ಮಠ ತೊರೆದಿದ್ದ ಮಹಮ್ಮದ್ ನಿಸಾರ್ ಕಾಮಕಾಂಡ ಬಯಲು

KannadaprabhaNewsNetwork |  
Published : Aug 07, 2025, 12:46 AM ISTUpdated : Aug 07, 2025, 01:53 PM IST
ಧರ್ಮ ಬಯಲಾಗಿ ಮಠ ತೊರೆದಿದ್ದ ಸ್ವಾಮೀಜಿ ಕಾಮಕಾಂಡ ಬಯಲು | Kannada Prabha

ಸಾರಾಂಶ

ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ಗುರು ಮಲ್ಲೇಶ್ವರ ಮಠದ ಸ್ವಾಮೀಜಿಯಾಗಿದ್ದ ಧರ್ಮ ಬಯಲಾಗಿ ಮಠ ತೊರೆದಿದ್ದ  ಮಹಮ್ಮದ್ ನಿಸಾರ್   ಸಲಿಂಗ ಕಾಮ, ಮದ್ಯ ಸೇವನೆ ಪೋಟೋ, ವಿಡಿಯೋ ಸಹ ವೈರಲ್ ಆಗುವ ಮೂಲಕ ಮತ್ತೊಂದು ತಿರುವು ಪಡೆದುಕೊಂಡಿದೆ.

 ಚಾಮರಾಜನಗರ :  ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ಗುರು ಮಲ್ಲೇಶ್ವರ ಮಠದ ಸ್ವಾಮೀಜಿಯಾಗಿದ್ದ ಧರ್ಮ ಬಯಲಾಗಿ ಮಠ ತೊರೆದಿದ್ದ ಯುವ ಸನ್ಯಾಸಿ ನಿಜಲಿಂಗ ಸ್ವಾಮೀಜಿ (ಮಹಮ್ಮದ್ ನಿಸಾರ್) ಕೆಲ ದಿನಗಳ ಹಿಂದೆಯಷ್ಟೇ ಮುಸ್ಲಿಂ ಟೋಪಿಯನ್ನು ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದಾನೆ.

 ಸಲಿಂಗ ಕಾಮ, ಮದ್ಯ ಸೇವನೆ ಪೋಟೋ, ವಿಡಿಯೋ ಸಹ ವೈರಲ್ ಆಗುವ ಮೂಲಕ ಮತ್ತೊಂದು ತಿರುವು ಪಡೆದುಕೊಂಡಿದೆ. ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರದ ಮಹಮ್ಮದ್ ನಿಸಾರ್ (22) ಬಸವ ತತ್ವಕ್ಕೆ ಆಕರ್ಷಿತರಾಗಿ 2021ರಲ್ಲಿ ಲಿಂಗ ದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದನು. ಇದಾದ ನಂತರ, ಕಳೆದ ಒಂದೂವರೆ ತಿಂಗಳಿನ ಹಿಂದೆ ಚೌಡಹಳ್ಳಿ ಮಠದ ಗುರುವಾಗಿ ಬಂದಿದ್ದನು.

ಕಳೆದ ಭಾನುವಾರ ಪೂರ್ವಶ್ರಾಮದ ಧರ್ಮ ಬಯಲಾಗಿದ್ದರಿಂದ ಹಲವರು ಆಕ್ಷೇಪ ಹೊರಹಾಕಿದ್ದರಿಂದ ಮಠ ತೊರೆದಿದ್ದನು. ಅದರೀಗ ಲಿಂಗಾಯತ ಮಠಕ್ಕೆ ಗುರುವಾಗಿ ಬಂದು ಮುಸ್ಲಿಂ ಟೋಪಿ ಆರ್ಡರ್ ಮಾಡಿರುವುದಕ್ಕೆ ಭಕ್ತರು ಹೌಹಾರಿದ್ದಾರೆ. ಲಿಂಗಾಯತ ದೀಕ್ಷೆ ಪಡೆದ ಬಳಿಕವು ಪೂರ್ವಾಶ್ರಮದ ಧರ್ಮ ಬಿಟ್ಟಿರಲಿಲ್ಲವೇ ಎಂಬ ಟೀಕೆಯೂ ವ್ಯಕ್ತವಾಗಿದೆ.ನಿಜಲಿಂಗ ಸ್ವಾಮೀಜಿ ಚೌಡಹಳ್ಳಿ ಮಠಕ್ಕೆ ಗುರುವಾಗಿ ಬಂದರೂ, ಲಿಂಗಾಯತ ಧರ್ಮವನ್ನು ಅನುಸರಿಸುತ್ತೇನೆಂದು ಹೇಳಿಕೊಂಡು ಅನ್ಯಧರ್ಮವನ್ನು ಅನುಸರಿಸುತ್ತಿದುದು, ನಮಾಜ್ ಮಾಡುತ್ತಿದುದು ಎಷ್ಟು ಸರಿ ಎಂದು ಗ್ರಾಮಸ್ಧರು ಪ್ರಶ್ನಿಸುತ್ತಿದ್ದಾರೆ. 

