ಸಂಸದರಿಂದ ಯುವಕರ ಹಾದಿ ತಪ್ಪಿಸುವ ಕಾರ್ಯ

KannadaprabhaNewsNetwork |  
Published : Feb 16, 2026, 02:15 AM IST
15ಕೆಪಿಎಲ್10:ಕೊಪ್ಪಳ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಅನೇಕ ಯುವಕರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. | Kannada Prabha

ಸಾರಾಂಶ

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಯುವಕರು ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುವುದು ನಿಶ್ಚಿತ.

ಕೊಪ್ಪಳ: ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ ನೆಪದಲ್ಲಿ ಸಂಸದ ರಾಜಶೇಖರ ಯುವಕರನ್ನು ಹಾದಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಹೇಳಿದರು.

ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ನಗರದ ವಿವಿಧ ವಾರ್ಡ್ ಅನೇಕ ಯುವಕರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಯುವಕರು ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುವುದು ನಿಶ್ಚಿತ. ಯುವಕರನ್ನು ಶಾಸಕ ರಾಘವೇಂದ್ರ ಹಿಟ್ನಾಳ್ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಕೆಎಂಎಫ್ ಅಧ್ಯಕ್ಷ ಹುದ್ದೆ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ ಯುವಕರು ಸಮಸ್ಯೆ ಪರಿಹರಿಸುವಂತೆ ಕೋರಿ ಅವರ ಬಳಿ ಹೋದರೂ ಶಾಸಕರು ಅವರಿಗೆ ಸಿಗುತ್ತಿಲ್ಲ. ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ ನೆಪದಲ್ಲಿ ಸಂಸದ ರಾಜಶೇಖರ ಹಿಟ್ನಾಳ್ ಯುವಕರನ್ನು ಹಾದಿ ತಪ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡು ನಮ್ಮ ಸಂಸ್ಕಾರಕ್ಕೆ ಧಕ್ಕೆ ತರುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವೀರೇಶ ಅಂಚಿನಮನಿ, ಆನಂದ ಪೂಜಾರಿ, ಮಹಾಂತೇಶ, ಸುರೇಶ ಇಲಕಲ್, ಕೃಷ್ಣ ದೊಡ್ಮನಿ, ಸಚಿನ್ ಪೂಜಾರಿ, ದ್ವಿಗುಣಪ್ಪ ಮುಂಡರಗಿ, ಮಹಾಂತೇಶ್ ದೊಡ್ಮನಿ, ಶ್ರೀನಿವಾಸ ಕಟ್ಟಿಮನಿ, ವೀರೇಶ್ ದೊಡ್ಮನಿ, ಪರಸಪ್ಪ ಗದಗಿನಮನಿ, ಹನುಮಂತಪ್ಪ ಪೂಜಾರಿ, ಗೌರಿಶ ಪೂಜಾರಿ, ಸಂಜೀವಪ್ಪ ದೊಡ್ಡಮನಿ, ಗಂಗಪ್ಪ ಕುಕುನೂರ, ಗಂಗಪ್ಪ ಗದಿಗಿನಮನಿ, ಮೈಲಾರಿ ಗದಗಿಮನಿ, ಬಸನಗೌಡ, ವೀರು, ಪ್ರಭುರಾಜ್, ರವಿಚಂದ್ರಪ್ಪ ಹಾಗೂ ದೇವೇಂದ್ರಪ್ಪ ಸಿಗದಂತೆ ಹಲವಾರು ಯುವಕರು ಜೆಡಿಎಸ್ ಸೇರ್ಪಡೆಗೊಂಡರು. ನೂತನವಾಗಿ ಎಸ್‌ಡಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾದ ಗವಿಸಿದ್ದಪ್ಪ ಮುಂಗಲಿಗೆ ಸನ್ಮಾನಿಸಲಾಯಿತು.

ಜೆಡಿಎಸ್ ಒಬಿಸಿ ಜಿಲ್ಲಾಧ್ಯಕ್ಷ ಕರಿಯಪ್ಪ ಹಾಲವರ್ತಿ, ನಗರ ಅಧ್ಯಕ್ಷ ಸೋಮನಗೌಡ ಹೊಗರನಾಳ, ಶಿವಕುಮಾರ್ ಏಣಿಗಿ, ಪ್ರವೀಣ ಇಟಗಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂತ ಸೇವಾಲಾಲ್‌ ಮಹಾನ್ ದಾರ್ಶನಿಕ: ನಾಗರಾಜ ಲಕ್ಕುಂಡಿ
ಸಂಸ್ಕಾರ, ಸನ್ನಡತೆಯಿಂದ ಗುರುವಿನ ಕೃಪೆ: ಫಕೀರ ದಿಂಗಾಲೇಶ್ವರ ಶ್ರೀ