ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಹಲವು ವಾರ್ಡ್‌ಗಳಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಗಳು ಕಳೆದ ವರ್ಷಗಳ ಹಿಂದೆ ಭೂಮಿ ಪೂಜೆ ನೆರವೇರಿಸಿ ರಸ್ತೆ ಅಗೆದು ಕಾಮಗಾರಿ ಪ್ರಾರಂಭಿಸದೆ ಹಾಗೇ ಬಿಟ್ಟಿರುವುದರಿಂದ ಮಳೆಗಾಲದಲ್ಲಿ ರಸ್ತೆಗಳು ಹೊಂಡಗಳಾಗಿ ಮಾರ್ಪಟ್ಟಿವೆ ಎಂದು ಸಾರ್ವಜನಿಕರು ದೂದಪೀರಾ ದರ್ಗಾದ ಹತ್ತಿರ ಮಂಜುನಾಥ ಮಾಗಡಿ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ತಹಸೀಲ್ದಾರ್ ವಾಸುದೇವ ಸ್ವಾಮಿ ಮಾತನಾಡಿ, ಗುತ್ತಿಗೆದಾರರೊಂದಿಗೆ ಈಗ ಮಾತನಾಡಿದ್ದೇನೆ. 2-3 ದಿನಗಳಲ್ಲಿ ಖಡೀಕರಣ ಮಾಡಿ ಮಹರಂ ಹಾಕುವ ಕಾರ್ಯ ಮಾಡಲು ತಿಳಿಸಿದ್ದೇನೆ. ಇಲ್ಲವಾದಲ್ಲಿ ಅವರಿಗೆ ನೊಟೀಸ್ ನೀಡಿ ಕ್ರಮ ಕೈಗೊಳ್ಳಲಾಗುವುದು. ಮಳೆಗಾಲದ ನಂತರ ಡಾಂಬರ್ ಹಾಕುವ ಕಾರ್ಯ ಮಾಡುವಂತೆ ತಿಳಿಸಲಾಗಿದೆ ಎಂದು ಹೇಳಿದ್ದೇನೆ ಎಂದರು. ಅಷ್ಟಕ್ಕೆ ಸುಮ್ಮನಾದ ಪ್ರತಿಭಟನಾಕಾರರು ಪ್ರತಿಭಟನೆ ವಾಪಾಸ್ ಪಡೆದುಕೊಂಡ ಘಟನೆ ನಡೆಯಿತು.
ಈ ವೇಳೆ ಸುಭಾನಸಾಬ್ ಹೊಂಬಳ, ಆಭಯಕುಮಾರ ಜೈನ್, ಚಂದ್ರು ಮಾಗಡಿ, ಮಲ್ಲಿಕಾರ್ಜುನ ಅಣ್ಣಿಗೇರಿ, ಮುತ್ತು ನೀರಲಗಿ, ಮಲ್ಲಿಕಾರ್ಜುನ ನಿರಾಲೋಟಿ, ಮಹಾಂತೇಶ ಉಮಚಗಿ, ಮಲ್ಲು ಅಂಕಲಿ, ಫಕ್ಕೀರೇಶ ಭಜಂತ್ರಿ, ಹುಲಿಗೆಪ್ಪ ಭಜಂತ್ರಿ, ಗಿರಿಜಮ್ಮ ಕರೆಯತ್ತಿನ, ನೀಲವ್ವ ಕೊಂಗಿ, ಶೈಲವ್ವ ಹಳ್ಳಿಕೇರಿ, ನೀಲವ್ವ ಹಳ್ಳಿಕೇರಿ, ಪಾರ್ವತೆವ್ವ ಬೇವಿನಮರದ, ಶ್ವೇತಾ ರೋಣದ, ಚನ್ನವ್ವ ರೋಣದ, ಲಕ್ಷ್ಮವ್ವ ಬೇವಿನಮರದ, ಶೇಕವ್ವ ನೂಲ್ವಿ, ನೀಲವ್ವ ಹುಲಕೋಟಿ ಇದ್ದರು.