಡ ದೀನ ಉತ್ತಪ್ಪ, ಬೊಳ್ಳಚೆಟ್ಟಿರ ಮೈನಾ ಕಾಳಪ್ಪ,ಕೊಕ್ಕಲೆಮಾಡ ರತಿ ಕುಶಾಲಪ್ಪ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ
ಎಚ್ಚೆತ್ತ ಬೆಂ.ವಿವಿ: ಲೋಪ ಸರಿಪಡಿಸಿ 400 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