ಇನ್ನು ಲಿಂಗದೀಕ್ಷೆ ಪಡೆದು ಮಠಾಧೀಶನಾಗಿದ್ದ ಮುಸ್ಲಿಂ ವ್ಯಕ್ತಿಯ ಸಲಿಂಗ ಕಾಮಪುರಾಣ ಬಯಲಾಗಿದೆ. ಯುವಕನೊಬ್ಬನ ಜೊತೆ ಕಾಮಲೀಲೆಯ ವಿಡಿಯೋ ಬಹಿರಂಗವಾಗಿದೆ. ಕುಡಿದು ಮಹಮದ್ ನಿಸಾರ್ ತೂರಾಡುತ್ತಿದ್ದಾರೆ. ಮಠಾಧೀಶನಾಗಿದ್ದ ಮಹಮದ್ ನಿಸಾರ್ ತನ್ನದೇ ಮೊಬೈಲ್ ‌ನಲ್ಲಿ ಇಟ್ಟುಕೊಂಡಿದ್ದ ಅಶ್ಲೀಲ ಚಿತ್ರಗಳು ಬಹಿರಂಗವಾಗಿವೆ. ಸ್ವಾಮೀಜಿಯ ಅಶ್ಲೀಲ ವೀಡಿಯೋ, ಚಿತ್ರಗಳನ್ನು ನೋಡಿ ಗ್ರಾಮಸ್ಥರು ಶಾಕ್ ಆಗಿದ್ದಾರೆ. ನಿಜಲಿಂಗ ಸ್ವಾಮೀಜಿ ನಿಜ ಸ್ವರೂಪ ತಿಳಿದು ವಾಪಾಸ್ ಕಳುಹಿಸಿದ್ದ ಗ್ರಾಮಸ್ಥರಿಗೆ ಮುಸ್ಲಿಂರು ಧರಿಸುವ ಟೋಪಿ ಆನ್ ಲೈನ್ ಮೂಲಕ ತರಿಸಿರುವ ವಿಚಾರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಕೆಲ ವಿಡಿಯೋ, ‌ಪೋಟೋಗಳು ಸಹ ವೈರಲ್ ಆಗಿದ್ದು, ಮಠಕ್ಕೆ ಬರುವ ಹುಡುಗರು ತೆಳ್ಳಗಿದ್ದರೇ ಕುಡಿಯಿರಿ, ಮಾಂಸಹಾರ ಸೇವಿಸಿ ದಪ್ಪವಾಗುತ್ತೀರಾ ಎಂದು ಉಪದೇಶಿಸುತ್ತಿದ್ದ ಆರೋಪ ಕೂಡ ಕೇಳಿಬರುತ್ತಿದೆ.

ಇನ್ನು ಈ ರೀತಿಯ ಸ್ವಾಮೀಜಿಯ ನಡವಳಿಕೆಯ ಬಗ್ಗೆ ಕಾನೂನು ಹೋರಾಟ ಮಾಡಿ ತಕ್ಕ ಶಿಕ್ಷೆಯಾಗುವಂತೆ ಮಾಡಲು ರಾಜ್ಯ ಕಮೀಟಿಗೆ ಪತ್ರ ಬರೆಯಲು ವೀರಶೈವ ಮಹಾಸಭಾ ನಿರ್ಧರಿಸಿದೆ. ಬಸವ ದೀಕ್ಷೆ ಪಡೆದು ಅನೈತಿಕವಾಗಿ ನಡೆದುಕೊಳ್ಳುವ ಮೂಲಕ ಅನ್ಯಾಯವೇಸಗುವ ಕಾರ್ಯ ಮಾಡಿದ್ದಾರೆ ಎಂದು ಮುಡಲಪುರ ನಂದೀಶ್ ಆರೋಪಿಸಿದ್ದಾರೆ. ಒಟ್ಟಿನಲ್ಲಿ ಬಸವ ತತ್ವ ಪಾಲನೆ ಬಗ್ಗೆ ಜಗತ್ತೇ ಮೆಚ್ಚುತ್ತಿರುವಾಗ ದೀಕ್ಷೆ ಪಡೆದು ಅನಾಗರಿಕನಾಗಿ ಪಡೆದುಕೊಂಡಿರುವುದು ನಿಜಕ್ಕೂ ದುರಂತ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