ಡಂಬಳ: ವೀರಶೈವ ಲಿಂಗಾಯತ ಪ್ರಾಚೀನ ಧರ್ಮವಾಗಿದೆ. ಶಿವರಾತ್ರಿ ದಿನದಂದು ಲಿಂಗದೀಕ್ಷೆ ಪಡೆದುಕೊಂಡವರು ಶಿವನ ಸ್ವರೂಪಿಗೆ ಸಾಕ್ಷಿಯಾಗಿರುತ್ತಾರೆ ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಮಹಿಳೆಯರಿಗೆ ಪೂಜೆಯ ದೀಕ್ಷೆಯನ್ನು ಕೊಟ್ಟಿದ್ದು ಬಸವಣ್ಣನವರ ಕಾಲದಲ್ಲಿ. ಸಮಾಜದಲ್ಲಿ ಮಹಿಳೆಯರನ್ನು ಸಮನಾಗಿ ಕಂಡಿದ್ದು ಬಸವಣ್ಣನವರು. ಲಿಂಗ ಧರಿಸಿದವರು ಮಾತ್ರ ಲಿಂಗಾಯತರು. ವಿಶ್ವಕ್ಕೆ ಬೇಕಾಗಿರುವುದು ಯಾವುದೇ ಜಾತಿ, ಪಂಗಡ, ಧರ್ಮ ಅಲ್ಲ, ಪ್ರತಿಯೊಬ್ಬರೂ ಬಸವಣ್ಣನವರು, ಬುದ್ಧ, ಮಹಮ್ಮದ್ ಪೈಗಂಬರರಂಥ ಶರಣರ ತತ್ವ ಸಿದ್ಧಾಂತ ಆದರ್ಶಗಳಿಂದ ಬಾಳಬೇಕು ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಉಪಾಧ್ಯಕ್ಷ ಮಿಥನಗೌಡ ಜಿ. ಪಾಟೀಲ ಮಾತನಾಡಿ, ವೀರಶೈವ ಲಿಂಗಾಯತದಲ್ಲಿ ಒಳಪಂಗಡಗಳಿವೆ. ಅವುಗಳನ್ನು ಬದಿಗೆ ಒತ್ತಿ ಎಲ್ಲ ಒಳಪಗಂಡದರು ಒಂದು ಎಂದು ನಡೆಯಬೇಕು. ಪ್ರತಿಯೊಂದು ತಾಲೂಕು, ಜಿಲ್ಲೆಯ ವೀರಶೈವ ಲಿಂಗಾಯತರು ಸಂಘಟಿತರಾಗಬೇಕು ಎಂದರು.ಕಾಂಗ್ರೆಸ್ ಮುಖಂಡ ಆನಂದ ಗಡ್ಡದದೇವರಮಠ ಮಾತನಾಡಿ, ಪ್ರತಿಯೊಬ್ಬರಿಗೂ ಸಂಸ್ಕಾರ ಇಲ್ಲದೆ ಜೀವನ ನಡೆಸುವುದು ಕಷ್ಟಕರ. ಶಿಕ್ಷಣ ಯಾವುದೇ ಭಾಷೆಯಲ್ಲಿ ಕಲಿಯಿರಿ, ಆದರೆ ಸಂಸ್ಕಾರ ಶಿಕ್ಷಣ ಮುಖ್ಯವಾಗಿದೆ ಎಂದರು.
ಡಾ. ಸುಜ್ಞಾನದೇವ ಶಿವಾಚಾರ್ಯ ಶ್ರೀಗಳು, ವೀರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಂಗಮ ವಟುಗಳು ಲಿಂಗ ದೀಕ್ಷೆ, ಲಿಂಗಪೂಜೆ ವಿಧಿವಿಧಾನಗಳನ್ನು ಹೇಗೆ ಅನುಸರಿಸಬೇಕು, ಲಿಂಗಪೂಜೆ ಮಾಡುವ ಕುರಿತು ವಿಭೂತಿ ಧರಿಸುವ ಕುರಿತು ಆಶೀವರ್ಚನ ನೀಡಿದರು.ವೀರಭದ್ರೇಶ್ವರ ದೇವಸ್ಥಾನದಲ್ಲಿ 28 ಜಂಗಮ ವಟುಗಳಿಗೆ ಲಿಂಗ ದೀಕ್ಷೆ ಜರುಗಿತು ಮತ್ತು ಪರಿಶಿಷ್ಟ ವರ್ಗದವರಿಗೂ ಲಿಂಗದೀಕ್ಷೆ ನೀಡಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಮೇಳಗಳ ಮೂಲಕ ಸಂಚರಿಸಿತು.
ಕಾರ್ಯಕ್ರಮದಲ್ಲಿ ಜಿ.ವಿ. ಹಿರೇಮಠ, ಡಂಬಳ ಹಾವೇರಿ ಶಾಸ್ತ್ರೀ ಗುರುಶಾಂತಯ್ಯ ಹಿರೇಮಠ, ಕಾಂಗ್ರೆಸ್ ಮುಖಂಡ ವೀರಯ್ಯ ಸೋಮನಕಟ್ಟಿಮಠ, ಮಂಜಯ್ಯಸ್ವಾಮಿ ಅರವಟಿಗಿಮಠ, ವಿಶಾಲಾ ಮಲ್ಲಾಪುರ, ಮಹೇಶ ಗಡಗಿ, ಅಂದಾನಪ್ಪ ಯಳಮಲ್ಲಿ, ಸಿ.ಟಿ. ಪ್ಯಾಟಿ, ಮುತ್ತಣ್ಣ ಹಿರೇಮಠ, ಕುಮಾರಸ್ವಾಮಿ ಹೆಬ್ಬಳ್ಳಿಮಠ, ವೀರಶೈವ ಲಿಂಗಾಯತ ಸಮಾಜ ಸೇವಾ ಸಮಿತಿ ಅಧ್ಯಕ್ಷ ಸಿದ್ದಪ್ಪ ನಂಜಪ್ಪನವರ, ಉಪಾಧ್ಯಕ್ಷ ವೆಂಕಣ್ಣ ಗಡಗಿ, ಕಾರ್ಯದರ್ಶಿ ಶಿದ್ಧಲಿಂಗಯ್ಯ ಸ್ಥಾವರಮಠ, ಖಜಾಂಚಿ ಬಸವರಾಜ ಗಂಗಾವತಿ, ಶೇಖಪ್ಪ ಬಂಡಿಹಾಳ, ನಾಗಪ್ಪ ಜವಳತೋಟದ, ಅಶೋಕ ಹಡಪದ, ಗವಿಸಿದ್ದಪ್ಪ ಹಳ್ಳಾಕಾರ, ಬಸವರಾಜ ಗಾಣಿಗೇರ, ಮಲ್ಲಪ್ಪ ರೇವಡಿ, ಮುತ್ತಣ್ಣ ಕೊಂತಿಕಲ್ಲ, ಉಮೇಶ ಬೆಲ್ಲದ, ಮಲ್ಲಿಕಾರ್ಜುನ ಪ್ಯಾಟಿ ಇದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ಮಂಜುನಾಥ ಬಿಸನಹಳ್ಳಿ ಸ್ವಾಗತಿಸಿ ನಿರೂಪಿಸಿದರು. ರುದ್ರಪ್ಪ ಕೊರ್ಲಗಟ್ಟಿ ವಂದಿಸಿದರು.