ಎಂಆರ್‌ಪಿಎಲ್‌ ದುರಂತ ತನಿಖೆ ಹೊಣೆ ಎಸಿಪಿಗೆ

KannadaprabhaNewsNetwork |  
Published : Oct 03, 2026, 02:45 AM IST
ಫೋಟೋ: ೨೯ಪಿಟಿಆರ್-ಪ್ರೆಸ್ಸುದ್ಧಿಗೋಷ್ಟಿಯಲ್ಲಿ ದಿವ್ಯಪ್ರಸಾದ್ ಮಾತನಾಡಿದರು. | Kannada Prabha

ಸಾರಾಂಶ

ಎಂಆರ್‌ಪಿಎಲ್‌ನ ಮೂರನೇ ಹಂತದ ಕೋಕರ್ ಹೈಡೋ ಟ್ರೇಟರ್ (ಸಿಎಚ್‌ಟಿ) ಘಟಕದಲ್ಲಿ ಬುಧವಾರ ನಡೆದ ಭೀಕರ ಸ್ಫೋಟ ಪ್ರಕರಣದ ತನಿಖೆ ಹೊಣೆಯನ್ನು ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಅವರಿಗೆ ವಹಿಸಲಾಗಿದೆ.

ಮಂಗಳೂರು: ಎಂಆರ್‌ಪಿಎಲ್‌ನ ಮೂರನೇ ಹಂತದ ಕೋಕರ್ ಹೈಡೋ ಟ್ರೇಟರ್ (ಸಿಎಚ್‌ಟಿ) ಘಟಕದಲ್ಲಿ ಬುಧವಾರ ನಡೆದ ಭೀಕರ ಸ್ಫೋಟ ಪ್ರಕರಣದ ತನಿಖೆ ಹೊಣೆಯನ್ನು ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಅವರಿಗೆ ವಹಿಸಲಾಗಿದೆ.

ಪ್ರಕರಣದ ತನಿಖೆ ಹೊಣೆಯನ್ನು ಸುರತ್ಕಲ್ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್ ಅವರಿಂದ ಪಣಂಬೂರು ಎಸಿಪಿ ಶ್ರೀಕಾಂತ್ ಅವರಿಗೆ ಹಸ್ತಾಂತರಿಸಿ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಆದೇಶಿಸಿದ್ದಾರೆ. ಎಸಿಪಿ ನೇತೃತ್ವದ ತಂಡ ಈ ಬಗ್ಗೆ ತನಿಖೆ ನಡೆಸಿ ಶೀಘ್ರದಲ್ಲಿ ವರದಿ ಸಲ್ಲಿಸಲಿದೆ. ಈ ನಡುವೆ ಎಂಆ‌ರ್‌ಪಿಎಲ್ ಸಂಸ್ಥೆಯೂ ಘಟನೆ ಬಗ್ಗೆ ಆಂತರಿಕ ತನಿಖೆ ಕೈಗೆತ್ತಿಕೊಂಡಿದೆ.

ಗಾಯಾಳುಗಳು ಚೇತರಿಕೆ: ಭೀಕರ ಸ್ಫೋಟ ಸಂದರ್ಭ ಗಾಯಗೊಂಡಿದ್ದ ಎಲ್ಲ 12 ಗಾಯಾಳುಗಳು ಚೇತರಿಸಿಕೊಂಡಿದ್ದಾರೆ. ಈ ಪೈಕಿ ಗಂಭೀರ ಗಾಯಗೊಂಡಿದ್ದ ಸುರತ್ಕಲ್ ಕಟ್ಲ ನಿವಾಸಿ ರಾಜೇಶ್ ಬ್ಯಾಪ್ಟಿಸ್ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಂಆರ್‌ಪಿಎಲ್‌ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ದಾಖಲಾಗಿದ್ದ ಅವನಾಶ್‌, ಅಕ್ಷಯ್‌, ಜಗಜೀವನ್‌ ಸಿಂಗ್‌, ಶರತ್‌ ಶೆಟ್ಟಿ ಬುಧವಾರವೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಕಿ ನಂದಿಸುವ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ ಎಂಆರ್‌ಪಿಎಲ್‌ ಅಗ್ನಿಶಾಮಕದಳ ಸಿಬ್ಬಂದಿ ಲೋಕೇಶ್‌ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳೆಯ ಪಾದರಕ್ಷೆಗಳಿಗೆ ಹೊಸ ರೂಪ ‘ದಾನ’
ಉಡುಪಿ: ನ. 27ರಿಂದ ರಾಜ್ಯ ಮಟ್ಟದ ಆಹಾರ ಮೇಳ