ಮಿಸೆಸ್ ನಿಪ್ಪಾಣಿ ಸ್ಪರ್ಧೆ: ಛಾಯಾ ಪಾಟೀಲ್‌ ಪ್ರಥಮ

KannadaprabhaNewsNetwork | Updated : Apr 11 2025, 12:32 AM IST

ಸಾರಾಂಶ

ಮಿಸೆಸ್ ನಿಪ್ಪಾಣಿ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಥಳೀಯ ಛಾಯಾ ರಾಜೇಂದ್ರ ಪಾಟೀಲ್ ಪ್ರಥಮ ಸ್ಥಾನ ಪಡೆದು 21 ಸಾವಿರ ಬಹುಮಾನ ಪಡೆದರು.

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ಜೊಲ್ಲೆ ಗ್ರೂಪ್ ವತಿಯಿಂದ ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ನಡೆಯುತ್ತಿರುವ ಕೃಷಿ ಉತ್ಸವದ ಅಂಗವಾಗಿ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಮಿಸೆಸ್ ನಿಪ್ಪಾಣಿ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಥಳೀಯ ಛಾಯಾ ರಾಜೇಂದ್ರ ಪಾಟೀಲ್ ಪ್ರಥಮ ಸ್ಥಾನ ಪಡೆದು ₹21 ಸಾವಿರ ಬಹುಮಾನ ಪಡೆದರು.

ಮಹಾರಾಷ್ಟ್ರದ ಇಚಲಕರಂಜಿಯ ವಿಜಯ ದೇವಗೊಂಡ ಗಾಯಕವಾಡ ದ್ವಿತೀಯ ಸ್ಥಾನ ಪಡೆದು ₹15 ಸಾವಿರ ಬಹುಮಾನ, ಸ್ಥಳೀಯ ಐಶ್ವರ್ಯ ಶುಭಂ ಖಾಂಡಕೆ ತೃತೀಯ ಸ್ಥಾನ ಪಡೆದು ₹10 ಸಾವಿರ ಬಹುಮಾನ ಪಡೆದರು. ಮಿಸ್ ನಿಪ್ಪಾಣಿ - 2025 ಸ್ಪರ್ಧೆಯಲ್ಲಿ ದಿವ್ಯಾ ಕುದ್ರೆ ಪ್ರಥಮ ಸ್ಥಾನ ಪಡೆದು ₹21 ಸಾವಿರ ನಗದು, ನಿಶಾ ಲಕಡೆ ದ್ವಿತೀಯ ಸ್ಥಾನದೊಂದಿಗೆ ₹15 ಸಾವಿರ ಹಾಗೂ ಸ್ನೇಹಾರಾಣಿ ಕಾಟ್ಕರ್ ತೃತೀಯ ಸ್ಥಾನದೊಂದಿಗೆ ₹10 ಸಾವಿರ ಬಹುಮಾನ ಪಡೆದರು.

ಜಿಮ್ಮಾ ಫುಗಡಿ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯ ಕಾಗಲ್ ತಾಲೂಕಿನ ಸೊನ್ನಾಳಿಯ ನಾಗನಾಥ್ ಗುಂಪು ಪ್ರಥಮ ಸ್ಥಾನದೊಂದಿಗೆ ₹25 ಸಾವಿರ, ರಾಧಾನಗರ ತಾಲೂಕಿನ ಚಂದ್ರೆ ಗ್ರಾಮದ ಜ್ಞಾನೇಶ್ವರಿ ಗುಂಪು ದ್ವಿತೀಯ ಸ್ಥಾನದೊಂದಿಗೆ ₹21 ಸಾವಿರ, ಆಜರಾದ ದುರ್ಗಾಮಾತಾ ಗ್ರುಪ್ ತೃತೀಯ ಸ್ಥಾನದೊಂದಿಗೆ ₹15 ಸಾವಿರ, ಮುರಗುಡ್‌ನ ಹಿಂದೂಸ್ತಾನ್ ಗ್ರುಪ್ ನಾಲ್ಕನೇ ಸ್ಥಾನದೊಂದಿಗೆ ₹7 ಸಾವಿರ, ಸಂಕೇಶ್ವರದ ಸಖೊ ಗ್ರುಪ್ ಐದನೇ ಸ್ಥಾನದೊಂದಿಗೆ ₹5 ಸಾವಿರ ಬಹುಮಾನ ಪಡೆದರು.

ಸಾಂಪ್ರದಾಯಿಕ ಉಡುಗೆ, ಬೀಸಣಿಕೆ ಸಂದರ್ಭದ ಜಾನಪದ ಗೀತೆ, ಕೊಡ ತಿರುಗಿಸುವುದು, ಮೊದಲಾದ ಹಳ್ಳಿ ಸೊಗಡಿನ ವಿವಿಧ ಸ್ಪರ್ಧೆಗಳು ನೋಡುಗರ ಚಪ್ಪಾಳೆ ಗಿಟ್ಟಿಸಿಕೊಂಡವು. ಈ ಎಲ್ಲ ಸ್ಪರ್ಧೆಗಳಲ್ಲಿಯ ವಿಜೇತರಿಗೆ ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಸವಪ್ರಸಾದ ಜೊಲ್ಲೆ ಹಾಗೂ ಗಣ್ಯರು ಬಹುಮಾನ ನೀಡಿ ಗೌರವಿಸಿದರು.

Share this article