ಕನ್ನಡಪ್ರಭವಾರ್ತೆ ಸೋಮವಾರಪೇಟೆ
ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಬಿಟಿಸಿಜಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ.100 ರಷ್ಟು ಫಲಿತಾಂಶ ಗಳಿಸಿದೆ. 14 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ವಾಣಿಜ್ಯ ವಿಭಾಗದಲ್ಲಿ 37 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಓರ್ವ ವಿದ್ಯಾರ್ಥಿ ಅನುತ್ತೀರ್ಣಗೊಂಡಿದ್ದು, ಶೇ.97.02 ರಷ್ಟು ಫಲಿತಾಂಶದೊಂದಿಗೆ ಒಟ್ಟಾರೆ ಕಾಲೇಜಿಗೆ ಶೇ.97.14 ಫಲಿತಾಂಶ ದೊರೆತಿದೆ.ವಿಜ್ಞಾನ ವಿಭಾಗದಲ್ಲಿ ಮಹಮ್ಮದ್ ಇರ್ಮಾನ್(ಶೇ.96) , ಎಸ್.ವೈ.ಹಿಮಾನಿ(ಶೇ.94.33 ), ವೈ.ಎಸ್.ಧನ್ಯ(ಶೇ.93) , ವಾಣಿಜ್ಯ ವಿಭಾಗದ ಕೆ.ಎಂ.ಸೃಷ್ಟಿ(ಶೇ..95), ಡಿ.ಕೆ.ಸ್ನೇಹ(ಶೇ.94) , ಎಂ.ಡಿ.ಖುಷಿ(ಶೇ.93.05) , ಕೆ.ಯು.ಸಚಿನ್(91.05) ಅಂಕ ಪಡೆದಿದ್ದಾರೆ.
ಸಂತಜೋಸೆಫರ ಪಿಯು ಕಾಲೇಜಿಗೆ ಶೇ. 88.49 ಫಲಿತಾಂಶ ದೊರೆತ್ತಿದೆ. ವಾಣಿಜ್ಯ ವಿಭಾಗದಲ್ಲಿ 73 ವಿದ್ಯಾರ್ಥಿಗಳಲ್ಲಿ 70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.95.89 ಹಾಗು ವಿಜ್ಞಾನ ವಿಭಾಗದಲ್ಲಿ 40 ವಿದ್ಯಾರ್ಥಿಗಳ ಪೈಕಿ 30 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 75 ಫಲಿತಾಂಶ ದೊರೆತ್ತಿದೆ.ವಿಜ್ಞಾನ ವಿಭಾಗದಲ್ಲಿ ಎಂ.ದಿವಿನ್(ಶೇ.95.05) , ಎನ್.ಕೆ.ನಿತೀನ್ ಕುಮಾರ್(ಶೇ.93.83) , ಪ್ರತೀಕ್ ಶೆಟ್ಟಿ(ಶೇ.87.83 ), ವಾಣಿಜ್ಯ ವಿಭಾಗದಲ್ಲಿ ವಿಭಾಗದಲ್ಲಿ ಎಸ್.ಎನ್.ಧನ್ಯ( ಶೇ.95) , ಬಿ.ಇ.ರಶೀದ(ಶೇ.94.16) , ಎಚ್.ಎಸ್.ಪಲ್ಲವಿ(ಶೇ.93.66 ) ಅಂಕ ಗಳಿಸಿದ್ದಾರೆ.
ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇಕಡಾವಾರು 71.21 ಫಲಿತಾಂಶ ದೊರೆತ್ತಿದೆ. ವಾಣಿಜ್ಯ ವಿಭಾಗದಲ್ಲಿ 42 ವಿದ್ಯಾರ್ಥಿಗಳು ಪರೀಕ್ಷಗೆ ಹಾಜರಾಗಿದ್ದು 32 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ. 76.19 ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 15 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ.62.5 ಫಲಿತಾಂಶ ದೊರೆತ್ತಿದೆ. ವಾಣಿಜ್ಯ ವಿಭಾಗದಲ್ಲಿ ಪಿ.ಸಿ.ದೀಕ್ಷಿತಾ(ಶೇ.80.33) , ಎಂ.ಶ್ರವಣ್(ಶೇ.87.83) , ಫಾತಿಮತ್ ಸಜೀನ(ಶೇ.87.33 ), ನವಜೀತ್(ಶೇ.85.16 ) ಅಂಕಗಳಿಸಿದ್ದಾರೆ.ಐಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಶೇ. 69 ಫಲಿತಾಂಶ ಬಂದಿದೆ.