ಕೋಲ್ಕತಾ ಐಐಎಂ ಬಲಾತ್ಕಾರ ಪ್ರಕರಣದ ಆರೋಪಿ ಮುಧೋಳದವ!

KannadaprabhaNewsNetwork |  
Published : Jul 18, 2025, 12:52 AM ISTUpdated : Jul 18, 2025, 05:53 AM IST
ಆರೋಪಿ ಪರಮಾನಂದ ಜೈನ್‌ | Kannada Prabha

ಸಾರಾಂಶ

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದ ಐಐಎಂನಲ್ಲಿ ಇತ್ತೀಚೆಗೆ ನಡೆದಿದ್ದ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಪರಮಾನಂದ ಜೈನ್ ಅಲಿಯಾಸ್‌ ಮಹಾವೀರ್‌ ಟೋಪಣ್ಣನವರ್‌ ಬಾಗಲಕೋಟೆ ಜಿಲ್ಲೆಯ ಮುಧೋಳ ಮೂಲದವನು ಎಂದು ತಿಳಿದುಬಂದಿದೆ.

 ಕೋಲ್ಕತಾ/ಬಾಗಲಕೋಟೆ :  ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದ ಐಐಎಂನಲ್ಲಿ ಇತ್ತೀಚೆಗೆ ನಡೆದಿದ್ದ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಪರಮಾನಂದ ಜೈನ್ ಅಲಿಯಾಸ್‌ ಮಹಾವೀರ್‌ ಟೋಪಣ್ಣನವರ್‌ ಬಾಗಲಕೋಟೆ ಜಿಲ್ಲೆಯ ಮುಧೋಳ ಮೂಲದವನು ಎಂದು ತಿಳಿದುಬಂದಿದೆ.

ಈ ನಡುವೆ ಅತ್ಯಾಚಾರದ ಆರೋಪ ಮಾಡಿದ್ದ ಯುವತಿ ಪ್ರಕರಣದ ವಿಚಾರಣೆಗೆ ಸೂಕ್ತ ಯುವತಿ ಸಹಕಾರ ನೀಡುತ್ತಿಲ್ಲ, ಜೊತೆಗೆ ಮ್ಯಾಜಿಸ್ಟ್ರೇಟ್‌ ಮುಂದೆ ಹೇಳಿಕೆ ನೀಡಲೂ ಗೈರಾಗಿದ್ದಾಳೆ. ಹೀಗಾಗಿ ಇಡೀ ಪ್ರಕರಣ ಮತ್ತಷ್ಟು ಗೋಜಲಾಗಿ ಹೊರಹೊಮ್ಮಿದೆ.

ಏನಿದು ಪ್ರಕರಣ?:

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ನಿವಾಸಿ ಪರಮಾನಂದ ಜೈನ್‌, ಐಐಎಂ ಕೋಲ್ಕತಾದಲ್ಲಿ 2ನೇ ವರ್ಷದ ಎಂಬಿಎ ಓದುತ್ತಿದ್ದಾನೆ. ಕಳೆದ ಜು.11ರಂದು ಈತ ಕೌನ್ಸೆಲಿಂಗ್‌ ಸೇವೆ ನೀಡುವ 20 ವರ್ಷದ ಯುವತಿಯನ್ನು ಕಾಲೇಜಿನ ಕ್ಯಾಂಪಸ್‌ನಲ್ಲೇ ಇರುವ ಬಾಲಕರ ಹಾಸ್ಟೆಲ್‌ಗೆ ಕರೆಸಿಕೊಂಡಿದ್ದ. ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್‌ ಹೆಸರಲ್ಲಿ ಕರೆಸಿಕೊಂಡಿದ್ದ ಜೈನ್‌, ಅಲ್ಲಿ ಯುವತಿಗೆ ನಿದ್ರೆ ಮಾತ್ರೆ ಬೆರೆಸಿದ ತಂಪು ಪಾನೀಯ ನೀಡಿ ಆಕೆ ನಿದ್ರೆಗೆ ಜಾರಿದ ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂಬ ಆರೋಪ ಮಾಡಲಾಗಿತ್ತು. ಘಟನೆ ಸಂಬಂಧ ಜೈನ್‌ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದರು.

ಆದರೆ ಇದಾದ ಬಳಿಕ ಯುವತಿ ಮತ್ತು ಆಕೆಯ ತಂದೆ ಇಬ್ಬರೂ ತಾವೇ ಮಾಡಿದ್ದ ಅತ್ಯಾಚಾರದ ಆರೋಪ ತಳ್ಳಿಹಾಕಿದ್ದರು. ಆದರೂ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಪೊಲೀಸರು ಎಫ್‌ಐಆರ್‌ನಲ್ಲಿ, ಆರೋಪಿ ಮತ್ತು ಸಂತ್ರಸ್ತೆ ಜಾಲತಾಣದಲ್ಲಿ ಪರಿಚಯವಾಗಿದ್ದರು. ಇದೇ ಪರಿಚಯದಲ್ಲಿ ಆತ ಆಕೆಯನ್ನು ಹಾಸ್ಟೆಲ್‌ಗೆ ಕರೆಸಿಕೊಂಡಿದ್ದ. ಹಾಸ್ಟೆಲ್ ಪ್ರವೇಶದ ವೇಳೆ ರಿಜಿಸ್ಟ್ರಿಯಲ್ಲಿ ಹೆಸರು ನಮೂದು ಮಾಡದಂತೆ ಯುವತಿಗೆ ಸೂಚಿಸಿದ್ದ ಎಂದು ದಾಖಲಿಸಿದ್ದಾರೆ. ಇನ್ನೊಂದೆಡೆ ವಿಚಾರಣೆ ವೇಳೆ ಆರೋಪಿ, ನಿದ್ರೆ ಮಾತ್ರೆ ತಂದು ಆಕೆಗೆ ನೀಡಿದ್ದನ್ನು ಒಪ್ಪಿಕೊಂಡಿದ್ದಾನೆ. ಆದರೆ ತನ್ನ ಕೌನ್ಸೆಲಿಂಗ್‌ಗೆ ಬಂದಿದ್ದ ಯುವತಿ ಮೇಲೆ ಅತ್ಯಾಚಾರ ಮಾಡಿದ್ದು ಏಕೆ ಎಂಬ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಹೇಳಿದ್ದಾರೆ.

