ಎಂಆರ್‌ಪಿಎಲ್‌ ಸ್ಫೋಟ ಘಟನೆಯಲ್ಲಿ ಗಂಭೀರ ಗಾಯಾಳು ಸಾವು

KannadaprabhaNewsNetwork |  
Published : Oct 18, 2026, 03:15 AM IST
ಮೃತ ರಾಜೇಶ್‌ ಬ್ಯಾಪ್ಟಿಸ್ಟ್‌  | Kannada Prabha

ಸಾರಾಂಶ

ಜೋಕಟ್ಟೆ ಬಳಿಯ ಎಂಆರ್‌ಪಿಎಲ್‌ ಮೂರನೇ ಹಂತದ ಘಟಕದಲ್ಲಿ ಇತ್ತೀಚೆಗೆ ನಡೆದ ಸ್ಫೋಟ ಘಟನೆಯಲ್ಲಿ ತೀವ್ರ ಸುಟ್ಟ ಗಾಯಗೊಂಡಿದ್ದ ಸುರತ್ಕಲ್ ಮೇಲ್ಸೇತುವೆ ಬಳಿಯ ನಿವಾಸಿ ರಾಜೇಶ್ ಬ್ಯಾಪ್ಟಿಸ್ಟ್ (38) ಶನಿವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ.

ಮಂಗಳೂರು: ಜೋಕಟ್ಟೆ ಬಳಿಯ ಎಂಆರ್‌ಪಿಎಲ್‌ ಮೂರನೇ ಹಂತದ ಘಟಕದಲ್ಲಿ ಇತ್ತೀಚೆಗೆ ನಡೆದ ಸ್ಫೋಟ ಘಟನೆಯಲ್ಲಿ ತೀವ್ರ ಸುಟ್ಟ ಗಾಯಗೊಂಡಿದ್ದ ಸುರತ್ಕಲ್ ಮೇಲ್ಸೇತುವೆ ಬಳಿಯ ನಿವಾಸಿ ರಾಜೇಶ್ ಬ್ಯಾಪ್ಟಿಸ್ಟ್ (38) ಶನಿವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ.ರಾಜೇಶ್ ಅವಿವಾಹಿತರಾಗಿದ್ದು ತಂದೆ, ತಾಯಿ ಮೃತಪಟ್ಟಿದ್ದರು. ಇವರಿಗೆ ಓರ್ವ ಸಹೋದರನಿದ್ದು ಇತರ ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಯಲ್ಲಿ ನೋಡಿಕೊಂಡಿದ್ದರು. ವಾರದ ಹಿಂದೆ ಸ್ವಲ್ಪ ಚೇತರಿಕೆ ಕಂಡಿದ್ದರು. ಮುಖ ಮತ್ತು ಎದೆಯ ಭಾಗದಲ್ಲಿ ಹೆಚ್ಚು ಸುಟ್ಟ ಗಾಯಗಳಿದ್ದರಿಂದ ಸುಸ್ಥಿತಿಗೆ ಮರಳದೆ ಅಂಗಾಂಗ ವೈಫಲ್ಯದಿಂದಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎಂಆ‌ರ್‌ಪಿಎಲ್ ಮೂರನೇ ಹಂತದ ವಿಸ್ತರಣಾ ಘಟಕದಲ್ಲಿ ಸೆ.30ರಂದು ಮಧ್ಯಾಹ್ನ ಹಠಾತ್ ಸ್ಫೋಟ ಘಟನೆ ನಡೆದಿತ್ತು.

ಸ್ಫೋಟದಲ್ಲಿ ಮೂಲ್ಕಿ ಹಳೆಯಂಗಡಿ ನಿವಾಸಿಯಾಗಿದ್ದ ನೌಕರ ಮನೀಶ್ ಕರ್ಕಡ (23) ಎಂಬ ಯುವಕ ಸ್ಥಳದಲ್ಲೇ ಸಾವಿಗೀಡಾಗಿದ್ದರು. ರಾಜೇಶ್ ಅವರಿಗೆ ಶೇ.35 ಸುಟ್ಟ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತರೇ ಎಂಟು ಮಂದಿಗೆ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿದ್ದವು.

ಮೃತ ಮನೀಶ್ ಕರ್ಕಡ ಕುಟುಂಬಕ್ಕೆ ಎಂಆರ್‌ಪಿಎಲ್ ಸಂಸ್ಥೆಯಿಂದ 1.2ಂ ಕೋಟಿ ರು. ಪರಿಹಾರ ನೀಡಲಾಗಿತ್ತು. ಅದೇ ರೀತಿ ರಾಜೇಶ್ ಬ್ಯಾಪ್ಟಿಸ್ಟ್ ಕುಟುಂಬಕ್ಕೂ ಎಂಆರ್‌ಪಿಎಲ್ ಸಂಸ್ಥೆಯಿಂದ 1.2ಂ ಕೋಟಿ ರು. ಪರಿಹಾರ ಪರಿಹಾರ ಒದಗಿಸುವುದಾಗಿ ಸಂಸ್ಥೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಯಾನ್ಸರ್ ಗೆ ಭಯಪಡದೆ ತಪಾಸಣೆ ಮಾಡಿಸಿಕೊಳ್ಳಿ : ಡಾ. ಅನುಷಾ
ಪದವಿ ಜೀವನದ ಮಹತ್ತರವಾದ ಕಾಲಘಟ್ಟ‌: ಡಾ. ಪ್ರಮೋದ್ ಕುಮಾರ್