ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರಕ್ಕೆ ಎಂಟೆಕ್ ಬಾಬಾ ಭೇಟಿ

KannadaprabhaNewsNetwork |  
Published : Jan 31, 2026, 02:45 AM IST
ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರಕ್ಕೆ ಎಂಟೆಕ್ ಬಾಬಾ ಭೇಟಿ ನೀಡಿ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. | Kannada Prabha

ಸಾರಾಂಶ

ಉಡುಪಿ: ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರಕ್ಕೆ ಹೆಸರಾಂತ ನಾಗಸಾಧು ಬಾಬಾ ಶ್ರೀ ಗಿರಿಕೃಷ್ಣ ಮಹಾರಾಜ್ ಗುರುವಾರ ಭೇಟಿ ನೀಡಿದರು.

ಉಡುಪಿ: ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರಕ್ಕೆ ಹೆಸರಾಂತ ನಾಗಸಾಧು ಬಾಬಾ ಶ್ರೀ ಗಿರಿಕೃಷ್ಣ ಮಹಾರಾಜ್ ಗುರುವಾರ ಭೇಟಿ ನೀಡಿದರು.

ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರು ಮಹಾರಾಜ್ ಅವರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಮಹಾರಾಜ್ ಅವರು ಪೂರ್ವಾಶ್ರಮದಲ್ಲಿ ಎಂಟೆಕ್ ಪದವಿಯನ್ನು ಹೊಂದಿ ಎಂಜಿನಿಯರ್ ಆಗಿದ್ದರು. ದೈವ ಪ್ರೇರಣೆಯಂತೆ ಎಲ್ಲವನ್ನು ತ್ಯಜಿಸಿ ಆಧ್ಯಾತ್ಮಿಕ ಸಾಧನೆಯ ಒಲವಿನಿಂದ ಹಿಮಾಲಯದಲ್ಲಿ ಕಠಿಣ ತಪಸ್ಸನ್ನಾಚರಿಸಿ, ನಾಗಸಾಧು ಆಗಿ ಪರಿವರ್ತನೆಗೊಂಡರು. ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ಅಚ್ಚರಿ ಹುಟ್ಟಿಸಿ, ಎಂಟೆಕ್ ಬಾಬಾ ಎಂದೇ ಹೆಸರುವಾಸಿಯಾಗಿದ್ದರು.

ಕ್ಷೇತ್ರದ ಆದಿಶಕ್ತಿ ಸಭಾಭವನದಲ್ಲಿ ಆಯೋಜಿಸಿದ ಧರ್ಮಸಭೆಯಲ್ಲಿ ಬಾಬಾ ಗಿರಿಕೃಷ್ಣ ಮಹಾರಾಜ ಅವರು ಆಶೀರ್ವಚನ ನೀಡಿದರು. ಇದು ಅತ್ಯಂತ ಪ್ರಭಾವಶಾಲಿ ಸಾನಿಧ್ಯ ಹೊಂದಿರುವ ಶ್ರೀ ಶಕ್ತಿ ಸಂಚಯನ ಕ್ಷೇತ್ರವಾಗಿದೆ. ಕ್ಷೇತ್ರದ ಶಕ್ತಿಗಳು ಬಂದ ಭಕ್ತಾದಿಗಳಿಗೆ ಅನುಗ್ರಹಿಸುವುದರಲ್ಲಿ ಸಂಶಯವೇ ಇಲ್ಲ. ಇಂತಹ ಮಹಾನ್ ಕ್ಷೇತ್ರ ನಿರ್ಮಾತೃವಾದ ರಮಾನಂದ ಗುರೂಜಿ ಅವರು ಖಂಡಿತವಾಗಿಯೂ ಪೂರ್ವ ಜನ್ಮದ ಮುನಿ ಶ್ರೇಷ್ಠರೇ ಸರಿ. ಅವರ ಆಜನ್ಮ ತಪಸ್ಸಿನ ಫಲವೇ ಈ ಕ್ಷೇತ್ರ ನಿರ್ಮಾಣ ಎಂದರು. ಈ ಕ್ಷೇತ್ರದಲ್ಲಿ ಕಪಿಲ ಮಹರ್ಷಿಗಳ ಸಾನಿಧ್ಯದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಾಬಾ ಅವರು, ಉತ್ತರ ಕಾಶಿಯಲ್ಲಿ ತಾವು ಕಪಿಲ ಮಹರ್ಷಿಗಳ ಸನ್ನಿಧಾನದಲ್ಲೇ ವಾಸವಿರುವುದರಿಂದ ಆ ಗುರುವಿನ ಅನುಗ್ರಹವೇ ನಾನು ಇಲ್ಲಿ ಬರಲು ಪ್ರೇರಣಾ ಶಕ್ತಿಯಾಗಿದೆ ಎಂದರು. ಇದೇ ಸಂದರ್ಭ ಕ್ಷೇತ್ರದ ವತಿಯಿಂದ ಶ್ರೀ ಗಿರಿ ಕೃಷ್ಣ ಮಹಾರಾಜ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಸಭಾ ಕಾರ್‍ಯಕ್ರಮವನ್ನು ವೇದಮೂರ್ತಿ ಸುಧೀರ್ ಮರಾಠೆ ನಿರೂಪಿಸಿದರು. ಖ್ಯಾತ ಜ್ಯೋತಿಷಿ ಅಭಿಷೇಕ್ ಬಾಯರಿ, ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾ ಉಷಾ ರಾಮನಂದ್, ಉದ್ಯಮಿ ದಿನೇಶ್ ಉದ್ಯಾವರ, ಅಲಂಕಾರ ತಜ್ಞ ಆನಂದ ಬಾಯರಿ, ಅರ್ಚಕ ಅನೀಶ್ ಆಚಾರ್ಯ, ಶಕ್ತಿ ಯೋಗ ಕೇಂದ್ರದ ಸ್ವಸ್ತಿಕಾಚಾರ್ಯ ಹಾಗೂ ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಬದಲಾವಣೆ ತರಲು ಸ್ಕೌಟ್ಸ್, ಗೈಡ್ಸ್ ನಿಂದ ಮಾತ್ರ ಸಾಧ್ಯ: ಪಿ.ಜಿ,.ಆರ್. ಸಿಂಧ್ಯ
ಗಣರಾಜ್ಯೋತ್ಸವ, ಮಕ್ಕಳ ಪ್ರತಿಭಾ ಪ್ರದರ್ಶನ ಸಮಾರಂಭ