ಚೌರೀರ ತಂಡದ ಪರ ಪ್ರತಾಪ್ ಅಚ್ಚಯ್ಯ ಹ್ಯಾಟ್ರೀಕ್ ಗೋಲು
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಕಪ್ ಹಾಕಿ ಪಂದ್ಯಾವಳಿಯ ಶುಕ್ರವಾರ ನಡೆದ ಪಂದ್ಯದಲ್ಲಿ ಚೌರೀರ, ಚೆರಿಯಪಂಡ, ಮೂಕಳಮಾಡ, ಪಾಲಂದಿರ ತಂಡಗಳು ಜಯ ಗಳಿಸಿತು.
ಮುಕ್ಕಾಟಿರ (ಬೇತ್ರಿ) ಮತ್ತು ಚೌರೀರ ತಂಡಗಳ ನಡುವಿನ ಪಂದ್ಯದಲ್ಲಿ 4-1 ಗೋಲುಗಳ ಅಂತರದಲ್ಲಿ ಚೌರೀರ ತಂಡ ಜಯ ಸಾಧಿಸಿತು. ಚೌರೀರ ತಂಡದ ಪರ ಪ್ರತಾಪ್ ಅಚ್ಚಯ್ಯ ಹ್ಯಾಟ್ರಿಕ್ ಗೋಲು ದಾಖಲಿಸಿದರೆ, ಪೆಮ್ಮಯ್ಯ 1 ಗೋಲು ಬಾರಿಸಿದರು. ಮುಕ್ಕಾಟಿರ ಉತ್ತಮ್ ಬೋಪಣ್ಣ 1 ಗೋಲು ದಾಖಲಿಸಿದರು.ಶಿವಾಚಾಳಿಯಂಡ ಮತ್ತು ಚೆರಿಯಪಂಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ 1 ಗೋಲು ದಾಖಲಿಸುವ ಮೂಲಕ ಡ್ರಾ ಆದ ಕಾರಣ ಟೈ ಬ್ರೇಕರ್‌ನಲ್ಲಿ ಚೆರಿಯಪಂಡ ತಂಡ 3 ಗೋಲು ದಾಖಲಿಸಿ ಗೆಲುವಿನ ನಗೆ ಬೀರಿತು.
ಮುಕ್ಕಾಟಿರ (ಕುಂಜಿಲಗೇರಿ) ಮತ್ತು ಮಚ್ಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ 2 ಗೋಲು ದಾಖಲಿಸಿ ಪಂದ್ಯ ಡ್ರಾ ಆದ ಕಾರಣ ಟೈ ಬ್ರೇಕರ್‌ನಲ್ಲಿ ಮಚ್ಚಂಡ ತಂಡ 4 ಗೋಲು ಬಾರಿಸಿ ಗೆಲುವು ದಾಖಲಿಸಿತು.
ಕೊಕ್ಕಲೆಮಾಡ ಮತ್ತು ಕಾಳೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕಾಳೆಯಂಡ ತಂಡ ಗೆಲುವು ಸಾಧಿಸಿತು. ನಾಯಕಂಡ ಮತ್ತು ಕಳ್ಳಿಚಂಡ ನಡುವಿನ ಪಂದ್ಯದಲ್ಲಿ ಕಳ್ಳಿಚಂಡ ತಂಡ 4-0 ಗೋಲುಗಳ ಅಂತರದಲ್ಲಿ ಜಯಸಾಧಿಸಿತು.
ತಿರೋಡಿರ ಮತ್ತು ತಿರುಟೆರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ತಿರುಟೆರ ಗೆಲುವು ಸಾಧಿಸಿತು. ಕೇತಿರ ಮತ್ತು ಕೊಚ್ಚೆರ ನಡುವಿನ ಪಂದ್ಯದಲ್ಲಿ ಕೊಚ್ಚೆರ ತಂಡ 2-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.
ಚೊಟ್ಟೆಯಂಡಮಾಡ ಮತ್ತು ಉಡುವೆರ ತಂಡಗಳ ನಡುವೆ ವಾಕ್ ಓವರ್‌ನಲ್ಲಿ ಚೊಟ್ಟೆಯಂಡಮಾಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಬಲ್ಲಾರಂಡ ಮತ್ತು ಕಾಳೇಂಗಡ ತಂಡದ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕಾಳೇಂಗಡ ತಂಡ ಜಯ ಸಾಧಿಸಿತು.