ಕನ್ನಡಪ್ರಭ ವಾರ್ತೆ ಬೆಂಗಳೂರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 11ಗಂಟೆಗೆ ಜಿಕೆವಿಕೆ ಆವರಣದ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ನಡೆಯುವ ಘಟಿಕೋತ್ಸವದ ಅಧ್ಯಕ್ಷತೆಯನ್ನು ಕುಲಾಧಿಪತಿ, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ವಹಿಸಲಿದ್ದಾರೆ. ಕೃಷಿ ಸಚಿವ, ಕೃಷಿ ವಿವಿ ಸಹಕುಲಾಧಿಪತಿ ಎನ್. ಚಲುವರಾಯಸ್ವಾಮಿ ಭಾಗಿಯಾಗಲಿದ್ದಾರೆ. ಇಫ್ಕೋ ವ್ಯವಸ್ಥಾಪಕ ನಿರ್ದೆಶಕ ಡಾ. ಯು.ಎಸ್. ಅವಸ್ಥಿ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ ಎಂದರು.
871 ಸ್ನಾತಕ ಪದವಿ, 311 ಸ್ನಾತಕೋತ್ತರ ಪದವಿ, ಹಾಗೂ 89 ಡಾಕ್ಟೊರಲ್ ಪದವಿ ಸೇರಿ ಒಟ್ಟಾರೆ 1271ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಡಾಕ್ಟರ್ ಆಫ್ ಫಿಲಾಸಫಿ 30, ಸ್ನಾತಕೋತ್ತರ ಪದವಿ 62, ಸ್ನಾತಕ ಪದವಿಯಲ್ಲಿ 58 ಚಿನ್ನದ ಪದಕ, ಪ್ರಮಾಣ ಪತ್ರ ನೀಡಲಾಗುತ್ತಿದೆ. ಮಂಡ್ಯದ ಕೃಷಿ ಮಹಾವಿದ್ಯಾಲಯದ ಪ್ರವಳಿಕ ಕೆ.ಎಂ. ಅವರು ಪಿಚ್‌ಡಿಯಲ್ಲಿ 4 ಚಿನ್ನದ ಪದಕ ಪಡೆದು ಅಗ್ರ ಸ್ಥಾನದಲ್ಲಿದ್ದಾರೆ ಎಂದು ತಿಳಿಸಿದರು. ಬೆಂಗಳೂರು ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ವೈ.ಎನ್. ಶಿವಲಿಂಗಯ್ಯ, ಕುಲಸಚಿವ ಡಾ. ಕೆ.ಸಿ. ನಾರಾಯಣಸ್ವಾಮಿ, ಸಹ ವಿಸ್ತರಣಾ ನಿರ್ದೇಶಕ ಡಾ. ಕೆ.ಪಿ. ರಘುಪ್ರಸಾದ್ ಇದ್ದರು.-------ದೀಪ್ತಿಗೆ 13 ಚಿನ್ನದ ಪದಕ:
ಮೆಕ್ಯಾನಿಕ್ ಪುತ್ರಿಗೆ ಕೃಷಿ ವಿಜ್ಞಾನಿ ಕನಸು
ಮಂಡ್ಯ ಕೃಷಿ ವಿವಿಯಲ್ಲಿ ಪದವಿ ಬಿಎಸ್ಸಿ (ಆನರ್ಸ್) ಕೃಷಿಯಲ್ಲಿ ಒಂಬತ್ತು ಪದಕ ಪಡೆದ ಮೈಸೂರು ಮೂಲದ ಆರ್. ಸ್ಪೂರ್ತಿಯ ತಂದೆ ಮೆಕ್ಯಾನಿಕ್ ಶಾಪ್ ಹೊಂದಿದ್ದಾರೆ. ರಾಂಚಿಯ ಐಐಎಬಿ ಸಂಸ್ಥೆಯಲ್ಲಿ ಎಂಎಸ್ಸಿ ಓದುತ್ತಿದ್ದಾರೆ. ಭತ್ತದಲ್ಲಿ ಹೆಚ್ಚು ಇಳುವರಿ ಕೊಡುವ ಅತ್ಯುತ್ತಮ ತಳಿ ಅಭಿವೃದ್ಧಿಪಡಿಸುವ ಗುರಿಯಿದೆ ಎಂದರು.ಹುಳುಗಳ ನಿಯಂತ್ರಣ ಧ್ಯೇಯ:
ಆರ್‌ಬಿಐನಲ್ಲಿ ಸೆಕ್ಯೂರಿಟಿ ಗಾರ್ಡ್ ಉದ್ಯೋಗ ಮಾಡುವವರ ಪುತ್ರ ಡಿ.ಎಸ್. ಯಕ್ಷಿತ್. ಕೃಷಿ ಬಿಎಸ್ಸಿ ಪದವಿಯಲ್ಲಿ ಮೂರು ಚಿನ್ನದ ಪದಕ ಪಡೆದಿದ್ದಾರೆ. ಮಣ್ಣಿನ ಫಲವತ್ತತೆಗೆ ಧಕ್ಕೆಯಾಗದ ನ್ಯಾನೊ ಸಿಲಿಕಾ ಕೆಮಿಕಲ್ಸ್ ಅಭಿವೃದ್ಧಿಗೆ ಒತ್ತು ಕೊಟ್ಟು ಮೆಕ್ಕೆಜೋಳದಲ್ಲಿ ರೈತರನ್ನು ಭಾದಿಸುವ ಲದ್ದಿಹುಳಗಳ ನಿಯಂತ್ರಣಕ್ಕೆ ಶ್ರಮಿಸುತ್ತೇನೆ ಎಂದರು.