ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆಯುತ್ತಿರುವ ಮುದ್ದಂಡ ಹಾಕಿ ಕಪ್‌ನ ಶುಕ್ರವಾರ ನಡೆದ ಪಂದ್ಯದಲ್ಲಿ ಕೋಟೇರ, ಚಂಗುಲಂಡ, ಅಟ್ರಂಗಡ ತಂಡಗಳು ಜಯ ಸಾಧಿಸಿವೆ.ಚೋಯಮಾಡಂಡ ಮತ್ತು ಕೋಟೇರ ನಡುವಿನ ಪಂದ್ಯದಲ್ಲಿ ಕೋಟೇರ ತಂಡ 1-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕುಮ್ಮಂಡ ಮತ್ತು ಪುದಿಯೊಕ್ಕಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಪುದಿಯೊಕ್ಕಡ ಜಯ ಸಾಧಿಸಿತು.ಮುಕ್ಕಾಟಿರ (ಬೋಂದ) ಮತ್ತು ಚಂಗುಲಂಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಚಂಗುಲಂಡ ಗೆಲುವು ಸಾಧಿಸಿತು. ಚಂಗುಲಂಡ ಪರ ಡಿಶಿನ್ ಗಣಪತಿ ಹಾಗೂ ಗೌತಮ್ ತಲಾ 1 ಗೋಲು ದಾಖಲಿಸಿದರು. ಮುಕ್ಕಾಟಿರ ಪರ ನಿಶಾಂತ್ ತಿಮ್ಮಯ್ಯ 1 ಗೋಲು ಬಾರಿಸಿ, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ಅಟ್ರಂಗಡ ಮತ್ತು ಮಳವಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಅಟ್ರಂಗಡ ಜಯ ಸಾಧಿಸಿತು. ಅಟ್ರಂಗಡ ಪರ ಮೋಹಿತ್ 1 ಗೋಲು ದಾಖಲಿಸಿದರು. ಮಳ್ಳವಂಡ ತಕ್ಷಕ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ಕಾಯಪಂಡ ಮತ್ತು ಮೇಕೇರಿರ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಮೇಕೇರಿರ ಜಯ ಸಾಧಿಸಿತು. ಮೇಕೇರಿರ ಪರ ಅಭಿನವ್ ಗಣಪತಿ 2, ರೋನಕ್ ತಿಮ್ಮಯ್ಯ, ನಿತಿನ್ ತಮ್ಮಯ್ಯ, ವಿಜು ಚಿಣ್ಣಪ್ಪ ತಲಾ 1 ಗೋಲು ದಾಖಲಿಸಿದರು. ಕಾಯಪಂಡ ಪ್ರತಿಕ್ ಕುಶಾಲಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ನಂಬುಡುಮಾಡ ಮತ್ತು ಅಂಜಪರವಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಅಂಜಪರವಂಡ ಗೆಲುವು ದಾಖಲಿಸಿತು. ಅಂಜಪರವಂಡ ಪರ ಅಭಿನ್ ಚೆಟ್ಟಿಯಪ್ಪ, ರೋಹನ್ ಮಾದಪ್ಪ, ಜತನ್ ದೇವಯ್ಯ, ಉತ್ಸವ್ ಕುಶಾಲಪ್ಪ ಹಾಗೂ ಚಿರಾಗ್ ಚಂಗಪ್ಪ ತಲಾ 1 ಗೋಲು ದಾಖಲಿಸಿದರು. ನಂಬುಡಮಾಡ ಜಮೆಶ್ ಪೂವಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ಅಮ್ಮಣಿಚಂಡ ಮತ್ತು ಅಜ್ಜಮಾಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಅಮ್ಮಣಿಚಂಡ ಗೆಲುವು ದಾಖಲಿಸಿತು. ಅಮ್ಮಣಿಚಂಡ ವಿಘ್ನೇಶ್ ಬೋಪಣ್ಣ ಹಾಗೂ ಸಂಜು ಸೋಮಯ್ಯ ತಲಾ 1 ಗೋಲು ದಾಖಲಿಸಿದರು. ಅಜ್ಜಮಾಡ ಶಿವಾನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ಮೇರಿಯಂಡ ಮತ್ತು ಬೊವ್ವೆರಿಯಂಡ ನಡುವಿನ ಪಂದ್ಯದಲ್ಲಿ 4-2 ಗೋಲುಗಳ ಅಂತರದಲ್ಲಿ ಬೊವ್ವೇರಿಯಂಡ ಗೆಲುವು ದಾಖಲಿಸಿತು. ಬೊವ್ವೇರಿಯಂಡ ಪರ ನಿತಿನ್ ಅಪ್ಪಯ್ಯ ಹ್ಯಾಟ್ರಿಕ್ ಗೋಲು ಬಾರಿಸಿದರೆ, ಜಿತನ್ 1 ಗೋಲು ಬಾರಿಸಿದರು. ಮೇರಿಯಂಡ ಪರ ರಾಯಲ್ ಅಯ್ಯಣ್ಣ ಹಾಗೂ ಪವನ್ ಅಯ್ಯಪ್ಪ ತಲಾ 1 ಗೋಲು ಬಾರಿಸಿದರು. ಮೇರಿಯಂಡ ರಾಯನ್ ಅಯ್ಯಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ನೆರವಂಡ ಮತ್ತು ಚೆರುಮಂದಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ನೆರವಂಡ ತಂಡ ಜಯಸಾಧಿಸಿತು. ನೆರವಂಡ ಪರ ಪ್ರಶಾಂತ್ ಹಾಗೂ ಅಪ್ಪಣ್ಣ ತಲಾ 1 ಗೋಲು ದಾಖಲಿಸಿದರು. ಚೆರುಮಂದಂಡ ಶಾನ್ ಕಾವೇರಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ಮುರುವಂಡ ಮತ್ತು ಮಂಡೇಪಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಮಂಡೇಪಂಡ ಗೆಲುವು ಸಾಧಿಸಿತು. ಮಂಡೇಪಂಡ ಪರ ಕವನ್ ಮುತ್ತಪ್ಪ, ದಿಲನ್ ದೇವಯ್ಯ ಹಾಗೂ ಸಜನ್ ಅಚ್ಚಯ್ಯ ತಲಾ 1 ಗೋಲು ದಾಖಲಿಸಿದರು. ಮುರುವಂಡ ಕಾರ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ಪುಲ್ಲಂಗಡ ಮತ್ತು ಸಣ್ಣುವಂಡ ನಡುವಿನ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಸಣ್ಣುವಂಡ ಗೆಲುವು ದಾಖಲಿಸಿತು. ಸಣ್ಣುವಂಡ ಪರ ಮಾದಯ್ಯ 2, ಉತ್ತಪ್ಪ 1 ಗೋಲು ದಾಖಲಿಸಿದರು. ಪುಲ್ಲಂಗಡ ಪರ ಅಪ್ಪಚ್ಚು ಹಾಗೂ ಪೊನ್ನಣ್ಣ ತಲಾ 1 ಗೋಲು ಬಾರಿಸಿದರು. ಪುಲ್ಲಂಗಡ ಅಪ್ಪಚ್ಚು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ಸೋಮೆಯಂಡ ಮತ್ತು ಕಲಿಯಂಡ ನಡುವಿನ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 4-3 ಗೋಲು ಅಂತರದಲ್ಲಿ ಸೋಮೆಯಂಡ ಜಯ ಸಾಧಿಸಿತು. ಕಲಿಯಂಡ ಚಿಣ್ಣಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.