ಮುಸ್ಲಿಂರೇ ಇಲ್ಲದ ಊರಲ್ಲಿ ಮೊಹರಂ ಉತ್ಸವ

KannadaprabhaNewsNetwork |  
Published : Jun 27, 2026, 12:15 AM IST
೨೬ಶಿರಾ೨: ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಕರೆ ಮಾದೇನಹಳ್ಳಿ ಗ್ರಾಮದಲ್ಲಿ ಅದ್ದೂರಿ ಮೊಹರಂ ಉತ್ಸವ ನೆರವೇರಿತು. | Kannada Prabha

ಸಾರಾಂಶ

ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲದ ಊರಲ್ಲಿ ಅದ್ಧೂರಿ ಮೊಹರಂ ಉತ್ಸವ ನಡೆದಿದ್ದು ಧಾರ್ಮಿಕ ಸಾಮರಸ್ಯಕ್ಕೆ ವೇದಿಕೆಯಾಯಿತು.

ಕನ್ನಡಪ್ರಭ ವಾರ್ತೆ ಶಿರಾ

ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲದ ಊರಲ್ಲಿ ಅದ್ಧೂರಿ ಮೊಹರಂ ಉತ್ಸವ ನಡೆದಿದ್ದು ಧಾರ್ಮಿಕ ಸಾಮರಸ್ಯಕ್ಕೆ ವೇದಿಕೆಯಾಯಿತು. ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಕರೆ ಮಾದೇನಹಳ್ಳಿ ಗ್ರಾಮದಲ್ಲಿ ಈ ಆಚರಣೆ ನಡೆದಿದ್ದು ಎಲ್ಲ ಹಿಂದೂಗಳು ಸೇರಿ ಉತ್ಸವವನ್ನು ನಡೆಸಿಕೊಡುವ ಮೂಲಕ ಹಲವು ದಶಕಗಳಿಂದ ನಡೆದುಕೊಂಡು ಬಂದಿರುವ ಉತ್ಸವಕ್ಕೆ ಹೊಸ ಮೆರಗು ನೀಡಿದರು.

ಗ್ರಾಮದ ಮಧ್ಯಭಾಗದಲ್ಲಿ ಬಾಬಯ್ಯನ ದೇವಸ್ಥಾನದಲ್ಲಿ ೯ ದಿನಗಳ ಕಾಲ ಪಾಂಜಾಗಳನ್ನು ಪ್ರತಿಷ್ಠಾಪಿಸಿ ಪೂಜಿಸಿ ೯ನೇ ದಿನವೂ ಅನ್ನಸಂತರ್ಪಣೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶುಕ್ರವಾರ ಬೆಳಗಿನ ಜಾವ ಗ್ರಾಮಸ್ಥರು ಭಕ್ತಿ ಭಾವದಿಂದ ಅಗ್ನಿಕೊಂಡ ಸೇವೆ ನೆರವೇರಿಸಿದರು. ಮುಸ್ಲಿಮರೇ ಇಲ್ಲದಿದ್ದರೆ ಸಹ ಇಲ್ಲಿನ ಎಲ್ಲಾ ಜಾತಿ ಜನಾಂಗದ ಜನರು ಬಾಬಯ್ಯನನ್ನು ಭಕ್ತಿ ಭಾವದಿಂದ ನಮಿಸಿ ಪೂಜಿಸಿದರು. ಶುಕ್ರವಾರ ಬಾಬಯ್ಯನ ಉತ್ಸವ ಮೂರ್ತಿಯನ್ನು ಗ್ರಾಮದ ಬೀದಿಗಳಲ್ಲಿ ವಿಶೇಷ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಿ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿಗ್ರಾಮದ ಮುಖಂಡರಾದ ಜಯಲಿಂಗೇಗೌಡ, , ರಾಮಲಿಂಗಪುರ ವಿ ಎಸ್ ಎಸ್ ಎನ್ ಉಪಾಧ್ಯಕ್ಷ ಕರೆ ಮಾದೇನಹಳ್ಳಿ ನಾಗರಾಜ್, ಲೋಕೇಶ್, ಜಗದೀಶ್, ಚಂದ್ರಶೇಖರ್, ಬಂಡಿ ರಂಗಪ್ಪ , ಸಣ್ಣರಂಗಪ್ಪ, ನಿಂಗಯ್ಯ, ಶಿವಣ್ಣ, ಲಕ್ಷ್ಮಯ್ಯ, ಸೋಮಶೇಖರ್, ಬಾಬಯ್ಯಾ, ದೇವಸ್ಥಾನ ಕಮಿಟಿ ಅಧ್ಯಕ್ಷ ಜಯರಾಮಣ್ಣ, ಗೌರವಾಧ್ಯಕ್ಷ ರಾಮಚಂದ್ರಪ್ಪ, ಪುಜಾರ್ ಬಾಬಣ್ಣ, ಉಪಾಧ್ಯಕ್ಷರು ಶಿವಣ್ಣ, ಕಾರ್ಯದರ್ಶಿ ಬಸವರಾಜ್, ಖಜಾಂಚಿ ರಮೇಶ್, ಸಂಘಟನೆ ಕಾರ್ಯದರ್ಶಿ ಉಮೇಶ್, ಮಹಾಲಿಂಗಪ್ಪ , ರಾಮು, ದಯಾನಂದ್, ರಾಮಣ್ಣ, ಮಲ್ಲೇಶ್, ಮಾಂತೇಶ, ಬಸವರಾಜ್, ನವೀನ್, ಸುರೇವಣ್ಣ, ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ
ಪೊಲೀಸರಿಂದ ಅಕ್ರಮ ಕೈ ಕೋಳ: ಮಾನನಷ್ಟ ಮೊಕದ್ದಮೆ