ಈ ಪ್ರಕರಣವನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಮಮತಾ ಬ್ಯಾನರ್ಜಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು.

ನನ್ನ ಮಗ ಮುಗ್ಧ:ಈ ನಡುವೆ ಮಗನ ಬಂಧನದ ಕುರಿತು ಆಘಾತ ವ್ಯಕ್ತಪಡಿಸಿರುವ ಆತನ ತಾಯಿ, ‘ಘಟನೆ ನಡೆದ ದಿನ ರಾತ್ರಿ ಸುಮಾರು 11 ಗಂಟೆಗೆ ಅವನ ಗೆಳೆಯ ಕರೆ ಮಾಡಿದ. ನನ್ನ ಮಗನನ್ನು ಪೊಲೀಸರು ಬಂಧಿಸಿರುವುದಾಗಿ ಮತ್ತು ಆ ಬಗ್ಗೆ ಆತನಿಗೆ ಏನೂ ತಿಳಿದೇ ಇಲ್ಲವೆಂದು ಹೇಳಿದ. ನಮ್ಮ ಮಗನನ್ನು ಯಾಕೆ ಬಂಧಿಸಿದ್ದಾರೆಂಬ ಸಣ್ಣ ಸುಳಿವೂ ನಮಗಿಲ್ಲ. ಅವನು ಪದವಿ ಕೊನೆಯ ವರ್ಷದಲ್ಲಿ ಓದುತ್ತಿದ್ದ. ನನ್ನ ಮಗ ಮುಗ್ಧ. ಅವನು ಓದಲು ಇಷ್ಟು ದೂರ ಬಂದಿದ್ದಾನೆ. ಅವನು ಎಂದಿಗೂ ಅಂತಹ ಕೊಳಕು ಕೆಲಸ ಮಾಡುವುದಿಲ್ಲ’ ಎಂದಿದ್ದಾರೆ.

ಏನಿದು ಪ್ರಕರಣ?

- ಕೋಲ್ಕತಾ ಐಐಎಂ ಕ್ಯಾಂಪಸ್‌ನಲ್ಲೇ ಇರುವ ಬಾಲಕರ ಹಾಸ್ಟೆಲ್‌ನಲ್ಲಿ 20 ವರ್ಷದ ಯುವತಿ ಮೇಲೆ ಅತ್ಯಾಚಾರ

- ಕೌನ್ಸೆಲಿಂಗ್‌ ಹೆಸರಲ್ಲಿ ಕರೆಸಿಕೊಂಡು ನಿದ್ರೆ ಮಾತ್ರೆ ಮಿಶ್ರಿತ ತಂಪುಪಾನೀಯ ಕುಡಿಸಿ ರೇಪ್‌ ಎಸಗಿದ ಆರೋಪ- ಪ್ರಕರಣದಲ್ಲಿ ಪರಮಾನಂದ ಜೈನ್‌ ಬಂಧನ. ಈಗ ಬಾಗಲಕೋಟೆ ಜಿಲ್ಲೆಯ ಮುಧೋಳದವನು ಎಂಬುದು ಪತ್ತೆ- ಐಐಎಂ ಕೋಲ್ಕತಾದಲ್ಲಿ 2ನೇ ವರ್ಷದ ಎಂಬಿಐ ಓದುತ್ತಿರುವ ಪರಮಾನಂದ. ಈಗಾಗಲೇ ಪೊಲೀಸರಿಂದ ಅರೆಸ್ಟ್‌- ನನ್ನ ಮಗ ಮುಗ್ಧ. ಆತ ಎಂದಿಗೂ ಇಂತಹ ಕೊಳಕು ಕೆಲಸ ಮಾಡುವುದಿಲ್ಲ ಎಂದು ಪರಮಾನಂದ ತಾಯಿ ಕಣ್ಣೀರು- ಆರೋಪಿ- ಸಂತ್ರಸ್ತೆ ಜಾಲತಾಣದಲ್ಲಿ ಪರಿಚಿತರು. ಆತನೇ ಆಕೆಯನ್ನು ಹಾಸ್ಟೆಲ್‌ಗೆ ಕರೆಸಿಕೊಂಡಿದ್ದ: ಎಫ್‌ಐಆರ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಅಂಚೆ ಕಚೇರಿಗಳ ಬಲವರ್ಧನೆ ವಿಷಯ ಪ್ರಸ್ತಾಪಿಸಿದ ಸಂಸದ ಬಿವೈಆರ್‌
ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ: ಡಾ.ನೂರಲ್ ಹುದಾ ಕರೆ